ಮತದಾನ ಜಾಗೃತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಲಕ್ಷ್ಮಣ ಕೆರಳ್ಳಿ
ಲೋಕದರ್ಶನ ವರದಿ
ಕುಕನೂರು 06: ತಾಲೂಕಿನ ಬೆಣಕಲ್ ಗ್ರಾಮ ಪಂಚಾಯತಿ ವತಿಯಿಂದ ಬುಧವಾರರಂದು ಮತದಾನದ ಕುರಿತು ಜಾಗೃತಿ ಜಾತಾ ಕಾರ್ಯಕ್ರಮ ಮತ್ತು ಮೇಣದ ಬತ್ತಿ ಹಚ್ಚುವ ಮೂಲಕ ಜಾಗೃತಿ ಕಾರ್ಯಕ್ರಮ ಲಕ್ಷ್ಮಣ ಕರಳ್ಳಿ ಚಾಲನೆ ನೀಡಿದರು. ಗ್ರಾಮ ಪಂಚಾಯತಿಯ ಸ್ವಚ್ಚ ವಾಹಿನಿಯಲ್ಲಿ ಚುನಾವಣಾ ಜಾಗೃತಿ ಜಿಂಗಲ್ಸ ಗಳ ಮೂಲಕ ಗ್ರಾಮ ಪಂಚಾಯತಿ ವ್ಯಾಪ್ತಿಯ ಬೆಣಕಲ್ ಮತ್ತು ವೀರಾಪೂರ ಗ್ರಾಮಗಳಲ್ಲಿ ಪ್ರಚಾರ ಮಾಡಲಾಯಿತು. ಬೆಣಕಲ್ ಗ್ರಾಮದಲ್ಲಿ ವಿವಿಧ ವಾರ್ಡಗಳಲ್ಲಿ ಮತ್ತು ಗ್ರಾಮ ಪಂಚಾಯತಿ ಆವರಣದಲ್ಲಿ ಮೇಣದ ಬತ್ತಿ ಹಚ್ಚುವ ಮೂಲಕ ಪ್ರಚಾರ ಕೈಗೊಳ್ಳಲಾಯಿತು. ಕಾರ್ಯಕ್ರಮದಲ್ಲಿ ಗ್ರಾಮ ಲೆಕ್ಕಾಧಿಕಾರಿ ಮಮತಾ ಕಾವಾಡಿ, ತಾಲೂಕ ಪಂಚಾಯತಿ ಐ.ಇ.ಸಿ ಸಂಯೋಜಕ ಲಕ್ಷ್ಮಣ ಕೆರಳ್ಳಿ, ಃಈಖಿ ಸಂತೋಷ ದೊಡ್ಮನಿ, ಗ್ರಾಮ ಕಾಯಕ ಮಿತ್ರರಾದ ಸವಿತಾ ಮುತ್ತಾಳ, ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರು, ಗ್ರಾಮಸ್ಥರು ಹಾಜರಿದ್ದರು.