ಮುಧೋಳ

ಭಾರತ ಪ್ರಪಂಚದಲ್ಲಿಯೇ ಅತ್ಯಂತ ದೊಡ್ಡ ಪ್ರಜಾತಂತ್ರ ದೇಶ: ತಿಮ್ಮಾಪೂರ

ಭಾರತ ಪ್ರಪಂಚದಲ್ಲಿಯೇ ಅತ್ಯಂತ ದೊಡ್ಡ ಪ್ರಜಾತಂತ್ರ ದೇಶ: ತಿಮ್ಮಾಪೂರ

ಲೋಕದರ್ಶನ ವರದಿ 


ಮುಧೋಳ 27: ಪ್ರಪಂಚದಲ್ಲಿಯೇ ಅತ್ಯಂತ ದೊಡ್ಡ ಪ್ರಜಾತಂತ್ರ ಆಡಳಿತ ವ್ಯವಸ್ಥೆಯನ್ನು ಹೊಂದಿರುವ ದೇಶವೆಂಬ ಹೆಗ್ಗಳಿಕೆ ನಮ್ಮದಾಗಿದೆ. ಬಹುಜನಾಂಗೀಯ, ಬಹುಭಾಷೆ, ಧರ್ಮಗಳು, ವರ್ಗ-ಜಾತಿ ವ್ಯವಸ್ಥೆ, ಪ್ರಾದೇಶಿಕ ವೈವಿಧ್ಯತೆಯಿಂದ ಕೂಡಿರುವ ಈ ದೇಶದ ಪ್ರತಿಯೊಬ್ಬ ಪ್ರಜೆಯೂ' ನಾವೆಲ್ಲರೂ ಒಂದು; ನಾವೆಲ್ಲಾ ಭಾರತೀಯರು' ಎಂಬ ಭಾವನೆಗೆ ನಮ್ಮ ದೇಶದ ಸಂವಿಧಾನವೇ ಕಾರಣವಾಗಿದೆ ಎಂದು ವಿಧಾನ ಪರಿಷತ್ತು ಸದಸ್ಯ ಆರ್‌.ಬಿ.ತಿಮ್ಮಾಪೂರ ಹೇಳಿದರು. 

  ನಗರದ ಮಾಜಿ ಸಚಿವರು ಹಾಗೂ ಹಾಲಿ ವಿಧಾನ ಪರಿಷತ್ತಿನ ಸದಸ್ಯ ಆರ್‌.ಬಿ.ತಿಮ್ಮಾಪುರ ರವರು ಕಚೇರಿಯಲ್ಲಿ ಜರುಗಿದ 73ನೇ ಗಣರಾಜ್ಯೋತ್ಸವ ನಿಮಿತ್ಯ ದ್ವಜಾರೋಹಣ ಹಾಗೂ ಡಾ.ಬಿ.ಆರ್‌.ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಅವರು ಮಾತನಾಡಿದರು. 

  ಇದೇ ಸಂದರ್ಭದಲ್ಲಿ ಲೋಕಾಪುರ ಬ್ಲಾಕ್ ಕಾಂಗ್ರೆಸ್ ಸಮಿತಿಯ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಅಶೋಕ್ ಗಿರಿಯಪ್ಪ ಕಿವಡಿ ಅವರನ್ನು ಸತ್ಕರಿಸಲಾಯಿತು. 

   ಕಾಂಗ್ರೆಸ್ ಮುಖಂಡರಾದ ಉದಯಸಿಂಗ ಪಡತಾರೆ, ಸಿದ್ದು ಕಾಳಗಿ, ಪರಮಾನಂದ ಕುಟರಟ್ಟಿ, ಸುಭಾಷ್ ಪಾಟೀಲ್, ಗೋವಿಂದ ಕವಲಗಿ, ಶ್ರೀಮತಿ ಭಾರತಿ, ಮುಧೋಳ ನಗರಸಭೆ ಸದಸ್ಯರು, ತಾಲೂಕು ಪಂಚಾಯಿತಿ ಮಾಜಿ ಸದಸ್ಯರು, ಪಕ್ಷದ ಹಿರಿಯರು, ಮುಖಂಡರು, ಯುವ ನಾಯಕರು, ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು. 


ಸುದ್ದಿ ಓದಿ