ಕಲಾಂ ಉರ್ದು ಶಾಲಾ ಪ್ರಾರಂಭೋತ್ಸವ ವೆಲ್ಕಮ್ ಮೂಲಕ ವಿದ್ಯಾರ್ಥಿಗಳನ್ನು ಬರಮಾಡಿಕೊಂಡ ಆಡಳಿತ ಮಂಡಳಿ
Kalam Urdu School Inauguration Ceremony Welcomed by the Management Board
ಲೋಕದರ್ಶನ ವರದಿ
ಲಕ್ಷ್ಮೇಶ್ವರ 01: ರಾಜ್ಯಾದ್ಯಂತ ಪ್ರಸ್ತುತ ವರ್ಷದ 26-27-ನೇ ಸಾಲಿನ ಶೈಕ್ಷಣಿಕ ಶಾಲಾ ಪ್ರಾರಂಭೋತ್ಸವ ಗೊಂಡವು ಅದರಂತೆ ಪಟ್ಟಣದ ಹೊಸ ಬಸ್ ನಿಲ್ದಾಣದ ಹಿಂದುಗಡೆ ಬರುವ ಕಲಾಂ ನಗರದಲ್ಲಿ ಇರುವ ಕಲಾಂ ಉರ್ದು ಹಿರಿಯ ಪ್ರಾಥಮಿಕ ಶಾಲೆಯಪ್ರಾರಂಭೋತ್ಸವದ ಅಂಗವಾಗಿ ಪ್ರಥಮ ದಿನ 1-6-26 ರಂದು ಶಾಲೆಗೆ ಬಂದ ವಿದ್ಯಾರ್ಥಿಗಳನ್ನು ಶಾಲೆಯ ಆಡಳಿತ ಮಂಡಳಿಯವರು ಶಾಲೆಯ ಎಲ್ಲಾ ಶಿಕ್ಷಕ ವೃಂದದವರು ಶಾಲೆಗೆ ಬಂದ ವಿದ್ಯಾರ್ಥಿಗಳಿಗೆ ಗುಲಾಬಿ ಹೂವು ನೀಡಿ ಸಿಹಿ ತಿನಿಸಿ ವೆಲ್ಕಮ್ ಮಾಡುವ ಮೂಲಕ ಸಂಭ್ರಮದೊಂದಿಗೆ ಬರಮಾಡಿಕೊಂಡರು ಶಾಲೆಗೆ ಬಂದ ವಿದ್ಯಾರ್ಥಿಗಳನ್ನು ಮತ್ತು ವಿದ್ಯಾರ್ಥಿಗಳ ಪಾಲಕರನ್ನು ಶಾಲಾ ಪ್ರಾರಂಭೋತ್ಸವದ ಕುರಿತು ಮಾತನಾಡಿದ ಆಡಳಿತ ಮಂಡಳಿಯ ಅಧ್ಯಕ್ಷರಾದ ರಿಯಾಜ ಅಹ್ಮದ ಗದಗ ಅವರು ಪ್ರಾರಂಭೋತ್ಸವದ ದಿನದಂದು ಶಾಲೆಗೆ ಆಗಮಿಸಿದ.
ಎಲ್ಲಾ ವಿದ್ಯಾರ್ಥಿಗಳಿಗೆ ಮತ್ತು ವಿದ್ಯಾರ್ಥಿಗಳ ಪಾಲಕರಿಗೆ ಶುಭಾಶಯಗಳನ್ನು ತಿಳಿಸಿದ ಅವರು ಪ್ರಸ್ತುತ ವರ್ಷದಿಂದ ಶಾಲೆಗೆ ಬರುವ ಹೊಸ ವಿದ್ಯಾರ್ಥಿಗಳು ಮತ್ತು ನಮ್ಮ ಹಳೆ ವಿದ್ಯಾರ್ಥಿಗಳು ಯಾವುದೇ ಸಂಕೋಚ ಭಯ ಪಡದೆ ಶಾಲೆಗೆ ಬನ್ನಿ ಇದು ನಿಮ್ಮ ಶಾಲೆ ನಿಮಗೆ ಉತ್ತಮ ಶಿಕ್ಷಣ ನೀಡುವುದೇ ನಮ್ಮ ಶಾಲೆಯ ಶಿಕ್ಷಕ ವೃಂದದವರು ಮತ್ತು ಆಡಳಿತ ಮಂಡಳಿಯವರ ಉದ್ದೇಶವಾಗಿದೆ ನಿಮ್ಮ ಮನೆಯ ಅಕ್ಕ-ಪಕ್ಕದ ಮಕ್ಕಳನ್ನು ಸಹ ನಮ್ಮ ಶಾಲೆಗೆ ಕರೆತನ್ನಿ ಕಡಿಮೆ ಪೀ ಯಲ್ಲಿ ಉತ್ತಮ ಶಿಕ್ಷಣವನ್ನು ನೀಡುತ್ತೇವೆ ಪ್ರತಿ ವಿದ್ಯಾರ್ಥಿಗಳ ಉತ್ತಮ ಭವಿಷ್ಯವೇ ನಮ್ಮ ಕಲಾಂ ಉರ್ದು ಹಿರಿಯ ಪ್ರಾಥಮಿಕ ಶಾಲೆಯ ಉದ್ದೇಶವಾಗಿದೆ ಎಂದರು ಈ ಸಮಯದಲ್ಲಿ ಶಾಲೆಯ ಆಡಳಿತ ಮಂಡಳಿಯ ಉಪಾಧ್ಯಕ್ಷರಾದ ಬಸೀರ ಅಹ್ಮದ್ ಚೌರಿ ಹಾಶಂ ಪೀರ್ ಕಣಿಕೆ ಗುಡುಸಾಬ ಗುಡಿಗೇರಿ ಅಬ್ದುಲ್ ರಶೀದ್ ಬಳ್ಳಾರಿ ಮಹ್ಮದ್ ಹನೀಫ್ ಮಂಜಲಾಪುರ ಹಾಶಂ ಹುಸೇನ್ ಗುತ್ತಲ್ ಇಂತಿಮಿಯಾಜ್ ಅಹ್ಮದ ಬಂಕಾಪುರ ಖಾಜಾಸಾಬ ಜಮಲಕಾನವರ ಸೇರಿದಂತೆ ಶಾಲೆಯಲ್ಲಿ ಶಿಕ್ಷಕ ವೃಂದದವರು ವಿದ್ಯಾರ್ಥಿಗಳು ವಿದ್ಯಾರ್ಥಿಗಳ ಪಾಲಕರು ಶಾಲಾ ಪ್ರಾರಂಭೋತ್ಸವದಲ್ಲಿ ಪಾಲ್ಗೊಂಡಿದ್ದರು.
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ
ಹಳೆದಿಗ್ಗೆವಾಡಿ ಗ್ರಾಮದ ಮಹಾದೇವ ಗಂಗಾಯಿ ಅಜ್ಜ ವಿಧಿವಶ
ಆರೈಕೆಗಿದ್ದವನಿಂದ 1.02 ಕೋಟಿಯ 930 ಗ್ರಾಂ ಚಿನ್ನ ಕಳ್ಳತನ: ಇಬ್ಬರ ಬಂಧನ, 73.03 ಲಕ್ಷದ ಚಿನ್ನ ವಶಕ್ಕೆ 