ಕನಕದಾಸರು ಮಾನವ ಕುಲಕ್ಕೆ ದಾರಿ ದೀಪವಾಗಿದ್ದಾರೆ: ದಳವಾಯಿ
ಲೋಕದರ್ಶನ ವರದಿ
ಜಮಖಂಡಿ 12: ಕನಕದಾಸರು ಮಾನವ ಕುಲಕ್ಕೆ ದಾರಿ ದೀಪವಾಗಿದ್ದಾರೆ, ಸಮಾಜ ಅಭಿವೃದ್ಧಿಯಾಗಬೇಕಾದರೆ ಸಮಾಜದಲ್ಲಿನ ನುಣ್ಯತೆಗಳನ್ನು ಸರಿಪಡಿಸಿಕೊಳ್ಳಬೇಕು ಅಂದಾಗ ಮಾತ್ರ ಆರ್ಥಿಕ ಸಾಮಾಜಿಕವಾಗಿ ಅಭಿವೃದ್ಧಿಯಾಗಲು ಸಾಧ್ಯ ಎಂದು ಭೂಸೇನಾ ನಿಗಮದ ಮಾಜಿ ಅಧ್ಯಕ್ಷ ಶ್ರೀಶೈಲ ದಳವಾಯಿ ಹೇಳಿದರು.
ನಗರದ ಭಕ್ತ ಕನಕದಾಸ ಶಾಲೆಯ ಆವರಣದಲ್ಲಿ ತಾಲೂಕಾ ಆಡಳಿತ, ತಾಲೂಕಾ ಪಂಚಾಯತ, ನಗರಸಭೆ, ಭಕ್ತ ಕನಕದಾಸ ವಿದ್ಯಾವರ್ಧಕ ಸಂಘ ಹಾಗೂ ತಾಲೂಕಾ ಕುರುಬರ ಸಂಘ ಸಹಯೋಗದಲ್ಲಿ ನಡೆದ ಸಂತ ಶ್ರೇಷ್ಠ ಭಕ್ತ ಕನಕದಾಸರ 535ನೇ ಜಯಂತ್ಯೋತ್ಸವ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿದರು.
ನಗರದಲ್ಲಿ ಭಕ್ತ ಕನಕದಾಸರ ವೃತ್ತ ನಿರ್ಮಿಸಲು ಸಮಾಜದ ವತಿಯಿಂದ ವಂತಿಕೆ ಸಂಗ್ರಹಿಸಲಾಗುತ್ತಿದೆ ಶೀಘ್ರದಲ್ಲಿ ವೃತ್ತ ನಿರ್ಮಿ ಸುವ ಕಾರ್ಯ ಮಾಡಲಾಗುವುದು ಎಂದರು.
ಜಿಪಂ ಮಾಜಿ ಉಪಾಧ್ಯಕ್ಷ ಸುಶೀಲಕುಮಾರ ಬೆಳಗಲಿ ಮಾತನಾಡುತ್ತಾ ಮುಖಂಡ ಶ್ರೀಶೈಲ ದಳವಾಯಿ ಅವರು ಚುನಾವಣೆಯಲ್ಲಿ ಸ್ಪರ್ಧೆಸಿದರೆ ಅವರಿಗೆ ಸಂಪೂರ್ಣ ಬೆಂಬಲ ನೀಡುತ್ತೇವೆ, ಇರದಿದ್ದರೆ ನಾವು ಸ್ಪರ್ಧೆಸುತ್ತೆವೆ ಅದಕ್ಕೆ ಬೆಂಬಲ ನೀಡಿ ಎಂದು ನೇರವಾಗಿ ಹೇಳಿದರು.
ಬಿಜೆಪಿ ರೈತ ಮುಖಂಡ ಬಿ.ಎಸ್.ಸಿಂಧೂರ ಮಾತನಾಡುತ್ತಾ ಶಿಕ್ಷಣ ಸಂಘಟನೆ ಹೋರಾಟದಿಂದ ಸಮಾಜ ಅಭಿವೃದ್ಧಿಯಾಗುತ್ತದೆ, ಮಹಾಪುರುಷರ ಜಯಂತಿಗಳು ಒಂದು ಜಾತಿಗೆ ಸೀಮಿತವಾಗದೆ ಎಲ್ಲ ಜನಾಂಗದವರು ಪಾಲ್ಗೊಂಡು ಆಚರಿಸಿದರೆ ಅವರಿಗೆ ಗೌರವ ನೀಡಿದಂತಾಗುತ್ತದೆ ಎಂದರು.
ಭಕ್ತಕನಕದಾಸ ವಿದ್ಯಾವರ್ಧಕ ಸಂಘದ ಅಧ್ಯಕ್ಷ ನಾಗಪ್ಪ ಸನದಿ ಮಾತನಾಡಿ, ಶ್ರದ್ಧೆ ಭಕ್ತಿ ನಿಷ್ಠೆಯಿಂದ ಕಾರ್ಯಮಾಡಿದರೆ ಯಶಸ್ವಿ ವ್ಯಕತಿಯಾಗಲು ಸಾಧ್ಯ ಎಂದರು.
ಸಮಾಜದ ಅಧ್ಯಕ್ಷ ಮಲ್ಲು ಮೆಳ್ಳಿ, ಡಾ.ವಿವೇಕಾನಂದ ದಳವಾಯಿ, ಸಿ.ಟಿ.ಉಪಾದ್ಯೆ ಮಾತನಾಡಿದರು. ಬಿಎಲ್ಡಿಇ ಮಹಾವಿದ್ಯಾಲಯದ ಉಪನ್ಯಾಸಕ ಮಹಾದೇವ ಪೂಜಾರಿ ಉಪನ್ಯಾಸ ನೀಡಿದರು. ಯುವ ಮುಖಂಡ ಬಸವರಾಜ ನ್ಯಾಮಗೌಡ ಕಾರ್ಯಕ್ರಮ ಉದ್ಘಾಟಿಸಿದರು.
ಎಸ್ಎಸ್ಎಲ್ಸಿ, ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು, ವಿವಿಧ ಸಾಧಕರನ್ನು ಸನ್ಮಾನಿಸಿ ಗೌರವಿಸಿದರು.ಹುಲ್ಯಾಳ ಕ್ರಾಸ್ ಸೋಮಲಿಂಗೇಶ್ವರ ಜ್ಞಾನ ಸಿದ್ಧಾಶ್ರಮದ ಅದ್ವೈತಾನಂದ ಭಾರತಿ ಸ್ವಾಮೀಜಿ, ರುದ್ರಸ್ವಾಮಿ ಪೇಠದ ಸಹಜಾನಂದ ಶ್ರೀಗಳು, ಕೃಷ್ಣಾನಂದ ಶ್ರೀಗಳು, ಕೊಣ್ಣೂರ ಕರಿಸಿದ್ದೇಶ್ವರ ಗದ್ದುಗೆಯ ಪೂಜಾರಿಗಳು ಸಾನ್ನಿಧ್ಯವಹಿಸಿದ್ದರು.
ವೇದಿಕೆಯಲ್ಲಿ ನಗರಸಭೆ ಅಧ್ಯಕ್ಷ ದಾನೇಶ ಘಾಟಗೆ, ಏಗಪ್ಪ ಸವದಿ, ಎನ್.ಬಿ.ಗಸ್ತಿ, ಅಜರ್ುನ ದಳವಾಯಿ, ಈಶ್ವರ ವಾಳೆನ್ನವರ, ಡಾ.ಮಾಳೇಶ ಪೂಜಾರಿ, ಡಾ. ಕಾಶಿನಾಥ ಕಂಬಾಗಿ, ಸಿದ್ದು ಬಿಳ್ಳೂರ, ರಾಮಣ್ಣ ಕಡಕೋಳ, ಬಸವರಾಜ ಬಾಗೆನ್ನವರ, ಬಿ.ಎನ್.ಅಸ್ಕಿ, ಸದಾಶಿವ ದಳವಾಯಿ, ಸುಮಿತ್ರಾ ಗುಳಬಾಳ ಇತರರು ಇದ್ದರು. ತಹಸೀಲ್ದಾರ ಸದಾಶಿವ ಮಕ್ಕೋಜಿ ಸ್ವಾಗತಿಸಿದರು. ಚಿದಾನಂದ ಜಡಿಮಠ ನಿರೂಪಿಸಿದರು. ಸಿದ್ರಾಮಪ್ಪ ಹುಣಸಿಕಟ್ಟಿ ವಂದಿಸಿದರು.
ಬಾಕ್ಸ್ :
ಭವ್ಯ ಮೆರವಣಿಗೆ
ನಗರದ ಅಮೋಘ ಸಿದ್ದೇಶ್ವರ ದೇವಸ್ಥಾನ ಆವರಣದಿಂದ ಶಿವಾಜಿ ಸರ್ಕಲ್, ಕೋಟರ್್ ರೋಡ, ಅಕ್ಕಿಪೇಠೆ, ಹನುಮಾನ ದೇವಸ್ಥಾನ, ಅರ್ಬನ್ ಬ್ಯಾಂಕ್, ಅಶೋಕ ಸರ್ಕಲ್, ದೇಸಾಯಿ ಸರ್ಕಲ್, ಭಕ್ತ ಕನಕದಾಸ ವೃತ್ತ, ಮಾರ್ಗವಾಗಿ ಭಕ್ತ ಕನಕದಾಸ ಶಾಲೆಯವರೆಗೆ ಭವ್ಯ ಮೆರವಣಿಗೆ ಜರುಗಿತು.
ಸಾವಿರಾರು ಸಂಖ್ಯೆಯಲ್ಲಿ ಕುಂಬ ಹೊತ್ತ ಸುಮಂಗಲೆಯರು, ಕನಕದಾಸರ, ರಾಯಣ್ಣ, ಚೆನ್ನಮ್ಮ, ಒಬವ್ವ ಅವರ ವೇಶ ತೊಟ್ಟ ಮಕ್ಕಳು ಮೆರವಣಿಗೆಯಲ್ಲಿ ಗಮನ ಸೆಳೆದರು.
ಮೆರವಣಿಗೆಯಲ್ಲಿ ಮಾಜಿ ಶಾಸಕರಾದ ಶ್ರೀಕಾಂತ ಕುಲಕಣರ್ಿ, ಜಿ.ಎಸ್.ನ್ಯಾಮಗೌಡ, ಉದ್ಯಮಿ ನಾಡೋಜ ಜಗದೀಶ ಗುಡಗುಂಟಿ, ಬಸವರಾಜ ಕಲೂತಿ, ರಫಿಕ ಬಾರಿಗಡ್ಡಿ, ಮೋಹನ ಜಾಧವ, ಅಜಯ ಕಡಪಟ್ಟಿ, ಸುರೇಶಗೌಡ ಪಾಟೀಲ ಇತರರು ಇದ್ದರು.