ಮರಾಠಿ ಆಡಳಿತ ಭಾಷೆಯಾಗಿದ್ದನ್ನು ಖಂಡಿಸಿ ಹೋರಾಡಿದವರು ದಿ.ಬಾಬುರಡ್ಡಿಯವರು: ತುಂಗಳ
ಜಮಖಂಡಿ : 9-1ಶ್ರೇಷ್ಠವಾಗಿ, ನಿರ್ಭೀತ ಪತ್ರಕರ್ತ ಮತ್ತು ರಾಜಕಾರಣಿಯಾಗಿ ಸಾಮಾಜಿಕ ಕಳಕಳಿಯೊಂದಿಗೆ ಜಮಖಂಡಿಯಲ್ಲಿ ಕನ್ನಡ ಸಂಘಟನೆಯನ್ನು ಸ್ಥಾಪಿಸುವ ಜೊತೆಗೆ ಮರಾಠಿ ಆಡಳಿತ ಭಾಷೆಯಾಗಿದ್ದನ್ನು ಖಂಡಿಸಿ ಹೋರಾಟವನ್ನು ಮಾಡಿದ ನಮ್ಮ ತಂದೆಯವರಾದ ದಿ,ಬಾಬುರಡ್ಡಿ ತುಂಗಳ ಎಂದು ಡಾ,ವಿಜಯಲಕ್ಷ್ಮೀ ತುಂಗಳ ಹೇಳಿದರು.
ತಾಲೂಕಿನ ಬಿದರಿ ಗ್ರಾಮದ ಕುಮಾರೇಶ್ವರ ಶಾಲೆಯ ಆವರಣದಲ್ಲಿ ಇರುವ ದಿ,ಬಾಬುರಡ್ಡಿ ತುಂಗಳ ಅವರ ನಾಲ್ಕನೇಯ ಪುಣ್ಯಾಸ್ಮರಣೆಯ ಅಂಗವಾಗಿ ಕಂಚಿನ ಮೂರ್ತಿಗೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದರು.
ಜಮಖಂಡಿಯಲ್ಲಿ ಮರಾಠಿ ಭಾಷೆಯಲ್ಲಿ ಆಡಳಿತಗಳು ನಡೆಯುತ್ತಿದ್ದವು. ಹೀಗಾಗಿ ಪುರಸಭೆಯಲ್ಲಿ ಕನ್ನಡ ಭಾಷೆಯಲ್ಲಿ ಆಡಳಿತ ನಡೆಸಲು ಪ್ರಾರಂಭ ಮಾಡುವಂತೆ ಮಾಡಿ, ಮರಾಠಿ ಫಲಕಗಳನ್ನು ಬದಲಾಯಿಸಿ ಕನ್ನಡ ಫಲಕಗಳನ್ನು ಅಳವಡಿಸುವಂತೆ ಹೋರಾಟವನ್ನು ನಡೆಸಿದವರು. ಸಮಾಜದಲ್ಲಿ ಅಂಕು,ಡೊಂಕುಗಳನ್ನು ತಿದ್ದುವ ತಮ್ಮ ಪತ್ರಿಕೆಯ ತಲೆ ಬರಹಗಳ ಮೂಲಕ ಮತ್ತು ಸುದ್ದಿ ಬರೆಯುವದೊಂದಿಗೆ ಸರಕಾರವನ್ನು ಎಚ್ಚರಿಸುವ ಕೆಲಸವನ್ನು ಮಾಡುತ್ತಿದ್ದರು ಎಂದರು.
ಕನ್ನಡ ಮರಾಠಿ ಚಳುವಳಿಯಲ್ಲಿ ಮಹಾರಾಷ್ಟ್ರದಿಂದ ನಿರಾಶ್ರಿತರಾಗಿ ಬಂದ ಗಡಿಭಾಗದ ಕನ್ನಡಿಗರ ರಕ್ಷಣೆಗೆ ನಿಂತು ಮರಾಠಿ ಡಿ.ವಾಯ್.ಎಸ್.ಪಿ.ಯೊಂದಿಗೆ ಜಗಳವಾಗಿ ಬಿಜಾಪುರದ ದರ್ಗಾ ಜೈಲು ಸೇರಿ. ಕನ್ನಡಕ್ಕಾಗಿ ಗೋಕಾಕ ಚಳುವಳಿ ನಡೆದಾಗ ಚಳುವಳಿ ತಂಡವನ್ನು ಅವರು ವಿಜಾಪುರ ಜಿಲ್ಲಾ ಕನ್ನಡ ಕ್ರಿಯಾ ಸಮಿತಿ ಅಧ್ಯಕ್ಷರಾಗಿ ಸ್ವಾಗತಿಸಿ.ಡಾ, ರಾಜಕುಮಾರ ಮತ್ತು ಇತರ ಗಣ್ಯರು ಆಗಮಿಸಿದ್ದ ಆ ಅಭೂತಪೂರ್ವ
ಕಾರ್ಯಕ್ರಮ ನಡೆಸಿಕೊಟ್ಟ ದಿಟ್ಟ ಹೋರಾಟಗಾರರು ಆಗಿದರು ಎಂದರು.
ಹಿರಿಯ ಪತ್ರಕರ್ತ ಎಮ್,ಸಿ,ಗೊಂಧಿ, ಶಂಕರ ಹನಗಂಡಿ, ಬಿದರಿ ಕಲ್ಮಠದ ಶಿವಲಿಂಗ ಮಹಾ ಸ್ವಾಮೀಜಿಗಳು ಮಾತನಾಡಿದರು, ಸುಭಾಸ ಸಾಹುಕಾರ, ಗೀತಾ ಸೂರ್ಯವಂಶಿ, ಯಂಕಣ್ಣ ತುಂಗಳ, ಬಸವರಾಜ ಸಾಹುಕಾರ, ಶಿವಯ್ಯ ಹಿರೇಮಠ, ಸಾಗರ ತುಂಗಳು, ಮಾಹಾದೇವಿ ಹುಣಸಿಕಟ್ಟಿ, ಶಾಸಪ್ಪ ಹುಣಸಿಕಟ್ಟಿ,
ಕುಮಾರೇಶ್ವರ ಪೌಢ ಶಾಲಾ ಸಿಬ್ಬಂದಿಗಳು ಹಾಗೂ ಗ್ರಾಮಸ್ಥರರು ಉಪಸ್ಥಿತರಿದರು,