ಕೇವಿನ್ ಟರ್ಸನ್ ಹಿಂದಿ ಪ್ರೇಮ
ನವದಹೆಲಿ, ಮಾ 20, ಇಂಗ್ಲೆಂಡ್ ತಂಡದ ಮಾಜಿ ಕ್ರಿಕೆಟಿಗ ಕೆವಿನ್ ಪೀಟರ್ಸನ್‌ಗೆ ಭಾರತ ಹಾಗೂ ಹಿಂದಿ ಭಾಷೆಯ ಮೇಲೆ ಅಪಾರ ಪ್ರೇಮವಿದೆ. ಭಾರತಕ್ಕೆ ಆಗಾಗ ಭೇಟಿ ನೀಡುವ ಅವರು ಇಲ್ಲಿನ ಪ್ರೇಕ್ಷಣಿಯ ಸ್ಥಳಗಳಲ್ಲಿ ಸುತ್ತಾಡುತ್ತಾರೆ. ಇಂತಿಪ್ಪ ಆಟಗಾರ ಕೊರೊನಾ ವೈರಸ್ ಬಗೆಗಿನ ಜಾಗೃತಿಗಾಗಿ ಹಿಂದಿಯಲ್ಲೇ ಟ್ವೀಟ್ ಮಾಡಿ ಭಾರತೀಯರ ಮನಗೆದ್ದಿದ್ದಾರೆ.ನಮಸ್ತೇ ಇಂಡಿಯಾ… ಕೊರೊನಾ ವೈರಸ್ ಅನ್ನು ಹಿಮ್ಮೆಟ್ಟಿಸಲು ನಾವೆಲ್ಲರೂ ಜತೆಯಾಗಿ ಹೋರಾಡೋಣ. ನಾವು ಕೆಲವು ದಿನಗಳ ಕಾಲ ನಮ್ಮ ಮನೆಯಲ್ಲಿಯೇ ಉಳಿದುಕೊಳ್ಳುವ ಮೂಲಕ ಸರಕಾರದ ನಿರ್ದೇಶನಗಳನ್ನು ಪಾಲಿಸೋಣ. ನಾವೆಲ್ಲರೂ ಬುದ್ಧಿವಂತಿಕೆ ಪ್ರದರ್ಶಿಸಬೇಕಾದ ಸಮಯವಿದು,’’ ಎಂದು ಅವರು ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ. ಕೊನೆಯಲ್ಲಿ ಅವರು ತಮಗೆ ಹಿಂದಿ ಕಲಿಸಿದ ಬಂಗಾಳ ತಂಡದ ಆಟಗಾರ ಶ್ರೀವತ್ಸ್ ಗೋಸ್ವಾಮಿ ಅವರನ್ನು ಸ್ಮರಿಸಿದ್ದಾರೆ. ಪಿಟರ್ಸ್ ನ್ ಅವರ ಹಿಂದಿ ಟ್ವೀಟ್‌ಗೆ ಶ್ರೀವತ್ಸ್ ಅವರೇ ಪ್ರತಿಕ್ರಿಯೆ ನೀಡಿದ್ದು, ಒಳ್ಳೆಯ ಕಲಿಕೆದಾರ ಎಂದು ಹೇಳಿದ್ದಾರಲ್ಲದೆ, ಮುಂದಿನ ಬಾರಿ ವಿಡಿಯೊ ಮಾಡುವಂತೆ ಸೂಚಿಸಿದ್ದಾರೆ. ಕೆವಿನ ಅವರ ಹಿಂದಿ ಕಲಿಕೆಯ ಜಾಣ್ಮೆಗೆ ಅಭಿಮಾನಿಗಳು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಹೆತ್ತ ವೃದ್ದ ತಾಯಿಯನ್ನೆ ನಿರ್ಜನ ಪ್ರದೇಶಕ್ಕೆ ರಾತ್ರಿ ಎಸೆದು ಹೋದ ಪಾಪಿ ಪುತ್ರ : ಅನ್ನ ನೀರು ಇಲ್ಲದೆ ಈಡಿ ರಾತ್ರಿ ಕಳೆದ ಹಿರಿಯ ಜೀವ
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ 