ಲಕ್ಷ್ಮೇಶ್ವರ ಮತ್ತು ಲಕ್ಕುಂಡಿ ಪೌರಾಣಿಕ ಪರಂಪರೆಯ ನೆಲೆಗಳು
Lakshmeshwara and Lakkundi are the sites of mythological heritage
ಗದಗ 03: ಲಕ್ಷ್ಮೇಶ್ವರ ಮತ್ತು ಲಕ್ಕುಂಡಿ ಗದಗ ಜಿಲ್ಲೆಯ ಪೌರಾಣಿಕ, ಐತಿಹಾಸಿಕ, ಸಾಂಸ್ಕೃತಿಕ ಪರಂಪರೆಯ ಅಮೂಲ್ಯ ಧಾರೋಹರಗಳಾಗಿದ್ದು, ಇವು ಕರ್ನಾಟಕದ ಇತಿಹಾಸದಲ್ಲಿ ವಿಶಿಷ್ಟ ಸ್ಥಾನ ಪಡೆದಿದ್ದು, ಎರಡೂ ಸ್ಥಳಗಳಲ್ಲಿ ಬೆಳಕಿಗೆ ಬಂದಿರುವ ತಲಾ 150ಕ್ಕೂ ಹೆಚ್ಚು ಶಾಸನಗಳು ಪ್ರಾದೇಶಿಕ ಬಹುತ್ವ ಚರಿತ್ರೆ, ಸಂಸ್ಕೃತಿಯ ವಿವಿಧ ಆಯಾಮಗಳನ್ನು ತಲಸ್ಪರ್ಶಿಯಾಗಿ ಪುನರಾವಲೋಕಿಸಲು ವಸ್ತುನಿಷ್ಠ ದಾಖಲೆಗಳಾಗಿವೆ ಎಂದು ಹುಲಕೋಟಿಯ ಕೆ.ಎಚ್. ಪಾಟೀಲ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಇತಿಹಾಸ ವಿಭಾಗದ ಮುಖ್ಯಸ್ಥ ಮತ್ತು ಪ್ರಾಧ್ಯಾಪಕ ಡಾ. ಅಪ್ಪಣ್ಣ ಹಂಜೆ ಹೇಳಿದರು.
ಅವರು ಶಿರಹಟ್ಟಿಯ ಶ್ರೀ ಜಗದ್ಗುರು ಫಕ್ಕೀರೇಶ್ವರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಇತಿಹಾಸ ವಿಭಾಗದ ಬಿ.ಎ. 6ನೇ ಸೆಮಿಸ್ಟರ್ ವಿದ್ಯಾರ್ಥಿಗಳ ಪ್ರಾಜೆಕ್ಟ್ ವರದಿ ಮೌಲ್ಯಮಾಪನ ಕಾರ್ಯದ ಬಾಹ್ಯ ಪರೀವೀಕ್ಷಕರಾಗಿ ಮಾತನಾಡುತ್ತ ಲಕ್ಷ್ಮೇಶ್ವರದ ಶಂಖ ಬಸದಿ, ಅನಂತನಾಥ ತ್ರಿಕೂಟ ಬಸದಿ, ಸೋಮೇಶ್ವರ ದೇವಾಲಯ, ಸಹಸ್ರಕೂಟ ಜಿನಬಿಂಬ, ವೃಷಭಾರೂಢ ಶಿವನ ಶಿಲ್ಪಗಳು, ಅಗಸ್ತ್ಯತೀರ್ಥ, ಲಕ್ಷ್ಮಣತೀರ್ಥ ಮತ್ತು ಲಕ್ಕುಂಡಿಯ ಬ್ರಹ್ಮಜಿನಾಲಯ, ಕಾಶೀವಿಶ್ವೇಶ್ವರ, ನನ್ನೇಶ್ವರ, ನಾಗನಾಥ, ನೀಲಕಂಠೇಶ್ವರ, ಸೋಮೇಶ್ವರ, ಮಾಣಿಕೇಶ್ವರ, ಚಂದ್ರಮೌಳೇಶ್ವರ, ವಿರೂಪಾಕ್ಷ, ಕುಂಬಾರೇಶ್ವರ, ನಾರಾಯಣ, ವೀರಭದ್ರ, ಹಾಲಗುಂಡಿ ಬಸವೇಶ್ವರ, ಸಿದ್ದರಾಮೇಶ್ವರ, ಈಶ್ವರ ದೇವಾಲಯಗಳು, ಚತುರ್ಮುಖ ಬ್ರಹ್ಮ, ನಟರಾಜ, ಕೇಶವ, ಆದಿನಾಥ, ಪಾರ್ಶ್ವನಾಥ, ಪದ್ಮಾವತಿ, ಕುಬೇರಯಕ್ಷ ಶಿಲ್ಪಗಳು ಮುಂತಾದವುಗಳು ಅಂದಿನ ವಾಸ್ತುಶಿಲ್ಪಿಗಳ ಪ್ರತಿಭೆಗೆ ಅತ್ಯುತ್ತಮ ಸಾಕ್ಷಿಗಳಾಗಿದ್ದು, ಇವು ಕರ್ನಾಟಕದ ವಾಸ್ತುಶಿಲ್ಪಕಲೆಗೆ ಅಪರೂಪದ ಕೊಡುಗೆಗಳಾಗಿವೆ ಎಂದು ಅಭಿಪ್ರಾಯಪಟ್ಟರು.
ಇತಿಹಾಸ ವಿಭಾಗದ ಮುಖ್ಯಸ್ಥೆ ಶೋಭಾ ಯಕ್ಕೇಲಿ ಪ್ರಾಸ್ತಾವಿಕವಾಗಿ ಮಾತನಾಡುತ್ತ ವಿದ್ಯಾರ್ಥಿಗಳು ಲಕ್ಷ್ಮೇಶ್ವರ ಮತ್ತು ಲಕ್ಕುಂಡಿ ಪಟ್ಟಣಗಳಲ್ಲಿ ಕ್ಷೇತ್ರಕಾರ್ಯ ಕೈಗೊಂಡು ರಚಿಸಿರುವ ಪ್ರಾಜೆಕ್ಟ್ ವರದಿಗಳು ಅತ್ಯುತ್ತಮವಾಗಿ ಮೂಡಿಬಂದಿದ್ದು, ಇವು ಅವರಲ್ಲಿ ಉನ್ನತ ಶಿಕ್ಷಣ ಮತ್ತು ಸಂಶೋಧನ ಅಧ್ಯಯನ ಮನೋಭಾವನೆಯನ್ನು ಮೂಡಿಸಲು ಪ್ರೇರಕವಾಗಿವೆ ಎಂದು ಹೇಳಿದರು. ಪ್ರಾಚಾರ್ಯ ಡಾ. ಉಮೇಶ ಅರಹುಣಸಿ ಅವರು ವಿದ್ಯಾರ್ಥಿಗಳು ಕ್ಷೇತ್ರಕಾರ್ಯಾವಲಂಬಿತ ಪ್ರಾಜೆಕ್ಟ್ ವರದಿಗಳನ್ನು ಆಯ್ದುಕೊಂಡು ಅಧ್ಯಯನ ಮಾಡುವುದರಿಂದ ವಿವಿಧ ಆಯಾಮಗಳಲ್ಲಿ ಜ್ಞಾನ ಸಂಪಾದಿಸಿ ಸಂವಹನ ಕಲೆಯನ್ನು ಬೆಳೆಸಿಕೊಳ್ಳಲು ಸಾಧ್ಯವಾಗುವುದೆಂದು ಹೇಳಿದರು. ಇತಿಹಾಸ ವಿಭಾಗದ ಉಪನ್ಯಾಸಕ ಚಂದ್ರ್ಪ ತಳವಾರ ಗಣ್ಯಮಾನ್ಯರನ್ನು ಪರಿಚಯಿಸಿ ಸ್ವಾಗತಿಸಿದರು. ಡಾ. ಶಂಕರ ಪೂಜಾರ ವಂದನಾರೆ್ಣಗೈದರು. ಡಾ. ಅಪ್ಪಣ್ಣ ಹಂಜೆ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಇತಿಹಾಸ ವಿಭಾಗದ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಹೆತ್ತ ವೃದ್ದ ತಾಯಿಯನ್ನೆ ನಿರ್ಜನ ಪ್ರದೇಶಕ್ಕೆ ರಾತ್ರಿ ಎಸೆದು ಹೋದ ಪಾಪಿ ಪುತ್ರ : ಅನ್ನ ನೀರು ಇಲ್ಲದೆ ಈಡಿ ರಾತ್ರಿ ಕಳೆದ ಹಿರಿಯ ಜೀವ
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ 