ಕೆಪಿಎ ಆಸರೆ ಯೋಜನೆಯ ಬಿತ್ತಿ ಪತ್ರ ಬಿಡುಗಡೆ ಹಾಗೂ ನೋಂದಣಿ ಮಾಡುವ ಸಮಾರಂಭ

ಕೆಪಿಎ ಆಸರೆ ಯೋಜನೆಯ ಬಿತ್ತಿ ಪತ್ರ ಬಿಡುಗಡೆ ಹಾಗೂ ನೋಂದಣಿ ಮಾಡುವ ಸಮಾರಂಭ  KPA Aasare Project Seed Certificate Release and Registration Ceremony

ಲೋಕದರ್ಶನ ವರದಿ 

ಯಮಕನಮರಡಿ  01: ಕರ್ನಾಟಕ ಛಾಯಾಚಿತ್ರ ಗ್ರಾಹಕರ ಜಿಲ್ಲಾ ಮತ್ತು ತಾಲೂಕು ಸಂಘಗಳ ಸಹಯೋಗದಲ್ಲಿ ಸ್ಥಳೀಯ ಪುಣ್ಯ ಸಂಪಾದನ ಹುರಿಸಿಕೊಳ್ಳ ಮಠದಲ್ಲಿ ದಿನಾಂಕ ಒಂದರಂದು ಬಿತ್ತಿ ಪತ್ರ ಬಿಡುಗಡೆ ಸಮಾರಂಭ ಜರಗಿತು ಶ್ರೀಮಠದ ಪೂಜ್ಯರಾದ ಶ್ರೀ ಸಿದ್ದ ಬಸವ ದೇವರು ಸಾನಿಧ್ಯದಲ್ಲಿ ಬಿಡುಗಡೆ ಮಾಡಲಾಯಿತು ಅವರು ದಿವ್ಯ ಸಾನಿಧ್ಯ ವಹಿಸಿ ಮಾತನಾಡುತ್ತಾ ಇತ್ತೀಚಿನ ಆಧುನಿಕ ಯುಗದಲ್ಲಿ ಫೋಟೋಗ್ರಾಫಿ ಬಹಳಷ್ಟು ಅಭಿವೃದ್ಧಿ ಹೊಂದಿದೆ ಹಿಂದಿನ ಕಾಲದಲ್ಲಿ ಹಳ್ಳಿಹಳ್ಳಿ ಗಳಿಗೆ ಸಂಚರಿಸಿ ಫೋಟೋ ತೆಗೆದು ತಮ್ಮ ಉಪಜೀವನ ಸಾಗಿಸುತ್ತಾ ಬಂದಿರುವ ದನ್ನು ಇಲ್ಲಿ ಸ್ಮರಿಸಬಹುದಾಗಿದೆ ಆದರೆ ಇಂದಿನ ದಿನಮಾನಗಳಲ್ಲಿ ಫೋಟೋಗ್ರಾಫಿ ಉದ್ಯೋಗವು ಆಧುನಿಕವಾಗಿ ಮುಂದುವರೆದಿದೆ ಇದರಿಂದಾಗಿ ಸಂಘ ಸಂಸ್ಥೆಗಳು  ಫೋಟೋಗ್ರಾ ರನ್ನು ಗುರ್ತಿಸಿ ಅಂತವರಿಗೆ ಆಸರೆ ಯೋಜನೆಯ ಸದುಪಯೋಗಗಳನ್ನು ಪಡೆಸಿಕೊಡುವಂತಾಗಬೇಕು.

ಅಲ್ಲದೇ ಆಕಸ್ಮಿಕವಾಗಿ ಅಥವಾ ವಯೋಸಹಜವಾಗಿ ಅಥವಾ ಅನಾರೋಗ್ಯದಿಂದ ಫೋಟೋಗ್ರಾಫರ್ ಗಳು ಸಾವನ್ನಪ್ಪಿದಲ್ಲಿ ಅಂತವರ ಕುಟುಂಬಗಳನ್ನು ಗುರುತಿಸಿ ಅವರಿಗೆ ಧನ ಸಹಾಯ ಮಾಡುವ ಮೂಲಕ ಆಸರೆಯನ್ನು ಯೋಜನೆ ಸದುಪಯೋಗ ಪಡೆದುಕೊಳ್ಳಬೇಕೆಂದು ಶ್ರೀಗಳು ಮಾರ್ಮಿಕವಾಗಿ ಮಾತನಾಡಿದರು ಈ ಸಂದರ್ಭದಲ್ಲಿ ಹುಕ್ಕೇರಿ ತಾಲೂಕ ಛಾಯಾಗ್ರಾಹಕರ ಸಂಘದ ಅಧ್ಯಕ್ಷರಾದ ಶ್ರೀ ಅಪ್ಪು ಹುಕ್ಕೇರಿ ಉಪಾಧ್ಯಕ್ಷರಾದ ಶ್ರೀ ಶಿವಾನಂದ ಪಾಟೀಲ ಹಾಗೂ ಕಾರ್ಯದರ್ಶಿಗಳಾದ ಶ್ರೀ ಬಸವರಾಜ ದಾರೋಜಿ  ಸ್ಥಳೀಯ ಹಿರಿಯ ಛಾಯಾಚಿತ್ರಗಾರರಾದ  ಗೋಪಾಲ್ ಚಪ ನಿ ಶಷಿಕಾಂತ್ ಮೀಸರಿಕೋಟಿ ಉಪಸ್ಥಿತರಿದ್ದು ಕಾರ್ಯಕ್ರಮ ಯಶಸ್ವಿಗೊಳಿಸಿದರು ಅಲ್ಲದೆ ತಾಲೂಕಿನ ಎಲ್ಲ ಛಾಯಾಗ್ರಹಕರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.