ಮುಂಡರಗಿ

ನಗರದ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದ ಜಾತ್ರಾ ಮಹೋತ್ಸವ

ನಗರದ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದ ಜಾತ್ರಾ ಮಹೋತ್ಸವ

ಮುಂಡರಗಿ 31:  ನಗರದ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದ ಜಾತ್ರಾ ಮಹೋತ್ಸವವು ಮಾ.29 ರಿಂದ ಏ.5 ವರೆಗೆ ವೈಭವದಿಂದ ಜರುಗಲಿದೆ ಎಂದು ಜಾತ್ರಾ ಕಮೀಟಿಯ ಅಧ್ಯಕ್ಷ ದೇವಪ್ಪ ಡೊಣ್ಣಿ ಹಾಗೂ ಟ್ರಸ್ಟ ಕಮೀಟಿಯ ಅಧ್ಯಕ್ಷ ಶಿವಪ್ಪ ಚಿಕ್ಕಣ್ಣವರ ತಿಳಿಸಿದ್ದಾರೆ. 

ಪಟ್ಟಣದಲ್ಲಿ ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ಮಾ.31 ರಂದು ತೇರಿನ ಕಳಸಾರೋಹಣ, ಸಂಜೆ ಲಘು ರಥೋತ್ಸವ, ಮಾ.1 ರಂದು ಸಂಜೆ ಲಘು ರಥೋತ್ಸವ, ಮಾ.2 ರಂದು ದೈವದ ಪೂಜೆ, ಹಾಲೆರುವ ಕಾರ್ಯಕ್ರಮ ಬೆ.5-00 ರಿಂದ, ಬಲಿ ಅನ್ನ, ಮಧ್ಯಾನ್ಹ : 1 ಘಂಟೆಗೆ, ಅನ್ನಸಂತರೆ​‍್ಣ, ಸಾಯಂಕಾಲ 5ಘಂಟೆಗೆ, ಮಹಾರಥೋತ್ಸವ ರಾತ್ರಿ 8 ಘಂಟೆಗೆ,  ವರ್ಷ ಭವಿಷ್ಯ ರಾತ್ರಿ 10ಘಂಟೆಗೆ ದೊಡ್ಡಾಟ ಕಾರ್ಯಕ್ರಮ ಜುಗಲಿದೆ. 

ಮಾ.3 ರಂದು ಸಾಯಂಕಾಲ 5 ಘಂಟೆಗೆಹಳ್ಳಿಬಂಡಿ ಕಾರ್ಯಕ್ರಮ  ಹಾಗೂ  ರಾತ್ರಿ 8-00 ರಿಂದ, ಮುಳ್ಳುಗದ್ದಿಗೆ, ಓಕಳಿ, ಕಡುಬಿನ ಕಾಳಗ, ಮಾ.4 ರಂದು ಕೋಟೆ ಆಂಜನೇಯ ಗೆಳೆಯರ ಬಳಗದ ವತಿಯಿಂದ ಟಗರಿನ ಕಾಳಗ, ಮಾ.5 ರಂದು ಶ್ರೀ ದುರ್ಗಾದೇವಿ ಗೆಳೆಯರ ಬಳಗದ ವತಿಯಿಂದ ಗಡ್ಡಿಬಂಡಿ ಓಡಿಸುವ ಸ್ಪರ್ದೆ ಜರಗುವುದು  

ಆದ್ದರಿಂದ ಈ ಎಲ್ಲಾ ಜಾತ್ರಾ ಮಹೋತ್ಸವದ ಕಾರ್ಯಕ್ರಮದಲ್ಲಿ ಸಕಲ ಸದ್ಭಕ್ತರು ಪಾಲ್ಗೊಂಡು ತಮ್ಮ ತನು ಮನ ಧನದಿಂದ ಸೇವೆ ಸಲ್ಲಿಸಿಕೋಟೆ ಆಂಜನೇಯ ಸ್ವಾಮಿಯ ಕೃಪೆಗೆ ಪಾತ್ರರಾಗಬೆಕೆಂದು ಜಾತ್ರಾ ಮಹೋತ್ಸವದ ಕಮೀಟಿಯ ಅಧ್ಯಕ್ಷರಾದ, ದೇವಪ್ಪ ಹಾ ಡೊಣ್ಣಿ ಹಾಗೂ ಟ್ರಸ್ಟ ಕಮೀಟಿಯ ಅಧ್ಯಕ್ಷರಾದ ಶಿವಪ್ಪ ಚಿಕ್ಕಣ್ಣವರ ಇವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 


ಸುದ್ದಿ ಓದಿ