ಕಾರವಾರ ತಾಲೂಕು 5ನೇ ರೈತ ಸಮ್ಮೇಳನ ಉದ್ಘಾಟನೆ
Karwar Taluk 5th Farmers' Conference inaugurated
ಕಾರವಾರ 28 : ಅರಣ್ಯವಾಸಿಗಳಿಗೆ ಹಕ್ಕುಪತ್ರ ಸಿಗುವವರೆಗೂ ಕರ್ನಾಟಕ ಪ್ರಾಂತ ರೈತ ಸಂಘ ಹೋರಾಟ ನಿಲ್ಲಿಸುವುದಿಲ್ಲ, ಸರಕಾರಗಳು ಅರಣ್ಯ ವಾಸಿಗಳನ್ನು ಒಕ್ಕಲೆಬ್ಬಿಸಲು ಬಿಡುವುದಿಲ್ಲ ಎಂದು ಜಿಲ್ಲಾಧ್ಯಕ್ಷ ಶಾಂತಾರಾಮ ನಾಯಕ್ ಹೇಳಿದರು. ಅವರು ಶನಿವಾರ ಕದ್ರಾದಲ್ಲಿ ತಾಲೂಕು ಮಟ್ಟದ 5ನೇ ರೈತ ಸಮ್ಮೇಳನ ಉದ್ಘಾಟಿಸಿ ಮಾತನಾಡುತ್ತಿದ್ದರು. 40-50 ವರ್ಷಗಳಿಂದ ಭೂಮಿ ಹೋರಾಟ ನಡೆಯುತ್ತಿದೆ. ಅರಣ್ಯ ಹಕ್ಕು ಕಾಯ್ದೆ ನಮ್ಮ ಹೋರಾಟದಿಂದ ಬಂದಿದೆ. ಈ ಕಾಯ್ದೆ ಜಾರಿಗೂ ನಾವೇ ಹೋರಾಟ ಮಾಡಬೇಕು, ಜನರಿಗೆ ಭೂಮಿ ಕೊಡಲು ಈ ಕಾಯ್ದೆಯಲ್ಲಿ ತೊಂದರೆ ಇದ್ದರೆ ತಿದ್ದುಪಡಿ ಮಾಡಿಯಾದರು ಹಕ್ಕು ಪತ್ರ ನೀಡಬೇಕು. ಈಗ ಮತ್ತೆ ಅಧಿಕಾರಿಗಳ ತಂಡ ಪರೀಶೀಲನೆ ನಡೆಸಲು ಹೋರಟಿದೆ,
ಜನಪ್ರತಿನಿಗಳು ಇಲ್ಲದ ಸಂದರ್ಭದಲ್ಲಿ ಸಮೀಕ್ಷೆ ನಡೆಸಲಾಗುತ್ತಿದೆ, ಗ್ರಾಮ ಅರಣ್ಯ ಹಕ್ಕು ಸಮಿತಿಯನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿಲ್ಲ, ಕಾರವಾರ ತಾಲೂಕಿನಲ್ಲಿ 4-5 ಸಾವಿರ ಅರಣ್ಯ ವಾಸಿಗಳಿದ್ದಾರೆ, ಎಲ್ಲರೂ ಸಂಘಟಿತರಾಗಿ ಹೋರಾಟ ತೀವ್ರಗೊಳಿಸಲು ಕರೆನೀಡಿದರು. ಮುಖ್ಯ ಅತಿಥಿಗಳಾಗಿ ಜಿಲ್ಲಾ ಸಮಿತಿ ಕಾರ್ಯದರ್ಶಿ ಶ್ಯಾಮನಾಥ ನಾಯ್ಕ ಕದ್ರಾ ಮಾತನಾಡಿ ರೈತ ಮತ್ತು ಕೂಲಿಕಾರರ ಬೇಡಿಕೆಗಳಿಗಾಗಿ ತೀವ್ರ ಹೋರಾಟ ನಡೆಸುತ್ತದೆ. ಕೇಂದ್ರ ಮತ್ತು ರಾಜ್ಯ ಸರಕಾರದ ಉದಾಸೀನತೆಯನ್ನು ಖಂಡಿಸಿದರು. ಸಮ್ಮೇಳನದಲ್ಲಿ ಉಳಗಾ-ಕೇರವಡಿ ಮಧ್ಯ ಕಾಳಿ ನದಿಗೆ ಸೇತುವೆ ತುರ್ತಾಗಿ ಮುಗಿಸಬೇಕು .
ಹಾಗೂ ಕೈಗಾ ಅಣು ವಿದ್ಯುತ್ ಘಟಕದಲ್ಲಿ ಮತ್ತು ನೌಕಾ ನೆಲೆಯಲ್ಲಿ ಸ್ಥಳೀಯರಿಗೆ ಕಾಯಂ ಉದ್ಯೋಗ ಕೋಡಬೇಕೆಂದು ಒತ್ತಾಯಿಸಲಾಯಿತು. ಕದ್ರಾ ಆಣೆಕಟ್ಟು ನಿರಾಶ್ರಿತರಿಗೆ ಶಾಸ್ವತ ಪುನರ್ವಸತಿ ಒದಗಿಸಬೇಕೆಂದು ಒತ್ತಾಯಿಸಿ ನಿರ್ಣಯ ಅಂಗೀಕರಿಸಲಾಯಿತು. ಸಂತೋಷ ನಾಯ್ಕ ಜರಡಿ ಅಧ್ಯಕ್ಷತೆ ವಹಿಸಿದ್ದರು. ವೇದಿಕೆ ಮೇಲೆ ಮೋಹಿನಿ ಬೈರಾ, ಅಶ್ವಿನಿ ಪೆಡ್ನೇಕರ ಬೋರೆ, ಕೃಷ್ಣ ರಾಜೀವನಗರ ಪೇಮಾ ಉಳಗಾ ಇದ್ದರು. ನೂತನ ಸಮಿತಿ ಪದಾಧಿಕಾರಿಗಳು: ಇದೇ ವೇಳೆ ರೈತ ಸಂಘದ ನೂತನ ಸಮಿತಿಗೆ ಪದಾಧಿಕಾರಿಗಳನ್ನು ಮಾಡಲಾಯಿತು. ನೂತನ ಸಮಿತಿಗೆ ಅಧ್ಯಕ್ಷರಾಗಿ ಮೋಹಿನಿ ನಮಸೇಕರ, ಉಪಾಧ್ಯಕ್ಷರಾಗಿ ಉಲ್ಲಾಸ ತಳೇಕರ, ಭಾರತಿ ಎಸ್.ಕೆ. ಕದ್ರಾ, ಕಾರ್ಯದರ್ಶಿಯಾಗಿ ಸಂತೋಷ ನಾಯ್ಕ ಜರಡಿ, ಸಯಕಾರ್ಯದರ್ಶಿಯಾಗಿ ಅಂತೋನ ರೇಗೋ, ಪ್ರೇಮಾ ಸಾಲ್ಗಾಂವಕರ ಆಯ್ಕೆಯಾದರು, ಸಮಿತಿ ಸದಸ್ಯರಾಗಿ ನಿರ್ಮಲಾ ಕೃಷ್ಣ, ಅಶ್ವಿನಿ ಪೆಡ್ನೆಕರ, ಸೂರ್ಯನಾರಾಯಣ ಭಟ್, ದೇವಪ್ಪ ಮುರೋಳ, ಶಂಬಾಜಿ ಕೆ. ನಾಯ್ಕ, ಸಂಜನಾ ಎಸ್. ಕಲ್ಗುಟಕರ ಆಯ್ಕೆಯಾದರು.
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ
ಹಳೆದಿಗ್ಗೆವಾಡಿ ಗ್ರಾಮದ ಮಹಾದೇವ ಗಂಗಾಯಿ ಅಜ್ಜ ವಿಧಿವಶ 