ಕನಕದಾಸರ ಜಯಂತಿ ಕಾರ್ಯಕ್ರಮ
ಲೋಕದರ್ಶನ ವರದಿ,
ಜಮಖಂಡಿ 12: ತಾಲೂಕಿನ ಹುನ್ನೂರು ಗ್ರಾಮದಲ್ಲಿ ಅದ್ವೈತಾನಂದ ಭಾರತಿ ಮಹಾಸ್ವಾಮಿಗಳು, ಸೋಮಲಿಂಗೆಶ್ವರ ಜ್ಞಾನ ಸಿದ್ದಾಶ್ರಮ ಇವರ ಸಾನಿಧ್ಯದಲ್ಲಿ ಕನಕದಾಸರ ಜಯಂತಿ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಕನಕರ ಭಾವಚಿತ್ರಕ್ಕೆ ಪೂಜೆ ನೆರವೆಸಿ ಆಶಿರ್ವಚನ ನೀಡಿದರು. ಮಾಜಿ ಶಾಸಕ ಶ್ರೀಕಾಂತ ಕುಲಕರ್ಣಿ ಅವರು ಪುತ್ಥಳಿಗೆ ಮಾಲಾರ್ಪಣೆ ಮಾಡಿ ಮಾತನಾಡಿದರು. ಉದ್ಯಮಿ ಬಸವರಾಜ ನ್ಯಾಮಗೌಡ ಕನಕ ಧ್ವಜಾರೋಹಣ ನೆರವೇರಿಸಿದರು.ಜಿಪಂ ಮಾಜಿ ಸದಸ್ಯ ಅರ್ಜುನ ದಳವಾಯಿ,ಹುನ್ನುರ ಗ್ರಾಪಂ ಅಧ್ಯಕ್ಷೆ ರೇಣುಕಾ ದೊಡಮನಿ, ಶೇಖರ ಸಾವಳಗಿ, ಬಸವಂತಪ್ಪ ಹಣಗಂಡಿ, ಧರೆಪ್ಪ ತೇಲಿ, ಪಿಕೆಪಿಎಸ್ ಅಧ್ಯಕ್ಷರಮೇಶ ಹುಂಕಿ,ರಾಮಣ್ಣ ಕಡಕೊಳ,ಹೂವಪ್ಪ ಉಷಾಕಾರ, ನಾಗಪ್ಪ ಹೆಗಡೆ, ಪರಶು ಗುಮ್ಮನ್ನವರ, ಕಲ್ಲಪ್ಪ ದಪೇದಾರ, ಶ್ರೀಶೈಲ ಬುದ್ನಿ ,ದುಂಡಪ್ಪ ಗುಳಬಾಳ, ನಿಂಗಪ್ಪ ಸವನೂರ,ಶಿವಪ್ಪ ಸಿಂಗ, ಬೀಮಶಿ ಕರಿಗಾರ,ಬಸವರಾಜಸಸಲಾದಿ, ಮುತ್ತಪ್ಪ ಜಕ್ಕಣ್ಣವರ,ಸಿದಗೀರಿ ಜಕ್ಕಣ್ಣವರ,ಶ್ರೀಶೈಲ ಬಣ್ಣವಗೊಳ ಭಾಗವಹಿಸಿದ್ದರು. ವಕೀಲ ಎಂ.ಎಸ್.ಜಕ್ಕಣ್ಣವರ ಸ್ವಾಗತಿಸಿ, ನಿರೂಪಿಸಿದರು, ದಶರಥ ಕರಿಗಾರ ವಂದಿಸಿದರು.