ಸ್ವಚ್ಛತೆಯೆಡೆಗೆ ಕರ್ನಾಟಕ ಕೇಂದ್ರದ ಪ್ರಶಸ್ತಿ
ಮುಧೋಳ: ‘ಸ್ವಚ್ಛತೆಯೆಡೆಗೆ ತ್ವರಿತವಾಗಿ ಸಾಗುತ್ತಿರುವ ರಾಜ್ಯ’ ವಿಭಾಗದ ಪ್ರಶಸ್ತಿಗೆ ಕರ್ನಾಟಕ ಭಾಜನವಾಗಿದೆ. ಕೇಂದ್ರದ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ ನೀಡುವ 2021ನೇ ಸಾಲಿನ ಸ್ವಚ್ಛ ಸರ್ವೇಕ್ಷಣಾ ವಿಭಾಗದ ವಿವಿಧ ಪ್ರಶಸ್ತಿಗಳಿಗೆ ರಾಜ್ಯದ 9 ನಗರ ಸ್ಥಳೀಯ ಸಂಸ್ಥೆಗಳು ಆಯ್ಕೆಯಾಗಿವೆ. ನಗರ ಸ್ಥಳೀಯ ಸಂಸ್ಥೆಗಳು ಅಗತ್ಯ ಕ್ರಮ ಕೈಗೊಂಡಿದ್ದು, ಸ್ವಚ್ಛತೆ ಕುರಿತಂತೆ ರಾಜ್ಯದಲ್ಲಿ ಸಾಕಷ್ಟು ಪ್ರಗತಿ ಕಂಡು ಬರು ತ್ತಿದೆ. ರಾಷ್ಟ್ರದ 4,360 ಪಟ್ಟಣ ಮತ್ತು ನಗರಗಳ ಸ್ಥಳೀಯ ಸಂಸ್ಥೆಗಳ ಕಾರ್ಯ ವೈಖರಿ ಬಗ್ಗೆ ಅವಲೋಕನ ಮತ್ತು ಸಮೀಕ್ಷೆ ನಡೆಸಿರುವ ಕೇಂದ್ರವು ಕರ್ನಾಟಕ ರಾಜ್ಯಕ್ಕೆ ಪ್ರಶಸ್ತಿ ಘೋಷಿಸಿದೆ. 100ಕ್ಕೂ ಅಧಿಕ ನಗರ ಸ್ಥಳೀಯ ಸಂಸ್ಥೆ ಗಳನ್ನು ಒಳಗೊಂಡಿರುವ ರಾಜ್ಯಗಳ ಪೈಕಿ ಛತ್ತೀಸಗಡವು ಸ್ವಚ್ಛ ರಾಜ್ಯ ಪ್ರಶಸ್ತಿ ಪಡೆದಿದ್ದು, ರಾಜ್ಯಕ್ಕೆ 4ನೇ ಸ್ಥಾನ ದೊರೆತಿದೆ. ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ್ ಹಾಗೂ ಇಲಾಖೆಯ ಅಧಿಕಾರಿಗಳು ಶನಿವಾರ ಇಲ್ಲಿ ನಡೆದ ಸಮಾರಂಭದಲ್ಲಿ ಕೇಂದ್ರ ಸಚಿವ ಹರದೀಪ್ ಸಿಂಗ್ ಪುರಿ ಅವರಿಂದ ಪ್ರಶಸ್ತಿ ಸ್ವೀಕರಿಸಿದರು. ಶನಿವಾರ 50 ಸಾವಿರದಿಂದ 1 ಲಕ್ಷ ಜನಸಂಖ್ಯೆಯ ವಿಭಾಗದಲ್ಲಿ ಬಾಗಲಕೋಟೆ ಜಿಲ್ಲೆಯ ಮುಧೋಳ (ನಗರಸಭೆ)ವು ಸ್ವಚ್ಛತೆಯೆಡೆಗೆ ತ್ವರಿತವಾಗಿ ಸಾಗುತ್ತಿರುವ ನಗರ ಪ್ರಶಸ್ತಿಯನ್ನು ನಗರಸಭೆಯ ಪೌರಾಯುಕ್ತ ಎಸ್.ಜಿ.ಅಂಬಿಗೇರ ಅಧ್ಯಕ್ಷ ಸ್ವಾತಿ ಸೋನಾಪಿ ಕುಲಕರ್ಣಿ ಪಡೆದುಕೊಂಡರುನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ್ ಅವರು ನವದೆಹಲಿಯಲ್ಲಿ ಶನಿವಾರ ಕೇಂದ್ರ ಸಚಿವ ಹರದೀಪ್ ಸಿಂಗ್ ಪುರಿ ಅವರಿಂದ ಸ್ವಚ್ಛ ಸರ್ವೇಕ್ಷಣಾ ಪ್ರಶಸ್ತಿ ಸ್ವೀಕರಿಸಿದರು. ಪೌರಾಡಳಿತ ಇಲಾಖೆ ನಿರ್ದೇಶಕಿ ಎಂ.ಎಸ್. ಅರ್ಚನಾ, ನಗರಾಭಿವೃದ್ಧಿ ಇಲಾಖೆಯ ಜಂಟಿ ನಿರ್ದೇಶಕ ಶಂಕರ್, ಸಿಬ್ಬಂದಿ ಎಸ್.ವಿ. ಸ್ನೇಹಲತಾ ಹಾಗೂ ಗೀತಾ ಇದ್ದರು