ಜಮಖಂಡಿಗೆ ವಿಶ್ವವಿದ್ಯಾಲಯ ಆದೇಶಕ್ಕೆ ತಡೆಯಾಜ್ಞೆ
ಲೋಕದರ್ಶನ ವರದಿ,
ಜಮಖಂಡಿ 19: ರಾಜ್ಯ ಸರ್ಕಾರ ಈಗಾಗಲೇ ಜಮಖಂಡಿಗೆ ವಿಶ್ವವಿದ್ಯಾಲಯ ಮಂಜೂರು ನೀಡಿದ್ದು, ಆ ಆದೇಶಕ್ಕೆ ಧಿಡೀರನೆ ತಡೆಯಾಜ್ಞೆ ನೀಡಿದ್ದು ಖೇದಕರ ಸಂಗತಿ. ಈ ಎಲ್ಲ ಬೆಳವಣಿಗೆಗೆ ಈ ಭಾಗದ ರಾಜಕೀಯ ಹಿತಾಶಕ್ತಿ ಕೊರತೆಯಿಂದ ಮಾತ್ರ ಸಾಧ್ಯವಾಗಿದೆಂದು ಈಗಾಗಲೇ ಸ್ನಾತಕೋತ್ತರ ಕೇಂದ್ರವಿದ್ದು, ಸಾಕಷ್ಠು ಸ್ಥಳಾವಕಾಶವಿದೆ. ಹಾಗಿದ್ದರೂ ಕೆಲ ರಾಜಕೀಯ ಶಕ್ತಿಗಳ ಹುನ್ನಾರದಿಂದ ವಿಶ್ವವಿದ್ಯಾಲಯ ಕೈ ತಪ್ಪುವ ಸಾಧ್ಯತೆ ಇದೆಂದು ಸೇವಾ ಸದನ ಸಂಸ್ಥೆಯ ಸಂಚಾಲಕ ಪ್ರದೀಪ ಮೆಟಗುಡ್ಡ ಅವರು ಸಂಶಯ ವ್ಯಕ್ತಪಡಿಸಿದರು.
ನಗರದ ಸರಕಾರಿ ಪ್ರವಾಸ ಮಂದಿರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಮಖಂಡಿ ಉಪವಿಭಾಗ ಕೇಂದ್ರವಾಗಿದೆ. ಜಿಲ್ಲಾ ಕೇಂದ್ರಕ್ಕೆ ಸಂಪೂರ್ಣ ಅರ್ಹತೆ ಹೊಂದಿದೆ. ಮುಂಬರುವ ದಿನಮಾನದಲ್ಲಿ ಜಿಲ್ಲಾ ಕೇಂದ್ರವಾಗಲಿದ್ದು, ಕೇಂದ್ರ ಸರ್ಕಾರ ಜಮಖಂಡಿಗೆ 700 ಹಾಸಿಗೆವುಳ್ಳ ಎಮ್ಸ್ ಆಸ್ಪತ್ರೆ ಸ್ಥಾಪಸಿಬೇಕೆಂದು ಅವರು ಒತ್ತಾಯಿಸಿದರು. ರಾಜ್ಯ ಸರ್ಕಾರ ನೀಡಿದ ತಡೆಯಾಜ್ಞೆಯನ್ನು ಕೂಡಲೇ ಹಿಂಪಡೆದುಕೊಂಡು ವಿಶ್ವವಿದ್ಯಾಲಯಕ್ಕೆ ಆದೇಶ ನೀಡಿ, ಅದಕ್ಕೆ ಬೇಕಾಗುವ ಸಕಲ ಸೌಕರ್ಯ ಹಾಗೂ ಅನುದಾನ ನೀಡಬೇಕು. ಇಲ್ಲದಿದ್ದರೆ ವಿವಿಧ ಸಂಟನೆಗಳು ಸೇರಿಕೊಂಡು ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದರು. ಗೋಷ್ಠಿಯಲ್ಲಿ ಶ್ರೀಶೈಲ ದೇಬಡಿ, ರವಿ ನಂದನ, ವೇದಬ್ರಹ್ಮ ದುಂಡಯ್ಯಾಶಾಸ್ತ್ರಿ, ಬಸವರಾಜ ಶಾಸ್ತ್ರಿ, ಸುರಜ್ ಕುಡ್ರಾಣಿ, ಬಸವರಾಜ ಕುರಣಿ ಅನೇಕರಿದ್ದರು.