ಶಿವಾನಂದ ಪಾಟೀಲರಿಗೆ ಸಚಿವ ಸ್ಥಾನ ನೀಡಬೇಕೆಂದು ಕಿಶೋರಗೌಡ ಪಾಟೀಲ ಆಗ್ರಹ
Kishore Gowda Patil demands that Shivanand Patil be given a ministerial position
ವಿಜಯಪುರ 01: ಉತ್ತರ ಕರ್ನಾಟಕದ ಬಸವ ನಾಡಿನ ಪ್ರಬಲ ಲಿಂಗಾಯತ ನಾಯಕರು, ಅಭಿವೃದ್ಧಿಯ ಹರಿಕಾರರು, ವಿಜಯಪುರ ಜಿಲ್ಲೆಯ ಬಸವ ಜನ್ಮಭೂಮಿಯಾದ ಬಸವನಬಾಗೇವಾಡಿ ಮತ ಕ್ಷೇತ್ರದ ಜನಪ್ರಿಯ ಶಾಸಕರಾದ ಶಿವಾನಂದ ಎಸ್. ಪಾಟೀಲ ಇವರು 6 ಬಾರಿ ಶಾಸಕರಾಗಿ ಮತ್ತು 2 ಬಾರಿ ಸಚಿವರಾಗಿ ಸೇವೆಸಲ್ಲಿಸಿದ್ದು, ಇವರನ್ನು ಸಚಿವಸ್ಥಾನದೊಂದಿಗೆ ಉಪ ಮುಖ್ಯಮಂತ್ರಿಯಾಗಿ ಮಾಡಬೇಕಾಗಿ ಕರ್ನಾಟಕ ಪ್ರದೇಶ ಕಾಂಗ್ರೇಸ ಸಮೀತಿ ಸಾಮಾಜಿಕ ಜಾಲತಾಣದ ಮಾಜಿ ಕಾರ್ಯದರ್ಶಿಯಾದ ಕಿಶೋರಗೌಡ ಅಪ್ಪುಗೌಡ ಪಾಟೀಲ ಆಗ್ರಹಿಸಿದರು.
ಕಾಂಗ್ರೇಸ ಸರ್ಕಾರದ ಆಡಳಿತದಲ್ಲಿ ಈಗಾಗಲೆ ಒಂದನೆಯ ಅವಧಿಯಲ್ಲಿ ಆರೋಗ್ಯ ಮತ್ತು ಕುಟುಂಬದ ಕಲ್ಯಾಣ ಇಲಾಖೆಯ ಸಚಿವರಾಗಿ ಹಾಗೂ ಬಾಗಲಕೋಟ ಜಿಲ್ಲಾ ಉಸ್ತುವಾರಿ ಸಚಿವರಾದಾಗ ರಾಜ್ಯದಂತ ಎಲ್ಲಾ ಆಸ್ಪತ್ರೆಗಳನ್ನು ಮೇಲ್ದರ್ಜೆಗೆ ಏರಿಸಿದರು ಮತ್ತು ಸಂಚಾರಿ ಬ್ಲಡ್ ಬ್ಯಾಂಕ ಮತ್ತು ವಿನೂತನ ಯೋಜನೆಗಳಿಗೆ ಚಾಲನೆ ನೀಡಿದರು ಮತ್ತು ಎರಡನೆಯ ಅವಧಿಯಲ್ಲಿ ಜವಳಿ, ಕಬ್ಬು ಅಭಿವೃದ್ಧಿ, ಸಕ್ಕರೆ ನಿರ್ದೇಶನಾಲಯ ಹಾಗೂ ಕೃಷಿಮಾರುಕಟ್ಟೆ ಇಲಾಖೆ ಸಚಿವರು ಹಾಗೂ ಹಾವೇರಿ ಜಿಲ್ಲಾ ಉಸ್ತುವಾರಿ ಸಚಿವರಾದಾಗ ಹಾವೇರಿ ಜಿಲ್ಲೆಯ ಶಿಗ್ಗಾಂವ ಮತಕ್ಷೇತ್ರದ ಉಪಚುನಾವಣೆಯಲ್ಲಿ ಕಾಂಗ್ರೇಸ್ ಅಭ್ಯರ್ಥಿಯನ್ನು ಗೆಲ್ಲಿಸಿರುತ್ತಾರೆ ಮತ್ತು ಬೆಳಗಾವಿ ಜಿಲ್ಲೆಯ ಗುರ್ಲಾಪೂರದಲ್ಲಿ ನಡೆದ ಕಬ್ಬಿನ ಬೆಳೆಗಾರರ ಪ್ರತಿಭಟಣೆಯಲ್ಲಿ ಕಾರ್ಖಾನೆಗಳ ಒತ್ತಡಕ್ಕೆ ಮಣಿಯದೇ ಸರ್ಕಾರವು ರೈತರಪರವಾಗಿದೆ ಎಂದು ಸರ್ಕಾರದ ಬೆಂಬಲ ಬೆಲೆಯೊಂದಿಗೆ ನಿರ್ದಿಷ್ಟ ಬೆಲೆಯನ್ನು ಘೋಷಿಸಿ ರೈತ ಪರ ಮೆಚ್ಚುಗೆಯನ್ನುಗಳಿಸಿರುತ್ತಾರೆ.
ಇದೇ ಸಂದರ್ಭದಲ್ಲಿ ರಾಜ್ಯದ ಇನ್ನಿತರ ಕಡೆ ಅಂದರೆ ವಿಜಯಪುರ, ಮುಧೋಳ, ಮಹಾಲಿಂಗಪೂರ, ಜಮಖಂಡಿ ಹಾಗೂ ಕಲಬುರಗಿಯ ಪ್ರತಿಭಟಣೆಯನ್ನು ಸಮರ್ಕವಾಗಿ ಬಗೆಹಸಿರುತ್ತಾರೆ. ಮುಂದುವರೆದುಯಾವುದೇ ಒತ್ತಡಕ್ಕೆ ಮಣಿಯದೆ ವಿಜಯಪುರ ಜಿಲ್ಲೆಗೆ ಮತ್ತು ಹಾವೇರಿ ಜಿಲ್ಲೆಗೆ ಪ್ರತ್ಯೇಕವಾಗಿ ಸರ್ಕಾರಿ ಮೆಡಿಕಲ್ ಕಾಲೇಜುಗಳನ್ನು ಮಂಜೂರುಮಾಡಿಸಿ, ಆಭಾಗದ ಅನೇಕ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಅನುಕೂಲಮಾಡಿಕೊಟ್ಟಿರುತ್ತಾರೆ ಹಾಗೂ ಕಲಬುರಗಿ ಜಿಲ್ಲೆಯಲ್ಲಿ ಜವಳಿ ಪಾರ್ಕನ್ನು ನಿರ್ಮಿಸಿರುತ್ತಾರೆ ಹಾಗೂ ಜವಳಿ ಉದ್ಯಮಕ್ಕೆ ಸಂಬಂಧಿಸಿದಂತೆ ವಿನೂತನ ಸರಳಿಕೃತಕಾಯ್ದೆಗಳನ್ನು ಜಾರಿಗೆ ತಂದಿರುತ್ತಾರೆ. ಹಿಂದಿನ ಸರ್ಕಾರದ ಜಾರಿಗೆತಂದಂತಹ ಎಪಿಎಂಸಿಕಾಯ್ದೆಯ ತಿದ್ದುಪಡಿಯನ್ನು ಇಂದಿನ ಸರ್ಕಾರ ಹಿಂಪಡೆಯುವದರಲ್ಲಿ ಸಚಿವರು ಮಹತ್ತರ ಪಾತ್ರವಹಿಸಿರುತ್ತಾರೆ.
ರೈತರಿಗೆ ಆಧುನಿಕ ಶೀಥಲಮಾರುಕಟ್ಟೆಯನ್ನು ಪರಿಚಯಿಸಿರುತ್ತಾರೆ. ಹೀಗೆ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಮಾಡಿರುತ್ತಾರೆ. ಆದ ಕಾರಣ ಕಾಂಗ್ರೇಸ ಪಕ್ಷದ ನಾಯಕರಾದ ರಾಹುಲ ಗಾಂಧಿ, ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಮತ್ತು ಕಾಂಗ್ರೇಸ ಶಾಸಕಾಂಗ ಪಕ್ಷದ ನಾಯಕರು ಹಾಗೂ ಭಾವಿ ಮುಖ್ಯಮಂತ್ರಿಗಳು ಡಿ.ಕೆ. ಶಿವಕುಮಾರ ರವರು ತಮ್ಮ ಸಚಿವ ಸಂಪೂಟದಲ್ಲಿ ಮಾನ್ಯ ಶ್ರೀ ಶಿವಾನಂದ ಎಸ್. ಪಾಟೀಲರವರನ್ನು ಸಚಿವ ಸ್ಥಾನದಲ್ಲಿ ಮುಂದುವರೆಸಿ ಉಪ ಮುಖ್ಯಮಂತ್ರಿಯಾಗಿ ಮಾಡಬೇಕೆಂದು ಮಾಜಿ ಕಾರ್ಯದರ್ಶಿಗಳು, ಕಾರ್ನಾಟಕ ಪ್ರದೇಶ ಕಾಂಗ್ರೇಸ ಸಮೀತಿ ಸಾಮಾಜಿಕ ಜಾಲತಾಣ ಶ್ರೀ ಕಿಶೋರಗೌಡ ಅಪ್ಪುಗೌಡ ಪಾಟೀಲ (ಕೋರವಾರ) ಇವರು ಆಗ್ರಹಿಸಿರುತ್ತಾರೆ.
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ
ಹಳೆದಿಗ್ಗೆವಾಡಿ ಗ್ರಾಮದ ಮಹಾದೇವ ಗಂಗಾಯಿ ಅಜ್ಜ ವಿಧಿವಶ
ಆರೈಕೆಗಿದ್ದವನಿಂದ 1.02 ಕೋಟಿಯ 930 ಗ್ರಾಂ ಚಿನ್ನ ಕಳ್ಳತನ: ಇಬ್ಬರ ಬಂಧನ, 73.03 ಲಕ್ಷದ ಚಿನ್ನ ವಶಕ್ಕೆ 