ಮುಂಡರಗಿ

ಕನಕದಾಸರು ಸಮಾಜಕ್ಕೆ ಹಲವಾರು ಸಂದೇಶ ನೀಡಿದ್ದಾರೆ: ಶ್ರೀಗಳು

ಕನಕದಾಸರು ಸಮಾಜಕ್ಕೆ ಹಲವಾರು ಸಂದೇಶ ನೀಡಿದ್ದಾರೆ: ಶ್ರೀಗಳು

ಮುಂಡರಗಿ 17:  ವಚನ ಸಾಹಿತ್ಯದಂತೆ ದಾಸ ಸಾಹಿತ್ಯಕ್ಕಾಗಿ ನಾಡಿನ ಹಲವಾರು ಸಂತ ಶರಣರು ಮನುಷ್ಯನ ಬದುಕಿನ ಸಾತ್ವಿಕ ಸತ್ಯವನ್ನು ಸಮಾಜದ ಏಳ್ಗೆಗಾಗಿ ತಮ್ಮ ಬದುಕನ್ನೆ ಮುಡಿಪಾಗಿಟ್ಟಿದ್ದಾರೆ ಅಂತಹ ಶರಣರಲ್ಲಿ ಕನಕದಾಸದರು, ಸಮಾಜಕ್ಕೆ ಹತ್ತು ಹಲವಾರು ಸಂದೇಶಗಳನ್ನು ನೀಡಿದ್ದಾರೆ ಎಂದು ಕನಕ ಗುರುಪೀಠ ಕಾಗಿನೆಲೆ ಮಹಾಸಂಸ್ಥಾನದ ಮಠದ ನಿರಂಜನಾನಂದಪುರಿ ಮಹಾಸ್ವಾಮಿಗಳು ತಿಳಿಸಿದರು. 

ಪಟ್ಟಣದ ಪುರಸಭೆ ಮೈದಾನದಲ್ಲಿ ಕರ್ನಾಟಕ ಪ್ರದೇಶ ಕುರುಬರ ಸಂಘ ತಾಲೂಕಾ ಘಟಕ ಹಾಗೂ ತಾಲೂಕಾ ಆಡಳಿತ ಸಹಕಾರದೊಂದಿಗೆ ಜರುಗಿದ ಕನಕದಾಸರ 535ನೇ ಜಯಂತ್ಯೋತ್ಸವದ ಕಾರ್ಯಕ್ರಮ ದಿವ್ಯ ಸಾನಿದ್ಯ ವಹಿಸಿ ಅವರು ಮಾತನಾಡಿದರು. 

ಯುವಕರು ಅಸಭ್ಯವಾಗಿ ಹಾಡುಗಳನ್ನು ಹಾಕಿ ಕುಣಿಯವುದು, ಇನ್ನೊಬ್ಬರ ಮನಸ್ಸಿಗೆ ನೋವಾಗದಂತೆ ರೀತಿಯಲ್ಲಿ ವರ್ತಿಸದೇ, ಅವರನ್ನು ಪ್ರೀತಿಯಿಂದ ಕಾಣುವ ಮೂಲಕ ಮಹಾತ್ಮರ ಜಯಂತಿಗಳನ್ನು ಆಚರಿಸುವಂತಾಗಬೇಕು ಅಂದಾಗ ಮಾತ್ರ ನಿಜವಾದ ಕನಕದಾಸರ ಆಚರಣೆ ಮಾಡಿದಂತಾಗುತ್ತದೆ. ಈ ನಿಟ್ಟಿನಲ್ಲಿ ಸಮಾಜದ ಯುವಕರು ಬದಲಾವಣೆಯ ಜೊತೆಗೆ ಜಾಗೃತಗೊಂಡು ಸುಭದ್ರ ಸಮಾಜ ನಿರ್ಮಿಸಲು ಹೆಜ್ಜೆ ಇಡಬೇಕು,  ಕನಕದಾಸರ ಜಯಂತಿ ಅದ್ದೂರಿ ಆಚರಣೆಗೆ ಸಿಮೀತವಾಗದೇ ಅವರ ಕೀರ್ತನೆಗಳನ್ನು ಪ್ರತಿಯೊಬ್ಬರು ಮನೆಯಲ್ಲಿ ಓದುವ ಮೂಲಕ ಅವುಗಳನ್ನು ನಿಜ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ಸಲಹೆ ನೀಡಿದರು. 

16ನೇ ಶತಮಾನದಲ್ಲಿ ಕನಕದಾಸರು ಹೇಳಿದಂತೆ ಕುಲ ಕುಲವೆಂದು ಹೊಡದಾಡದೇ ದ್ವೇಷ,ಅಸೂಯೆಗಳನ್ನು ಹೋಗಲಾಡಿಸಿ ಜೊತೆಗೆ ಜ್ಯಾತಿ ನಿರ್ಮೂಲನೆ ಕಿತ್ತು ಹಾಕಿ ಎಲ್ಲಾ ಮಹಾತ್ಮರ ಆದರ್ಶಗಳನ್ನು ಎಲ್ಲಾ ವರ್ಗದ ಜನರೊಂದಿಗೆ ಇಂತಹ ಜಯಂತಿಗಳನ್ನು ಆಚರಿಸದರೇ ಅರ್ಥಪೂರ್ಣವಾಗಲು ಸಾದ್ಯ ಎಂದು ತಿಳಿಸಿದರು. 

ಡೊಳ್ಳು ಭಾರಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದ ಶಾಸಕ ರಾಮಣ್ಣ ಲಮಾಣಿ ಮಾತನಾಡಿ ಕಳೆದ ಎರಡು ಭಾರಿ ಶಾಸಕನಾಗಲು ಹಾಲುಮತ ಸಮಾಜ ಭಾಂದವರ ಬೆಂಬಲದಿಂದಾಗಿ ಎಂದಿಗೂ ನಿಮ್ಮ ಋಣ ತೀರಿಸಲು ಸಾದ್ಯವಿಲ್ಲ, ಜೊತೆಗೆ ಶಿರಹಟ್ಟಿ ಈಗಾಗಲೇ ಕನಕ ಭವನ ನಿರ್ಮಾಣಕ್ಕೆ 1ಕೋಟಿ, ಲಕ್ಷ್ಮೇಶ್ವರಕ್ಕೆ 1 ಕೋಟಿ ವೆಚ್ಚದಲ್ಲಿ ಭವನ ನಿರ್ಮಾಣಕ್ಕೆ ಚಾಲನೆ ನೀಡಿದ್ದು, ಮುಂಬರುವ ದಿನಗಳಲ್ಲಿ ಮುಂಡರಗಿ ಪಟ್ಟಣದಲ್ಲಿ ಭವನ ನಿರ್ಮಾಣಕ್ಕೆ 2 ಕೋಟಿ ಅನುಧಾನ ನೀಡಲಾಗವುದು ಎಂದು ಭರವಸೆ ನೀಡಿದರು. 

ಮಾಜಿ ಶಾಸಕ ರಾಮಕೃಷ್ಣ ದೊಡ್ಡಮನಿ ಮಾತನಾಡಿ ಮನುಕುಲದ ಮಾನವೀಯ ಮೌಲ್ಯಗಳನ್ನು ಜಗತ್ತಿಗೆ ಸಾರಿದ ಮಹಾನ್ ಸಂತ ಕನಕದಾಸರು, ದಾಸ ಸಾಹಿತ್ಯದ ಮೂಲಕ ಜ್ಯಾತಿ ನಿರ್ಮೂಲನೆ ಹೋಗಲಾಡಿಸಲು ಜನರಲ್ಲಿ ಜಾಗೃತಿ ಮೂಡಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ, ಎಲ್ಲಾರು ಏಕತೆಯಿಂಧ ಒಗ್ಗಟ್ಟಾಗಿದ್ದರೇ ಬದುಕು ಸುಂದರವಾಗಿರುತ್ತದೆ, ಹಿಂದಿನ ಸಿದ್ದರಾಮಯ್ಯ ಅವಧಿಯಲ್ಲಿ ಜಿಲ್ಲೆಯಲ್ಲಿ ಭವನಗಳನ್ನು ನಿರ್ಮಿಸಲು, ವಸತಿ ಶಾಲೆಗಳಿಗೆ ಹೆಚ್ಚಿನ ಅನುಧಾನ ನೀಡುವ ಮೂಲಕ ಹಲವಾರು ಭಾಗ್ಯಗಳನ್ನು ರಾಜ್ಯ ಬಡ ಜನತೆಗೆ ನೀಡಿದ್ದಾರೆ ಎಂದರು. 

ಕುರುಬ ಸಮಾಜ ಕಾರ್ಯದರ್ಶಿ ರಾಘವೇಂದ್ರ ಕುರಿಯವರ ಸ್ವಾಗತಿಸಿ ಬಿ.ಬಿ.ಬೆನಕನವಾರಿ ನಿರೂಪಿಸಿ ವೈ.ಎಚ್‌.ಬಚೇನಹಳ್ಳಿ ವಂದಿಸಿದರು.ತಾಲೂಕಾ ಕುರುಬ ಸಮಾಜ ಅದ್ಯಕ್ಷ ಮಂಜುನಾಥ ಮುಂಡವಾಡ ಅದ್ಯಕ್ಷತೆ ವಹಿಸಿದ್ದರು.ನಿಂಗಪ್ಪ ಗುಡ್ದದ ತಂಡದಿಂದ ಸಂಸ್ಕ್ರತಿಕ ಕಾರ್ಯಕ್ರಮ ಜರುಗಿತು. 

ಈ ಸಂದರ್ಭದಲ್ಲಿ ಶಿವಲಿಂಗಯ್ಯ ಗುರುವಿನ, ಕೆಪಿಸಿಸಿ ಕಾರ್ಯದರ್ಶಿ ವೈ.ಎನ್‌.ಗೌಡರ, ಬ್ಲಾಕ್ ಕಾಂಗ್ರೆಸ್ ಅದ್ಯಕ್ಷ ಡಿ.ಡಿ.ಮೊರನಾಳ, ಸಹದೇವ ಯರಗೊಪ್ಪ, ತಹಶೀಲ್ದಾರ ಶೃತಿ ಮಳ್ಳಪ್ಪಗೌಡ್ರ, ಪುರಸಭೆ ಅದ್ಯಕ್ಷೆ ಕವಿತಾ ಅಂದಪ್ಪ ಉಳ್ಳಾಗಡ್ಡಿ, ಉಪಾದ್ಯಕ್ಷ ಶಿವಪ್ಪ ಚಿಕ್ಕಣ್ಣವರ, ರವಿ ದಂಡಿನ, ಹೇಮಂತಗೌಡ ಪಾಟೀಲ, ಜ್ಯೋತಿ ಕುರಿ, ಡಾ.ಕುಮಾರಸ್ವಾಮಿ ಹಿರೇಮಠ, ರಾಮಕೃಷ್ಣ ರೊಳ್ಳಿ, ರುದ್ರಗೌಡ ಪಾಟೀಲ, ರಾಜಾಭಕ್ಷಿ ಬೆಟಗೇರಿ, ಶರಣಪ್ಪ ಮುದಿಯಜ್ಜನವರ, ದೇವಪ್ಪ ರಾಮೇನಹಳ್ಳಿ, ಎಸ್‌.ಬಿ.ರಾಮೇನಹಳ್ಳಿ, ಮಂಜುನಾಥ ಡಂಬಳ, ಶಾಂತವ್ವ ಬಳ್ಳಾರಿ, ಯಲ್ಲಪ್ಪ ಕುಕನೂರ ಇತರರು ಇದ್ದರು. 


ಸುದ್ದಿ ಓದಿ