ಕುವೆಂಪು ಸಂಸ್ಥೆಯ ಸಾಧಕ ವಿದ್ಯಾರ್ಥಿಗಳಿಗೆ ಸನ್ಮಾನ
Kuvempu Institute's meritorious students honored
ತಾಳಿಕೋಟಿ 11: ತಾಲೂಕಿನ ಬಳಗಾನೂರ ಕ್ರಾಸ್ ನಲ್ಲಿರುವ ಕುವೆಂಪು ಗ್ರಾಮೀಣ ಅಭಿವೃದ್ಧಿ ಸಂಸ್ಥೆ(ರಿ) ಇದರ ಅಡಿಯಲ್ಲಿ ನಡೆಯುತ್ತಿರುವ ಕುವೆಂಪು ಶಿಕ್ಷಣ ಸಂಸ್ಥೆಯ ಎಸ್ ಎಸ್ ಎಲ್ ಸಿ ಹಾಗೂ ಪಿಯುಸಿ ವಿದ್ಯಾರ್ಥಿಗಳು ಕಳೆದ ಬಾರಿ ತೋರಿದ ಉತ್ತಮ ಸಾಧನೆಗಾಗಿ ಸನ್ಮಾನಿಸಲಾಯಿತು. ಅಧ್ಯಕ್ಷರಾದ ಬಸವರಾಜ್ ಎನ್.ನಾಯ್ಕೋಡಿ ಹಾಗೂ ಅವರ ಧರ್ಮಪತ್ನಿ ಶಾರದಾ ಬಿ ನಾಯ್ಕೋಡಿ ಇವರನ್ನು ಶೈಕ್ಷಣಿಕ ಸೇವೆಗಾಗಿ ವೇದಿಕೆಯ ಗಣ್ಯರಿಂದ ಸನ್ಮಾನಿಸಿ ಗೌರವಿಸಲಾಯಿತು. ಕಕ್ಕೇರಾ ಭಾವೈಕ್ಯತಾ ಶಿಶುನಾಳ ಶರೀಫ ಮಠದ ಸಂತ ಶ್ರೀ ಶರೀಫ ಶಿವಯೋಗಿಗಳು ಹಾಗೂ ಬಳಗಾನೂರದ ಮಾತೃಶ್ರೀ ಮಂಜುಳಾ ಅಮ್ಮನವರು ಸಾನಿಧ್ಯ ವಹಿಸಿದ್ದರು. ಗಣ್ಯರಾದ ನಿಂಗನಗೌಡ ಪಾಟೀಲ(ಬಳಗಾನೂರ),ಕಾಶಿನಾಥ ತಿ. ಸಜ್ಜನ, ಮಂದಾಕಿನಿ ಷಣ್ಮುಖಪ್ಪ ಅಮ್ಮನವರು, ಉಪಾಧ್ಯಕ್ಷ ಮಧು ಬಿ.ನಾಯ್ಕೋಡಿ, ಪ್ರಧಾನ ಕಾರ್ಯದರ್ಶಿ ಮನು ಬಿ. ನಾಯ್ಕೋಡಿ, ಉಪನ್ಯಾಸಕ ಎಚ್.ವಿ.ಬಾಗೇವಾಡಿ ನಿವೃತ್ತ ಶಿಕ್ಷಕ ಎಂ.ಎಸ್.ಹುಲ್ಲೂರ, ಪ್ರಾಚಾರ್ಯ ಸವಿತಾ ಎಂ.ಕಾಗಿ, ಜಯಶ್ರೀ ಎಂ.ಕಾಗಿ, ಆಡಳಿತ ಮಂಡಳಿ ಸದಸ್ಯರು ಹಾಗೂ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 