ಚರಂಡಿ ಇಲ್ಲದೆ ಗಬ್ಬೆದ್ದು ನಾರುತ್ತಿರುವ ಕೌಡೇಶ್ವರ ರಸ್ತೆಗಳು- ಸಾರ್ವಜನಿಕರ ಆಕ್ರೋಶ
Kaudeshwar roads are dirty and smelly without drainage - public outrage
ಲಕ್ಷ್ಮೇಶ್ವರ 02: ಪಟ್ಟಣದ ಪುರಸಭೆ ವ್ಯಾಪ್ತಿಯ ವಾರ್ಡ್ ನಂ1ರಲ್ಲಿ ಬರುವ ಕೌಡೇಶ್ವರ ನಗರ ಹೊಸ ಬಡಾವಣೆಯಲ್ಲಿ ನೂರಾರು ಹೂಸ ಮನೆಗಳು ಸುಂದರವಾಗಿ ನಿರ್ಮಾಣ ಗೊಂಡಿವೆ ಹಾಗೂ ಪುರಸಭೆಗೆ ತುಂಬ ಬೇಕಾದ ಆಸ್ತಿ ತೆರಿಗೆಯನ್ನು ತುಂಬುತ್ತಾರೆ ಆದರೆ ಕೌಡೇಶ್ವರ ನಗರಕ್ಕೆ ಸೂಕ್ತವಾದ ಚರಂಡಿ ವ್ಯವಸ್ಥೆ ಇಲ್ಲದೆ ಮನೆಗೆ ಬಳಕೆ ಮಾಡಿದ ಗಲೀಜು ನೀರು ರಸ್ತೆಯಲ್ಲಿ ಹರಿಯುತ್ತದೆ ಇದರಿಂದ ರಸ್ತೆ ಎನ್ನುವುದು ಗದ್ದೆದ್ದು ನಾರುತ್ತಿವೆ ಇಂಥ ನಾರುತ್ತಿರುವ ರಸ್ತೆಯ ಮುಖಾಂತರವೇ ನಿವಾಸಿಗಳು ತಮ್ಮ ವಾಹನ ಚಲಾಯಿಸಿಕೊಂಡು ನಡೆದುಕೊಂಡು ಹೋಗುವಂತಾಗಿದೆ ಇದೇ ವಿಷಯವಾಗಿ ಪುರಸಭೆಗೆ ಸೋಮವಾರ ದೌಡಾಯಿಸಿದ ಕೌಡೇಶ್ವರ ನಗರದ ಮಹಿಳೆಯರು ನಮ್ಮ ವಾರ್ಡಿಗೆ ಮೊದಲು ಚರಂಡಿ ರಸ್ತೆ ನಿರ್ಮಿಸಿ ಎಂದು ತಮ್ಮ ಅಳಲನ್ನು ತೋಡಿಕೊಂಡಿದ್ದರು ಈ ಸಮಯದಲ್ಲಿ ಪುರಸಭೆಯ ಅಧಿಕಾರಿಗಳು ತಾತ್ಕಾಲಿಕವಾಗಿ ರಸ್ತೆಗೆ ಮಣ್ಣ ಹಾಕಿ ಕಚ್ಚಾ ಚರಂಡಿ ಮಾಡುತ್ತೇವೆ ಎಂದು ಹೇಳಿ ಸಮಾಧಾನ ಮಾಡಿ ಕಳಿಸಿದ್ದರು ಆದರೆ ಇಲ್ಲಿಯವರೆಗೂ ಕೌಡೇಶ್ವರ ನಗರದ ಕಡೆಯ ಸಾಲಿಗೆ ಹೋಗುವ ರಸ್ತೆಯ ಕಡೆ ಮಣ್ಣು ಹಾಕಿಲ್ಲ ಕಚ್ಚಾ ಚರಂಡಿ ವ್ಯವಸ್ಥೆ ಸಹ ಮಾಡಿಲ್ಲ ಇದರಿಂದ ನಿವಾಸಿಗಳು ತೊಂದರೆ ಅನುಭವಿ ಸುತ್ತಿರುವುದು ಮಾತ್ರ ತಪ್ಪುತಿಲ್ಲಅದಕ್ಕಾಗಿ ಸಂಬಂಧಿಸಿದ ಪುರಸಭೆಯ ಮುಖ್ಯ ಅಧಿಕಾರಿಗಳು ಕೌಡೇಶ್ವರ ನಗರಕ್ಕೆ ಸ್ವತಾ ತಾವೇ ಭೇಟೀನೀಡಿ ಎಲ್ಲಿ ಸಮಸ್ಯೆ ಇದೆ ಅದನ್ನು ಆಲಿಸಿ ಬೇಗನೆ ಸರಿಪಡಿಸುವ ಅವಸ್ಥೆ ಮಾಡಬೇಕು ಎಂದು ನಿವಾಸಿಗಳು ಒತ್ತಾಯಿಸಿದ್ದಾರೆ.
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ 