ಕಬ್ಬಿಗೆ ದರ ಇತ್ಯರ್ಥ ಪಡಿಸದಿದ್ದಲ್ಲಿ ಅನಿರ್ಧಿಷ್ಟ ಹೋರಾಟ
Indefinite strike if sugarcane price not settled
ಲೋಕದರ್ಶನ ವರದಿ
ಕಬ್ಬಿಗೆ ದರ ಇತ್ಯರ್ಥ ಪಡಿಸದಿದ್ದಲ್ಲಿ ಅನಿರ್ಧಿಷ್ಟ ಹೋರಾಟ
ವಿಜಯಪುರ : 2025-26 ನೇ ಸಾಲಿನ ಕಬ್ಬಿನ ದರ ನಿಗದಿ, ರೈತರಿಗೆ ಆಗುತ್ತಿರುವ ಮೋಸದ ಕುರಿತು ಹಾಗೂ ಇನ್ನು ಅನೇಕ ವಿಷಯಗಳ ಕುರಿತು ವಾಡಿಕೆಯಂತೆ ಪ್ರತಿವರ್ಷದಂತೆ ಚರ್ಚೆ ಮಾಡಲು ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ವಿಜಯಪುರ, ಬೆಳಗಾವಿ, ಬಾಗಲಕೋಟ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ 2 ಸುತ್ತಿನ ಸಭೆ ಮಾಡಿ 74 ಕಾರ್ಖಾನೆ ಮಾಲಿಕರಿಗೆ ಕಾಲಾವಕಾಶ ನೀಡಿ ನವೆಂಬರ್ 1ರ ಒಳಗಾಗಿ ಎಫ್.ಆರ್.ಪಿ ಹೊರತುಪಡಿಸಿ ಹೆಚ್ಚಿಗೆ ಸಾಧ್ಯವಾಗುವಷ್ಟು ದರ ಘೋಷಿಸುವಂತೆ ನಿರ್ಣಯಿಸಲಾಗಿತ್ತು.
ಈ ಮುಂಚೆ ಮುಖ್ಯಮಂತ್ರಿಗಳು ನವೆಂಬರ್ 1ರ ನಂತರ ಎಲ್ಲಾ ಕಾರ್ಖಾನೆಗಳು ಕಬ್ಬು ನುರಿಸಲು ಆದೇಶ ಹೊರಡಿಸಿದ್ದರು, ಇದನ್ನು ಬದಲಿಸಿ ಏಕಾಎಕಿ 10 ದಿನ ಮುಂಚೆ ಅಕ್ಟೋಬರ 20ರ ನಂತರ ಕಾರ್ಖಾನೆ ಪ್ರಾರಂಭ ಮಾಡುವಂತೆ ಮತ್ತೆ ಆದೇಶ ಹೊರಡಿಸಿ ರೈತ ವಿರೋಧಿ ಮುಖ್ಯಮಂತ್ರಿ ಸಿದ್ದರಾಮಯ್ಯ ಎಂದು ಮತ್ತೊಮ್ಮೆ ಸಾಬೀತು ಪಡೆಸಿದ್ದಾರೆ, ಇದಕ್ಕೆ ಬೆಂಬಲವಾಗಿ ನಮ್ಮವರೇ ಆದರೂ ಕಾರ್ಖಾನೆ ಮಾಲಿಕರ ಪರವಾಗಿ ಕಬ್ಬು ಹಾಗೂ ಸಕ್ಕರೆ ಸಚಿವರು ಬೆಂಬಲಿಸಿ ಆದೇಶವನ್ನು ಹೊರಡಿಸಿದ್ದಾರೆ.
ಬೆಂಬಲಬೆಲೆ, ತೂಕದಲ್ಲಿ ಮೊಸ, ಇಳುವರಿಯಲ್ಲಿ ಮೊಸ, ಸಮಯಕ್ಕೆ ಸರಿಯಾಗಿ ಬಾಕಿ ಬಿಲ್ ಹಾಕದಿರುವುದು ಸೇರಿದಂತೆ ಹಲವಾರು ಗಂಭಿರ ವಿಷಯಗಳ ಚರ್ಚೆ ನಂತರವೇ ಕಾರ್ಖಾನೆ ಪ್ರಾರಂಭಿಸಿಬೇಕು, ಕನಿಷ್ಟ ಒಂದು ಟನ್ ಕಬ್ಬಿಗೆ ಕಟಾವು ಮತ್ತು ಸಾಗಾಣೆಯನ್ನು ಹೊರತುಪಡೆಸಿ 3500 ಆದರೂ ಕೊಡಲೇ ಬೇಕು, ಮೊದಲು ಕಬ್ಬಿನಿಂದ ಸಕ್ಕರೆ ಮಾತ್ರ ತಾಯಾರಾಗುತ್ತಿತ್ತು ಈಗ 7-8 ಉಪಉತ್ಪನ್ನಗಳು ಸಿದ್ದವಾಗಿ ಸಕ್ಕರೆ ಕಾರ್ಖಾನೆ ಮಾಲಿಕರು ಒಳ್ಳೆಯ ಲಾಭದಲ್ಲಿದ್ದು, ಇಂದಿನ ಕಾಸ್ಟ ಆಫ್ ಕಲ್ಟಿವೇಷನ ಪ್ರಕಾರ ಒಂದು ಎಕರೆ ಕಬ್ಬು ಬೆಳೆದ ರೈತ 30 ಸಾವಿರ ನಷ್ಟದಲ್ಲಿದ್ದಾನೆ, ಆದರೆ ಸರಿಯಾದ ಬೆಲೆ ಸಿಗದೇ ಕಬ್ಬು ಬೆಳೆಗಾರರು ಮಾತ್ರ ಆತ್ಮಹತ್ಯೆ ಮಾಡಿಕೊಳ್ಳುವಂತಾಗಿದೆ.
ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಸೇರಿದಂತೆ ವಿಜಯಪುರ ಜಿಲ್ಲೆಯ ಸಮಸ್ತ ಕಬ್ಬು ಬೆಳೆಗಾರರು ಹಾಗೂ ರೈತರು ಸೇರಿಕೊಂಡು ಜಿಲ್ಲಾಧಿಕಾರಿಗಳ ಕಚೇರಿ, ಸಚಿವರಾದ ಶಿವಾನಂದ ಪಾಟೀಲರ ಮನೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎಂ.ಬಿ.ಪಾಟೀಲರ ಮನೆ ಮುಂದೆ ಅನಿರ್ಧಿಷ್ಟ ಹೋರಾಟ ಮಾಡಲು ಸಭೆ ಸೇರಿ ನಿರ್ಣಯಿಸಲಾಗುವುದು. ಕೂಡಲೇ ಜಿಲ್ಲಾಧಿಕಾರಿಗಳು ಸಕ್ಕರೆ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಎಲ್ಲಾ ಸಕ್ಕರೆ ಕಾರ್ಖಾನೆಗಳ ಮಾಲಿಕರು ಹಾಗೂ ರೈತ ಮುಖಂಡರೊಡನೆ ಸಭೆ ಕರೆದು ದರ ನಿಗದಿ ಪಡಿಸಬೇಕು ಇಲ್ಲವಾದಲ್ಲಿ ಮುಂದಿನ ಹೋರಾಟಕ್ಕೆ ನೇರ ಹೋಣೆಗಾರರಾಗುತ್ತಿರಿ ಎಂದು ಜಿಲ್ಲಾಧ್ಯಕ್ಷ ಸಂಗಮೇಶ ಸಗರ ಅವರು ಪತ್ರಿಕೆ ಮೂಲಕ ಎಚ್ಚರಿಕೆ ನೀಡಿದ್ದಾರೆ.
ಹೆತ್ತ ವೃದ್ದ ತಾಯಿಯನ್ನೆ ನಿರ್ಜನ ಪ್ರದೇಶಕ್ಕೆ ರಾತ್ರಿ ಎಸೆದು ಹೋದ ಪಾಪಿ ಪುತ್ರ : ಅನ್ನ ನೀರು ಇಲ್ಲದೆ ಈಡಿ ರಾತ್ರಿ ಕಳೆದ ಹಿರಿಯ ಜೀವ
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ 