ಜೂ. 12ರಂದು ಪತ್ರಕರ್ತರ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ಯಶಸ್ವಿಗೊಳಿಸಿ: ಕಳ್ಳಿಮನಿ
ಲೋಕದರ್ಶನ ವರದಿ
ಕುಕನೂರ 30: ಜಿಲ್ಲೆಯ ಗಂಗಾವತಿಯಲ್ಲಿ ಜೂನ್ 12ರಂದು ನಡೆಯುವ ಪತ್ರಕರ್ತರ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ನಗರ ಕಾರ್ಯದಶರ್ಿ ಹಾಗೂ ಕುಕನೂರು ತಾಲ್ಲೂಕು ಉಸ್ತುವಾರಿ ವೀರಣ್ಣ ಕಳ್ಳಿಮನಿ ಅವರು ಹೇಳಿದರು.
ಪಟ್ಟಣದ ಪತ್ರಿಕಾಭವನದಲ್ಲಿ ಕುಕನೂರು ತಾಲೂಕ ಕಾರ್ಯನಿರತ ಪತ್ರಕರ್ತರ ಸಂಘದ ವಿಶೇಷ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು ಸಂಘದ ಆಗುಹೋಗುಗಳ ಬಗ್ಗೆ ಚಚರ್ೆ ನಡೆಸಿ ಸಲಹೆಗಳನ್ನು ಸೂಚಿಸಿದರು. ಸಂಘದಲ್ಲಿ ಗುಂಪುಗಾರಿಕೆ ಇರಬಾರದು ಏನೇ ಮನಸ್ತಾಪಗಳಿದ್ದರೂ ಸಂಘದ ಸಭೆಯಲ್ಲಿ ಭಾಗವಹಿಸಿ ಚಚರ್ಿಸಿ ಬಗೆಹರಿಸಿಕೊಳ್ಳಿ, ರಾಜ್ಯ ನಿದರ್ೆಶನದಂತೆ ತಾಲ್ಲೂಕಾ ಸಂಘದಲ್ಲೂ ಕೂಡಾ ಪಾರದರ್ಶಕವಾಗಿ ಚುನಾವಣೆ ನಡೆಯುತ್ತದೆ ಮತ್ತು ಇದೇ ಜೂನ್ 12ರಂದು ಗಂಗಾವತಿಯಲ್ಲಿ ನಡೆಯಲಿರುವ ನೂತನ ಜಿಲ್ಲಾ ಪತ್ರಕರ್ತರ ಪದಗ್ರಹಣ ಕಾರ್ಯಕ್ರಮದಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಕರೆ ನೀಡಿದರು. ನಂತರ ಅಧ್ಯಕ್ಷತೆ ವಹಿಸಿದ್ದ ಕುಕನೂರ ಪತ್ರಕರ್ತರ ತಾಲ್ಲೂಕಾಧ್ಯಕ್ಷ ನಾಗರಾಜ್ ಬೆಣಕಲ್ ಮಾತನಾಡಿ ಪರಸ್ಪರ ಸಹಕಾರದೊಂದಿಗೆ ಎಲ್ಲರೂ ಜತೆಗೂಡಿ ಸಂಘಟನಾತ್ಮಕವಾಗಿ ಸಂಘವನ್ನು ಬೆಳೆಸಿದಾಗ ಮತ್ತು ಯಾವುದೇ ವೈಮನಸ್ಯ ಇಟ್ಟುಕೊಳ್ಳದೆ ಸಂಘದ ಯೋಜನೆಗಳನ್ನು ಕಾರ್ಯರೂಪಕ್ಕೆ ತಂದಾಗ ಅಭಿವೃದ್ಧಿ ಮತ್ತು ಯಶಸ್ಸು ಸಾಧ್ಯ ಎಂದರು. ಬಹುಮುಖ್ಯ ಬೇಡಿಕೆ ಪತ್ರಿಕಾ ಭವನ ಹಾಗೂ ಪತ್ರಕರ್ತರ ನಿವೇಶನದ ಬಗ್ಗೆ ಮಾಹಿತಿ ಹಂಚಿಕೊಂಡರು. ಜಿಲ್ಲಾ ಕಾರ್ಯಕಾರಿಣಿ ಸದಸ್ಯ ರುದ್ರಪ್ಪ ಭಂಡಾರಿ ಹಾಗೂ ಮಂಜುನಾಥ್ ಪ್ರಸಾದ್ ಮಾತನಾಡಿದರು.
ಈ ಸಂದರ್ಭದಲ್ಲಿ ಕುಕನೂರು ತಾಲ್ಲೂಕು ಉಪಾಧ್ಯಕ್ಷ ಬಸವರಾಜ ಕೊಡ್ಲಿ ಹಾಗೂ ಮುರಾರಿ ಭಜಂತ್ರಿ,ಅಮರೇಶ್ವರ ಸ್ವಾಮಿ ಕಂದಗಲ್ ಮಠ, ಚಂದ್ರು ಆರುಬೆರಳಿನ ವೀರೇಶ್ ಇಟಗಿ, ಬಸವರೆಡ್ಡಿ ಬೀಡನಾಳ, ಚನ್ನಯ್ಯ ಹಿರೇಮಠ,ವೀರಯ್ಯ ಆಡೂರು ಚಂದ್ರು ದೊಡಮನಿ,ಶರಣಯ್ಯ ರವಿ ಹಳ್ಳಿಕೇರಿ,ಲಕ್ಷ್ಮಣ ಮಂಡಲಗೇರಿ, ಪ್ರಧಾನ ಕಾರ್ಯದಶರ್ಿ ಬಸವರಾಜ ಕೋನಾರಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು