ಕುಕ್ಕರ ಬ್ಲಾಸ್ಟ್ ಪ್ರಕರಣ: ಬಿಜೆಪಿ ಆರೋಪ ಖಂಡನೀಯ
ಲೋಕದರ್ಶನ ವರದಿ,
ಜಮಖಂಡಿ 19: ಕಾಂಗ್ರೆಸ್ ಪಕ್ಷ ಎಂದು ಟೇರರಿಸ್ಟ್ರಿಗೆ ಸಪೋರ್ಟ ಮಾಡುತ್ತಿಲ್ಲ.ಬಾಂಬ್ ಬ್ಲಾಸ್ಟ್ದಲ್ಲಿ ನಾವೂ ಬಲಿಪಶಿಗಳಾಗಿದ್ದು, ನಮ್ಮ ಪ್ರಮುಖ ನಾಯಕರನ್ನು ಕಳೆದುಕೊಂಡಿದ್ದು, ಬಿಜೆಪಿ ಅವರಿಗೆ ಗೊತ್ತಿದೆ. ಕುಕ್ಕರ ಬ್ಲಾಸ್ಟ್ ಪ್ರಕರಣದಲ್ಲಿ ಬಿಜೆಪಿ ಅವರು ಇಲ್ಲ-ಸಲ್ಲದ ಆರೋಪ ಮಾಡುತ್ತಿರುವುದು ಖಂಡನೀಯ. ಎಂದು ಮಾಜಿ ಡಿಸಿಎಂ ಡಾ.ಜಿ,ಪರಮೇಶ್ವರ ಹೇಳಿದರು.
ಶಾಸಕ ಆನಂದ ನ್ಯಾಮಗೌಡ ಅವರ ನಿವಾಸದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಅಭಿವೃದ್ಧಿ ಪರ ಕೆಲಸ ಮಾಡುವುದನ್ನು ಬಿಟ್ಟು ಅವರಿಗೆ ಇದರ ಬಗ್ಗೆ ಗಾಂಭೀರತೆ ಇಲ್ಲ .ಸೂಕ್ತ ತನಿಖೆ ನಡೆಸಬೇಕು. ಇದರ ಬಗ್ಗೆ ಅವರು ಅರ್ಥ ಮಾಡಿಕೊಳ್ಳಬೇಕು. ಅವರಿಂದ ನಾವೂ ಪಾಠ ಕಲಿಯಬೇಕಾಗಿಲ್ಲ. ಇದರ ಗಾಂಭಿರತೆಯಿಂದ ಆರೋಪಿಗಳನ್ನು ಶೋಧ ಮಾಡಲು ಕಿವಿ ಮಾತು ಹೇಳಿದರು.
ಸಮರ್ಥರು ಸಿಎಂ-ರಾಜ್ಯದ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ಯಾರು ಸಮರ್ಥರು ಇರುವರು ಸಿಎಂ ಆಗುತ್ತಾರೆ. ಮೊದಲು 113 ಗುರಿ ಮುಟ್ಟಿದ ನಂತರ ಸಿಎಂ ಪ್ರಶ್ನೆ. ಕಾಂಗ್ರೆಸ್ ಪಕ್ಷದಲ್ಲಿಲ್ಲ. ಯಾವುದೇ ಗುಂಪುಗಾರಿಕೆ ಇಲ್ಲ. ಅದುವೇ ಕಾಂಗ್ರೆಸ್ ಗುಂಪು. ನಮ್ಮ ನಾಯಕರಲ್ಲಿ ವೈಯಕ್ತಿಕ ಅಭಿಪ್ರಾಯ ಭಿನ್ನವಿದ್ದರೂ ನಮ್ಮಲ್ಲಿ ಯಾವುದೇ ಗುಂಪಿಲ್ಲ. ಪಕ್ಷವನ್ನು ಮೊದಲು ಅಧಿಕಾರಕ್ಕೆ ತರುವುದೇ ನಮ್ಮ ಗುರಿಯಾಗಿದೆ ಎಂದರು. ಕಳೆದ 8 ವರ್ಷಗಳಿಂದ ಬಿಜೆಪಿ ಸರ್ಕಾರದಲ್ಲಿ ಯಾವುದೇ ಅಭಿವೃದ್ಧಿ ಕಾಮಗಾರಿಗಳಿಲ್ಲ. ಸ್ಕಾಲರ್ಶೀಪ್ ನೀಡಲು ದುಡ್ಡು ಇಲ್ಲ.14 ಜಿಲ್ಲೆಗಳಲ್ಲಿ ಹೈಸ್ಕೂಲ್,ಕಾಲೇಜುಗಳ ಮಕ್ಕಳಿಗೆ ಸ್ಕಾಲರ್ಶಿಫ್ ಕೊಡಲು ಆಗುವುದಿಲ್ಲ ಎಂದು ಆದೇಶ ಮಾಡಿದೆ ಸರ್ಕಾರ ಸಾಮಾಜಿಕ ಭದ್ರತೆ ಹೇಗೆ ನೀಡಲು ಸಾಧ್ಯವೆಂದು ಪ್ರಶ್ನಿನಿಸಿದರು.
ಜಾತಿ ಆಧಾರವಿಲ್ಲ-2023 ಚುನಾವಣೆಯಲ್ಲಿ ಅಲ್ಪಸಂಖ್ಯಾತರಿಗೆ ಹೆಚ್ಚಿನ ಸ್ಥಾನ ನೀಡಲು ಮುಂದಿಲ್ಲ. ಕಾಂಗ್ರೆಸ್ ಹೈಕಮಾಂಡ ಜಾತಿ ಆಧಾರದ ಮೇಲೆ ಮುಖ್ಯಮಂತ್ರಿ-ದಲಿತ ಮುಖ್ಯಮಂತ್ರಿ ನೇಮಕ ಮಾಡುವುದಿಲ್ಲ. ಅವರವರ ಸಮರ್ಥ-ಸಾಮಥ್ರ್ಯದ ಮೇಲೆ ಇದು ಸಾಧ್ಯ ಎಂದು ಹೇಳಿದರು.
ಶಾಸಕ ಆನಂದ ನ್ಯಾಮಗೌಡ, ವರ್ಧಮಾನ ನ್ಯಾಮಗೌಡ, ಕಲ್ಲಪ್ಪ ಗಿರಡ್ಡಿ, ದಾನೇಶ ಘಾಟಗೆ, ಶ್ರೀಶೈಲ್ ದಳವಾಯಿ, ಈಶ್ವರ ಕರಬಸನ್ನವರ, ನಿಂಗಪ್ಪ ಕಡಪಟ್ಟಿ, ಪ್ರಕಾಶಕ ಕಣಬೂರ, ಸಿದ್ದು ಮೀಸಿ, ದಿಲಾವರ ಶಿರೋಳ, ಬಸವರಾಜ ಹರಕಂಗಿ ಅನೇಕರು ಸುದ್ದಿಗೋಷ್ಠಿಯಲ್ಲಿದ್ದರು.