ಅನಕ್ಷರಸ್ಥ ಕೃಷಿ ಕುಟುಂಬದ ಅಂಧ ವಿದ್ಯಾರ್ಥಿ ಜ್ಯೋತಿ ರಾಜ್ಯಕ್ಕೆ ದ್ವಿತೀಯ
ಜಿಲ್ಲಾಧಿಕಾರಿಯಾಗುವ ಕನಸು ಹೊತ್ತ ಬಾಲಕಿ
ಮುಧೋಳ 10: ತಾಲ್ಲೂಕಿನ ಉತ್ತೂರ ಗ್ರಾಮದ ಕೃಷಿ ಮನೆತನದ ಮಾರುತಿ ಕಟಕೋಳ ಹಾಗು ಸುಮಂಗಲಾ ದಂಪತಿಗಳ ಪುತ್ರಿ ಜ್ಯೋತಿ ಮಾರುತಿ ಕಟಕೋಳ 2020-21ನೇ ಸಾಲಿನ ಎಸ್.ಎಸ್.ಎಲ್.ಸಿ ವಾರ್ಷಿಕ ಪರೀಕ್ಷೆಯಲ್ಲಿ 625ಕ್ಕೆ 564 ಅಂಕ ಪಡೆದು ಶೇ 90.24 ಅಂಕಗಳನ್ನು ಪಡೆದು ಅಂಧ ವಿದ್ಯಾರ್ಥಿಗಳ ವಿಭಾಗದಲ್ಲಿ ದ್ವಿತೀಯ ಸ್ಥಾನ ಪಡೆದು ಎಲ್ಲ ಅಂಧ ವಿದ್ಯಾರ್ಥಿಗಳಿಗೆ ಮಾದರಿಯಾಗಿದ್ದಾಳೆ.
ಮುಧೋಳ ತಾಲ್ಲೂಕಿನ ಉತ್ತೂರ ಗ್ರಾಮದಲ್ಲಿ ಜನಿಸಿದ ಬೆಳಕನ್ನು ಸೂಚಿಸುವ ಹೆಸರನ್ನು ಇಟ್ಟುಕೊಂಡ ಜ್ಯೋತಿ ಮಾರುತಿ ಕಟಕೋಳ ಹುಟ್ಟುತ್ತಲೇ ಕುರುಡಾಗಿದ್ದಳು,ಈ ಕಾರಣಕ್ಕಾಗಿ ಅನಕ್ಷರಸ್ಥ ಮನೆತನದಲ್ಲಿ ಈ ಬಾಲಕಿಯನ್ನು ಸ್ಥಳಿಯ ಸಾಮಾನ್ಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಒಂದರಿಂದ ಏಳನೆಯ ತರಗತಿಯವರೆಗೆ ವಿದ್ಯಾಭ್ಯಾಸ ಮಾಡಿ ಮುಂದೆ ಗದಗ ಜಿಲ್ಲೆಯ ರೋಣ ತಾಲ್ಲೂಕಿನ ಹೊಳೆ ಆಲೂರಿನ ಜ್ಞಾನಸಿಂಧು ಅಂಧಮಕ್ಕಳ ವಸತಿ ಶಾಲೆಯಲ್ಲಿ ಓದಿದ ಈ ವಿದ್ಯಾರ್ಥಿನಿ ಕೊಟ್ಟ ಕಾರ್ಯವನ್ನು ಶೃದ್ಧಾಭಕ್ತಿಯಿಂದ ಬ್ರೈಲ್ ಲಿಪಿ ಕಲಿತು ಓದಿ ಈಗ ಶೇ 90.14 ಅಂಕಗಳನ್ನು ಪಡೆದು ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದಿದ್ದಾಳೆ.
ಮನೆಯಲ್ಲಿ ಕಸಗೂಡಿಸುವದು,ಬಾಂಡೆ ತೊಳೆಯುವದು ಹಿಡಿದು ಎಲ್ಲ ಸಣ್ಣಪುಟ್ಟ ಕಾರ್ಯಗಳನ್ನು ಮಾಡಿ ಸಹಕಾರಿಯಾಗುವದಲ್ಲದೆ ಅನಕ್ಷರಸ್ಥ ಕುಟುಂಬದ ಸದಸ್ಯಳಾದ ಈ ಬಾಲಕಿ ನಾನು ಅಂಧನಾದರೂ ಯಾರಿಗೂ ಹೊರೆಯಾಗಬಾರದು ಎನ್ನುವ ಮನಸ್ಸಿನವಳು ತಾನು ಓದಿ ಜಿಲ್ಲಾಧಿಕಾರಿಯಾಗಿ ಬಡವರ ಅಂಗವಿಕರು ನಿರ್ಗತಿಕರ ಬಾಳಿನ ಆಶಾಕಿರಣವಾಗಬೇಕು ಎನ್ನುವ ಹೆಬ್ಬಯಕೆಯನ್ನು ಇಟ್ಟುಕೊಂಡಿರುವ ಈ ಬಾಲಕಿ ಎಸ್.ಎಸ್.ಎಲ್.ಸಿಯಲ್ಲಿ ಕನ್ನಡಕ್ಕೆ 118,ಇಂಗ್ಲೀಷ 100 ಹಿಂದಿ 100 ಅರ್ಥಶಾಸ್ತ್ರ 88,ರಾಜ್ಯಶಾಸ್ತ್ರ 64 ಸಮಾಜಶಾಸ್ತ್ರ 94 ಅಂಕಗಳನ್ನು ಪಡೆದುಕೊಂಡಿದ್ದಾಳೆ.
“ ನನಗೆ ಕಣ್ಣು ಕಾಣುವದಿಲ್ಲ ಆದರೆ ನಾನು ಯಾರಿಗೂ ಬಾರವಾಗಿರಬಾರದು ನನ್ನ ತಂದೆ ಹಿ ತಾಯಿಗಳಲ್ಲಿ ನನ್ನನ್ನು ಹೆತ್ತದ್ದಕ್ಕೂ ಸ್ವಾರ್ಥಕ ಮನೋಭಾವ ಮೂಡಬೇಕು ಆರೀತಿಯಲ್ಲಿ ಓದಿ ನಾನು ಜಿಲ್ಲಾಧಿಕಾರಿಯಾಗಿ ಸಮಾಜದ ನಿರ್ಗತಿಕರ,ಬಡವರ ಕಣ್ಣೀರು ಒರೆಸುವ ಕಾರ್ಯ ಮಾಡಿಯೇ ಮಾಡುತ್ತೇನೆ, ಕಣ್ಣು ಇಲ್ಲವೆಂದು ಮನೆಯಲ್ಲಿ ಕುಳಿತುಕೊಳ್ಳುವ ಜನರಿಗೆ ನಾನು ಮಾದರಿಯಾಗಬೇಕು ಈ ಕಾರಣಕ್ಕಾಗಿ ನಾನು ಕೆಲವೆ ದಿನದಲ್ಲಿ ಬ್ರೈಲ್ ಲಿಪಿ ಕಲಿತು ಎಂಟರಿಂದ ಹತ್ತನೆಯ ತರಗತಿಯೊಳಗೆ ಸಂಗೀತ,ಕಂಪ್ಯೂಟರ ಕಳಿತಿದ್ದೇನೆ ನನಗೆ ಅಸಾಧ್ಯವೆಂಬುದು ಯಾವುದು ಇಲ್ಲ ಎಂಬುದನ್ನು ನಮ್ಮ ಹೊಳೆ ಆಲೂರಿನ ಜ್ಞಾನಸಿಂಧು ವಸತಿ ಶಾಲೆ ಕಲಿಸಿಕೊಟ್ಟಿದೆ.ಅವರಿಗೆ ನನ್ನ ಹೆತ್ತವರಿಗೆ ಧನ್ಯವಾದಗಳು”
ಕು.ಜ್ಯೋತಿ ಮಾರುತಿ ಕಟಕೋಳ ಅಂಧ ವಿದ್ಯಾರ್ಥಿನಿ
“ ಅವಳಲ್ಲಿ ಸಾಧನೆ ಮಾಡಬೇಕು ಸಮಾಜದಲ್ಲಿ ಅಂಧ ಮಕ್ಕಳನ್ನು ಕಿಳರಮೆಯಾಗಿ ನೋಡುವ ದೃಷ್ಟಿಕೋನ ಬದಲಾಗಬೇಕು ಎನ್ನುವ ಕಾರಣಕ್ಕಾಗಿ ಅವಳು ಕೇವಲ ಮೂರು ತಿಂಗಳಲ್ಲಿ ಬ್ರೈಲ್ ಲಿಪಿ ಕಲಿತು ನಿತ್ಯವೂ ಸಂಗೀತ,ಹಗೂ ಕಂಪ್ಯೂಟರ ಕಲಿತು ಎಸ್.ಎಸ್.ಎಲ್.ಸಿ ಅಭ್ಯಾಸ ಮಾಡುತ್ತಿದ್ದಳು,ಇವಳಿಗೆ ತಂದೆ-ತಾಯಿಯ ಪ್ರೋತ್ಸಾಹ ಸಹ ಇದೆ”
ಶಿವಾನಂದ ಕೆಲೂರ ಪ್ರಧಾನ ಕಾರ್ಯದರ್ಶಿ
ಜ್ಞಾನಸಿಂಧು ಅಂಧಮಕ್ಕಳ ವಸತಿ ಶಾಲೆ ಹೊಳೆ ಆಲೂರು