ಕಾರ್ಮಿಕ ನೀತಿ ಉಲ್ಲಂಘನೆ: ವೆಸ್ಟ್ ಕೋಸ್ಟ್ ಪೇಪರ್ ಮಿಲ್‌ನ: ಲಮಾಣಿ
Labor Code Violation: West Coast Paper Mills: Lamani...
ಕಾರವಾರ 03: ದಾಂಡೇಲಿಯ ವೆಸ್ಟ್ ಕೋಸ್ಟ್ ಪೇಪರ್ ಮಿಲ್‌ನ ಗುತ್ತಿಗೆ ಕಾರ್ಮಿಕರು ಯೂನಿಯನ್ ರಚಿಸಿದ ಕಾರಣಕ್ಕೆ ನೋಟೀಸ್ ನೀಡದೆ ವಜಾ ಮಾಡಲಾಗುತ್ತಿದೆ ಎಂದು ಗುತ್ತಿಗೆ ಕಾರ್ಮಿಕ ಮಂಜುನಾಥ ಲಮಾಣಿ ಹೇಳಿದರು.
ಕಾರವಾರದ ಪತ್ರಿಕಾಭವನದಲ್ಲಿ ಬುಧುವಾರ ಪತ್ರಿಕಾಗೋಷ್ಠಿ ಮಾಡಿ ಮಾತನಾಡಿದ ಲಮಾಣಿ , ಪೇಪರ್ ಮಿಲ್‌ನಲ್ಲಿ ಕಳೆದ 15 ವರ್ಷದಿಂದ ಗುತ್ತಿಗೆ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದೇವೆ. 2023 ಫೆ.23 ಕ್ಕೆ ವೇತನದ ಹಿನ್ನಲೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಈ ಬಗ್ಗೆ ಕಾರ್ಮಿಕರಿಗೆ ತಿಳಿಸದ ಹಿನ್ನಲೆಯಲ್ಲಿ ನಾವು ಹೊಸ ಯೂನಿಯನ್ ಮಾಡಿಕೊಂಡಿದ್ದೇವೆ. ಆದರೆ ನಮ್ಮ ಯೂನಿಯನ್‌ಗೆ ಮಾನ್ಯತೆ ಇಲ್ಲವೆಂದು ಆರೋಪಿಸಿ ಯೂನಿಯನ್ ಬರ್ಕಾಸ್ತು ಮಾಡುವಂತೆ ಹೇಳುತ್ತಿದ್ದಾರೆ. ಯಾವುದೇ ನೋಟೀಸ್ ನೀಡದೆ ಕೆಲವರನ್ನು ಕೆಸಲದಿಂದ ವಜಾ ಮಾಡಲಾಗಿದೆ ಎಂದು ಅವರು ಆರೋಪಿಸಿದರು. ವೆಸ್ಟ ಕೋಸ್ಟ ಪೇಪರ್ ಮಿಲ್ ಕಂಪೆನಿಯಲ್ಲಿ ಈಗಾಗಲೇ ಇರುವ ಕಾರ್ಮಿಕ ಯೂನಿಯನ್‌ಗಳು ಕೇವಲ ಅವರ ಲಾಭಕ್ಕಾಗಿ ಮಾತ್ರ ಕೆಲಸ ಮಾಡುತ್ತಾರೆ. ಗುತ್ತಿಗೆದಾರರಿಗೂ ಮಾರ್ಕಿಕರ ಬಗ್ಗೆ ಕಾಳಜಿ ಇಲ್ಲ. ನಮ್ಮನ್ನು ವಜಾಮಾಡಿದ ಬಗ್ಗೆ ಕಾರ್ಮಿಕ ಸಚಿವರು ಹಾಗೂ ಸರಕಾರಕ್ಕೂ ಮನವಿ ಸಲ್ಲಿಸಿದ್ದೇವೆ. ಆದರೆ ಯಾವುದೇ ಪ್ರಯೋಜನವಾಗಿಲ್ಲ. ಈ ಕುರಿತು ಸಭೆ ನಡೆಸಿದರೂ ಪದೇ ಪದೇ ಮುಂದೆ ಹಾಕುತ್ತಿದ್ದಾರೆ ಎಂದರು. ಗುತ್ತಿಗೆ ಕಾರ್ಮಿಕ ರಾಮಚಂದ್ರ ಕಾಂಬಳೆ ಮಾತನಾಡಿ, ಆಡಳಿತ ವರ್ಗ ಹಾಗೂ ಜಂಟಿ ಸಂದಾನ ಸಮಿತಿಯು ತಮಗೆ ಬೇಕಾದ ಹಾಗೆ ನಡೆದುಕೊಳ್ಳುತ್ತಿದ್ದಾರೆ.
ಕಾರ್ಮಿಕ ನೀತಿ ಉಲ್ಲಂಘನೆ ಆಗುತ್ತಿದೆ ಎಂದು ಅಪಾದಿಸಿದರು. ಕಾರ್ಮಿಕರ ಏಳಿಗೆಯ ಬಗ್ಗೆ ಯಾವುದೇ ಕಾಳಜಿ ಇಲ್ಲ. ತಮಗೆ ಬೇಕಾದವರನ್ನು ಖಾಯಂ ಮಾಡುತ್ತಿದ್ದಾರೆ. ಈ ಬಗ್ಗೆ ಜಿಲ್ಲಾಧಿಕಾರಿ , ಜಿಲ್ಲಾ ಕಾರ್ಮಿಕಾಧಿಕಾರಿ ಕ್ರಮ ತೆಗೆದುಕೊಳ್ಳಬೇಕು . ಇದು ಹೀಗೆಯೆ ಮುಂದುವರೆದರೆ ಪ್ರತಿಭಟನೆ ಮಾಡುತ್ತೇವೆ ಎಂದರು. ಶಿವಾಜಿ, ಅಹಮದ್ ಸಾಕಳ್ಳಿ, ಗುರವ ಉಪಸ್ಥಿತರಿದ್ದರು.
ಹೆತ್ತ ವೃದ್ದ ತಾಯಿಯನ್ನೆ ನಿರ್ಜನ ಪ್ರದೇಶಕ್ಕೆ ರಾತ್ರಿ ಎಸೆದು ಹೋದ ಪಾಪಿ ಪುತ್ರ : ಅನ್ನ ನೀರು ಇಲ್ಲದೆ ಈಡಿ ರಾತ್ರಿ ಕಳೆದ ಹಿರಿಯ ಜೀವ
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ 