ಕೃಷ್ಣಗೌಡ ಪಾಟೀಲರಿಂದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ
Krishnagouda Patil launches road development work
ಲೋಕದರ್ಶನ ವರದಿ
ಗದಗ 03: ಅವಳಿ ನಗರವಾದ ಗದಗ ಬೆಟಗೇರಿ ನಗರಸಭೆಯ 27 ನೇ ವಾರ್ಡಿನ ಸಂಭಾಪೂರ ರಸ್ತೆಯ ಎ ಪಿ ಎಮ್ ಸಿ ಯಲ್ಲಿ ಕೆಲಸ ನಿರ್ವಹಿಸುತ್ತಿರುವತಳಗಾರ ಎಸ್ ಸಿ ಜನಾಂಗದ ಕೂಲಿ ಕಾರ್ಮಿಕರ ಕಾಲನಿಯಲ್ಲಿನ ಮುಖ್ಯ ರಸ್ತೆಯಲ್ಲಿ ಗದಗ ಬೆಟಗೇರಿ ನಗರಸಭೆಯ ವಾರ್ಡಿನ ಜನಸ್ನೇಹಿ ಸದಸ್ಯಣಿಯರಾದ ಶ್ರೀಮತಿ ಲಲಿತಾ ಬಿ ಅಸೂಟಿ ಹಾಗೂ ಗದಗ ಜಿಲ್ಲಾ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷರಾದ ಬಿ ಬಿ ಅಸೂಟಿಯವರ ನೇತೃತ್ವದಲ್ಲಿ ಸುಸಜ್ಜಿತ ಕಾಂಕ್ರಿಟ್ ರಸ್ತೆ ನಿರ್ಮಾಣ ಹಾಗೂ ಅಭಿವೃದ್ಧಿ ಕಾಮಗಾರಿಯನ್ನು ಗದಗ ತಾಲೂಕಾ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಸದಸ್ಯರು ಹಾಗೂ ಗದಗ ಜಿಲ್ಲಾ ಯುವ ಕಾಂಗ್ರೇಸ್ ಸಮಿತಿಯ ಅಧ್ಯಕ್ಷರಾದ ಕೃಷ್ಣಗೌಡ ಎಚ್ ಪಾಟೀಲ್ ರವರು ಭೂಮಿ ಪೂಜೆ ನೆರವೇರಿಸುವ ಮೂಲಕ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಬಡಾವಣೆಯ ಹಿರಿಯರಾದ ರಾಮಚಂದ್ರ.ಹರಿಜನ, ಶಿವಾನಂದ ಚಲವಾದಿ. ಗಣೇಶ ಹೊಸಮನಿ, ಹರೀಶ್ ಹೊಸಮನಿ, ಶಾಂತಣ್ಣಾ ಮುಳವಾಡ, ಪ್ರಕಾಶ ಖೋಡೆ, ಚಾಂದಸಾಬ್ ಕೊಟ್ಟೂರ. ಬಸವರಾಜ ಚಲವಾದಿ, ಮಂಜುನಾಥ ಸಿಂಗಾಡೆ, ಮಂಜುನಾಥ್ ಕೊಟ್ಟೂರ, ಮೇಘರಾಜ ಚಲವಾದಿ, ನಿಂಗಪ್ಪ ಚವ್ಹಾಣ್, ಗೀತಾ ಚಲವಾದಿ, ರೇಣವ್ವ ಚಲವಾದಿ ಹಾಗೂ ಸಮಸ್ತ ಬಡಾವಣೆಯ ನಾಗರಿಕರು ಉಪಸ್ಥಿತರಿದ್ದರು.
ಹೆತ್ತ ವೃದ್ದ ತಾಯಿಯನ್ನೆ ನಿರ್ಜನ ಪ್ರದೇಶಕ್ಕೆ ರಾತ್ರಿ ಎಸೆದು ಹೋದ ಪಾಪಿ ಪುತ್ರ : ಅನ್ನ ನೀರು ಇಲ್ಲದೆ ಈಡಿ ರಾತ್ರಿ ಕಳೆದ ಹಿರಿಯ ಜೀವ
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ 