ಜೈನ ಮುನಿಯ ಸಾವಿಗೆ ನ್ಯಾಯ ದೊರಕಲಿ: ಕುಕನೂರ ಶ್ರೀ
ಕುಕನೂರ 18 : ರಾಜ್ಯದಲ್ಲಿ ನಡೆದ ಜೈನ ಮುನಿಯ ಸಾವಿಗೆ ಸರ್ಕಾರ ನ್ಯಾಯ ದೊರಕಿಸಿ ಕೊಡಬೇಕು, ಇಂತಹ ಘಟನೆಗಳು ಮತ್ತೆ ಮರುಕಳಿಸದಂತೆ ಸೂಕ್ತ ಕ್ರಮವಹಿಸಬೇಕೆಂದು ಶ್ರೀಮಠದ ಮನಿಪ್ರ ಮಹಾದೇವ ಸ್ವಾಮಿಗಳು ಹೇಳಿದರು.
ಕುಕನೂರ ಪಟ್ಟಣದ ಅನ್ನದಾನೀಶ್ವರ ಮಠದಲ್ಲಿ ಶ್ರೀಮಠ ಮತ್ತು ಅನ್ನದಾನೀಶ್ವರ ಅಕ್ಕನ ಬಳಗ ವತಿಯಿಂದ ನಡೆದ 176 ನೇ ಶಿವಾನುಭವ ಮತ್ತು ಪ್ರತಿಭಾ ಪುರಸ್ಕಾರ ಸಮಾರಂಭದ ಸಾನೀದ್ಯ ವಹಿಸಿ ಮಾತನಾಡುತ್ತಾ ಜೈನಧರ್ಮವು ಅತ್ಯಂತ ಪ್ರಾಚೀನವಾದುದು, ಭಗವಾನ್ ಮಹಾವೀರನ ಭೋಧನೆಗಳ ಸಂಕಲನವು ಜೈನ ಧರ್ಮದ ಪವಿತ್ರ ಗ್ರಂಥಗಳನ್ನು ರೂಪಿಸುತ್ತದೆ ಇಂತಹ ಧರ್ಮದ ಗುರುಗಳ ಹತ್ಯೆ ಅತ್ಯಂತ ಖಂಡನೀಯವಾದದ್ದು, ಯಾವುದೇ ಧರ್ಮದ ಗುರುಳಿಗೆ ಇಂತಹ ಸ್ಥಿತಿ ಬರಬಾರದು ಎಂದರು.
ನಂತರ ಗಿರಿಜಾ ನರೆಗಲ್ಲಮಠ ಮಾತನಾಡುತ್ತಾ ಮಕ್ಕಳು ಉತ್ತಮ ಶಿಕ್ಷಣದ ಜೊತೆಗೆ ಸಂಸ್ಕಾರ ಹೊಂದಬೇಕು, ಸಂಸ್ಕಾರವಿಲ್ಲದ ಶಿಕ್ಷಣಕ್ಕೆ ಮೌಲ್ಯವಿರುವುದಿಲ್ಲ, ತಂದೆ ತಾಯಿ ಮತ್ತು ಗುರುಗಳಿಗೆ ಹಿರಿಯರಿಗೆ ಗೌರವ ನೀಡುತ್ತಾ ಉತ್ತಮ ಬದುಕನ್ನ ಕಟ್ಟಿಕೊಳ್ಳಬೇಕು, ನಮ್ಮಿಂದ ಹೆತ್ತವರಿಗೆ ಕೀರ್ತಿ ಬರುವಂತ ಸಾಧನೆ ಮಾಡಬೇಕು ಎಂದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅನ್ನಪೂರ್ಣ ಬಡಿಗೇರ ಅಕ್ಕನ ಬಳಗ ಎಂಬ ಸಂಘಟನೆ ಉತ್ತಮ ಕಾರ್ಯ ಮಾಡುತ್ತೀದ್ದು, ಮಹಿಳೆಯರು ಇಂತಹ ಕಾರ್ಯಕ್ರಮಗಳಲ್ಲಿ ಭಾಗವಹಿಸಬೇಕು, ಬದುಕಿನಲ್ಲಿ ಶರಣ ಶರಣೆಯರ ವಚನಗಳ ಚಿಂತನೆ ನಡೆಯಬೇಕು, ಪ್ರತಿನಿತ್ಯ ವಚನಗಳ ಪಠಣದಿಂದ ಮನಸ್ಸು ಹಗುರಾಗುತ್ತದೆ ಎಂದರು.
ಎಸ್ಎಸ್ಎಲ್ಸಿ ಉತ್ತಮ ಅಂಕ ಪಡೆದ ವಿದ್ಯಾರ್ಥಿಗಳಾದ ಐಶ್ವರ್ಯ ಜೋಳದ, ಮಂಜುಳಾ ಕಕ್ಕಿಹಳ್ಳಿ, ಸುಮಾ ಗೊರ್ಲಿ ಕೊಪ್ಪ, ರೋಹಿತ ಶಿವಶಿಂಪರ ಇವರಿಗೆ ಸನ್ಮಾನ ಮಾಡಲಾಯಿತು.
ಶಿಕ್ಷಕ ಮಹೇಶ ಹಕಾರಿ, ಶಿವಬಾಯಿ ಯಕ್ಲಾಸಪುರ, ಸಿದ್ದಪ್ಪ ಪೂಜಾರ, ತಿಪ್ಪಣ್ಣ, ನೀರ್ಮಲಾ ಕಳ್ಳಿಮಠ, ಅನ್ನಪೂರ್ಣ ಚಟ್ನಿ, ಸುನಿತಾ, ಕವಿತಾ ಗುತ್ತಿ, ಶಿವಲೀಲಾ ಕರಿಗಾರ, ಕಾವ್ಯ ಗುರುಮಠ, ಅನ್ನದಾನೀಶ್ವರ ಅಕ್ಕನ ಬಳಗದ ಸದಸ್ಯರು ಮತ್ತು ಇತರರು ಇದ್ದರು.