ಕಾರವಾರ ಬಸ್ ಡಿಪೋ ಸ್ಥಳಾಂತರ ಇಲ್ಲ : ಶಾಸಕ ಸೈಲ್
Karwar bus depot will not be relocated: MLA Sail
ಕಾರವಾರ 19: ನಗರದ ಹಬ್ಬುವಾಡಾದಲ್ಲಿರುವ ಕೆ.ಎಸ್. ಆರ್. ಟಿ.ಸಿ ಘಟಕಕ್ಕೆ ಶುಕ್ರವಾರಶಾಸಕ ಸತೀಶ ಕೆ.ಸೈಲ್ ಭೇಟಿ ಘಟಕದ ಸ್ಥಳಾಂತರ ಸದ್ಯಕ್ಕಿಲ್ಲ ಎಂದರು. ಕೆ.ಎಸ್.ಆರ್.ಟಿ.ಸಿ ಘಟಕದ ನೂತನ ಕಟ್ಟಡ ಕಾಮಗಾರಿ ಪರೀಶೀಲನೆ ನಡೆಸಿದರು . ಕೆ.ಎಸ್.ಆರ್.ಟಿ.ಸಿ ವಿಭಾಗೀಯ ಡಿವಿಜನಲ್ ಕಮೀಷನರ್ ಬಸವರಾಜ ಹಮ್ಮಣ್ಣರ ಜೊತೆ ಚರ್ಚೆ ಮಾಡಿದರು . ಕಳೆದ 1 ವಾರದ ಹಿಂದೆ ಮಳೆ ಸುರಿದಾಗ ಮಳೆಯ ನೀರು ಸರಾಗವಾಗಿ ಚರಂಡಿಯಿಂದ ಹರಿದು ಹೋಗದೇ ಸಮಸ್ಯೆ ಉಂಟಾದ ಕುರಿತು ಚರ್ಚೆ ಮಾಡಿದರು. ನಂತರ ಮಾಧ್ಯಮಗಳ ಜೊತೆ ಮಾತನಾಡಿದ ಶಾಸಕ ಸೈಲ್ ಕಾರವಾರ ಕೆ.ಎಸ್.ಆರ್.ಟಿ.ಸಿ ಬಸ ಘಟಕವನ್ನು ಯಾವುದೇ ಕಾರಣಕ್ಕೂ ಅಂಕೋಲಾಕ್ಕೆ ವರ್ಗಾಯಿಸಲ್ಲ.
ಮಳೆಗಾಲದಲ್ಲಿ ಹೆಚ್ಚಿನ ಜನರು ಕೆ.ಎಸ್. ಆರ್.ಟಿ.ಸಿ ಬಸ ಅವಲಂಬಿತರಾಗಿದ್ದಾರೆ. ಸ್ಥಳಾಂತರ ಮಾಡಿದರೆ, ಗ್ರಾಮೀಣ ಭಾಗ ದಿಂದ ಶಾಲಾ ಹಾಗೂ ಕಾಲೇಜುಗಳಿಗೆ ಬರುವ ವಿದ್ಯಾರ್ಥಿ ಗಳಿಗೆ ಸಮಸ್ಯೆಯಾಗುವ ಸಾಧ್ಯತೆ ಹೆಚ್ಚು ಎಂದರು. ಕೆ.ಎಸ್.ಆರ್.ಟಿ.ಸಿ. ಬಸ್ ಘಟಕದಲ್ಲಿರುವ ಚರಂಡಿ ಹಾಗೂ ಬಸ್ ದುರಸ್ಥಿ ಕಾರ್ಯಕ್ಕೆ ಬಳಸುವ ತೊಟ್ಟಿಯಲ್ಲಿ ನೀರು ನಿಲ್ಲದಂತೆ ಸ್ವಚ್ಟಗೊಳಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ನಂತರ ಕೆ.ಎಸ್. ಆರ್.ಟಿ.ಸಿ . ಡಿವಿಜನಲ್ ಕಮೀಷನರ್ ಜೊತೆಗೆ ಮಾತನಾಡಿ ಕಾರವಾರ ಬಸ ಡಿಪೋ ಅಂಕೋಲಾಕ್ಕೆ ಸ್ಥಳಾಂತರಿ ಸದಂತೆ ಸೂಚಿಸಲಾಗಿದೆ ಎಂದರುಕಾರವಾರ ಕೆ.ಎಸ್. ಆರ್.ಟಿ.ಸಿ. ಬಸ್ ಡಿಪೋ ಗೆ 4 ಕೋಟಿ ರೂ . ವೆಚ್ಚದ ಕಟ್ಟಡ ಕಾಮಗಾರಿಯನ್ನು ಕಾಂಗ್ರೆಸ್ ಪಕ್ಷದ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಪ್ರಾರಂಭಿಸಿದ್ದೇವೆ. ಈ ಕಾಮಗಾರಿ ಜೂನ-2025 ರ ಅಂತ್ಯದೊಳಗೆ ಪೂರ್ಣ ಗೊಳಿಸಬೇಕಿತ್ತು. ಆದರೆ ಈ ಕಾಮಗಾರಿ ಕಾರಣಾಂತರಗಳಿಂದ ಇನ್ನೂ ಪೂರ್ಣಗೊಂಡಿಲ್ಲ ಎಂದರು.
ಡಿಫೊದಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳಿ ಎಂದುನಗರಸಭೆ ಆಯುಕ್ತರಿಗೆಸೂಚಿಸಲಾಗಿದೆ ಎಂದರು. ಬಸ ಡಿಪೋ ವನ್ನು ತಾತ್ಕಾಲಿಕವಾಗಿ ಅಂಕೋಲಾಕ್ಕೆ ವರ್ಗಾ ಯಿಸುವ ಬಗ್ಗೆ ಕೆ.ಎಸ್. ಆರ್.ಟಿ.ಸಿ. ಅಧಿಕಾರಿಗಳು ಯೋಚಿಸಿದ್ದು ಸರಿಯಲ್ಲ ಎಂದರು. ಕಾರವಾರ ಬಸ್ ಡಿಪೋ ಮ್ಯಾನೇಜರ್ ಸೌಮ್ಯ, ತಹಶೀಲ್ದಾರ ರವರಾದ ನೋರೊನ್ಹಾ, ನಗರಸಭೆ ಆಯುಕ್ತ ಜಗದೀಶ ಹುಲಿಗೆಟ್ಟಿ, ಇಲಾಖೆಯ ಅಧಿಕಾರಿ ಹಾಗೂ ಸಿಬ್ಬಂದಿಗಳು ಈ ವೇಳೆ ಉಪಸ್ಥಿತರಿದ್ದರು......
ಹೆತ್ತ ವೃದ್ದ ತಾಯಿಯನ್ನೆ ನಿರ್ಜನ ಪ್ರದೇಶಕ್ಕೆ ರಾತ್ರಿ ಎಸೆದು ಹೋದ ಪಾಪಿ ಪುತ್ರ : ಅನ್ನ ನೀರು ಇಲ್ಲದೆ ಈಡಿ ರಾತ್ರಿ ಕಳೆದ ಹಿರಿಯ ಜೀವ
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ 