ಮುಂಡರಗಿ

ನಾಗದೇವರ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮ ಉದ್ಘಾಟನೆ

ನಾಗದೇವರ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮ ಉದ್ಘಾಟನೆ

ಲೋಕದರ್ಶನ ವರದಿ

ಮುಂಡರಗಿ 25:  ಸಿಂಗಟಾಲೂರು ವೀರಭದ್ರೇಶ್ವರನ ಸುಕ್ಷೇತ್ರದಲ್ಲಿ ಅಪಾರವಾದ ಭಕ್ತಾಧಿಗಳನ್ನು ಹೊಂದಿರುವ ಕ್ಷೇತ್ರವಲ್ಲದೇ ಇಲ್ಲಿ ಸ್ಥಾಪಿಸಲಾಗಿರುವ ಸುಂದರವಾದ ಉದ್ಯಾನವನವು ಪ್ರೇಕ್ಷಕರ ಮನಸ್ಸನ್ನು ಉಲ್ಲಾಸಗೊಳಿಸುವಂತೆ ಇದೊಂದು ಪ್ರವಾಸಿತಾಣವಾಗಿ ಹೊರಹೊಮ್ಮುವುದರಲ್ಲಿ ಯಾವುದೇ ರೀತಿಯ ಸಂಶಯವಿಲ್ಲ ಎಂದು ಕಂದಗಲ್ ಪುರದ ಅಭಿನವ ಸಿದ್ದವೀರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

    ತಾಲೂಕಿನ ಶಿಂಗಟಾಲೂರ ಸುಕ್ಷೇತ್ರ ವೀರಭದ್ರೇಶ್ವರ ದೇವಸ್ಥಾನದ ಉದ್ಯಾನವನದಲ್ಲಿ ನೂತನವಾಗಿಜೀರ್ಣೋದ್ಧಾರಗೊಂಡಿರುವ ನಾಗಪ್ಪನ ದೇವಸ್ಥಾನದ ಉದ್ಘಾಟನೆ ಹಾಗೂ ನಾಗದೇವರ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮದ ಸಾನಿಧ್ಯವಹಿಸಿ ಅವರು ಮಾತನಾಡಿದರು. 

    ಸಿಂಗಟಾಲೂರು ಸುಕ್ಷೇತ್ರದಲ್ಲಿ ಹತ್ತು ಹಲವಾರು ಅಭಿವೃದ್ಧಿ ಕಾರ್ಯಗಳು ಯಾವುದೇ ಅಡೆತಡೆಗಳಿಲ್ಲದೇ ದೇವಸ್ಥಾನ ಟ್ರಷ್ಟ್ ಕಮೀಟಿ ಅಧ್ಯಕ್ಷ ಕರಬಸಪ್ಪ ಹಂಚಿನಾಳ ಹಾಗೂ ಅವರ ಸಂಪೂರ್ಣ ಕಮೀಟಿ ಹಾಗೂ ಭಕ್ತರ ಸಹಾಯ ಸಹಕಾರದಿಂದ ನಿರಂತರವಾಗಿ ನಡೆಯುತ್ತಾ ಬಂದಿವೆ. ಇದೊಂದು ಅತ್ಯಂತ ಜಾಗೃತವಾದ ಸ್ಥಳವಾಗಿದೆ. ನವರಾತ್ರಿಯ ಈ ಶುಭ ಸಂದರ್ಭದಲ್ಲಿ ಭಕ್ತರ ಕಷ್ಟಕಾರ್ಪಣ್ಯಗಳು ದೂರವಾಗಿ ಸುಖ, ಶಾಂತಿ, ಸಮೃದ್ಧಿ ನೆಲೆಸಲಿ ಎನ್ನುವ ಉದ್ದೇಶದಿಂದ ಶ್ರೀ ಕ್ಷೇತ್ರದಲ್ಲಿ ವಿಶೇಷವಾಗಿರುವಂತಹ ನಾಗದೇವರ ಪ್ರತಿಷ್ಠಾಪನೆಯನ್ನು ಮಾಡುತ್ತಿದ್ದು, ಮೂರು ಜನ ಪೂಜ್ಯರ ಸಾನಿಧ್ಯದಲ್ಲಿ ಕಾರ್ಯಕ್ರಮ ನಡೆಸಿದ್ದಾರೆ. ಶ್ರೀಕ್ಷೇತ್ರವೂ ಇನ್ನೂ ಉತ್ತರೋತ್ಥರವಾಗಿ ಬೆಳೆಯಲಿ ಎಂದರು.  

      ದೇವಸ್ಥಾನ ಟ್ರಷ್ಟ ಕಮೀಟಿ ಅಧ್ಯಕ್ಷ ಕರಬಸಪ್ಪ ಹಂಚಿನಾಳ ಮಾತನಾಡಿ, ದೇವಸ್ಥಾನದ ಸರ್ವತೋಮುಖ ಅಭಿವೃದ್ದಿಯಾಗಬೇಕಾದರೆ ಅದಕ್ಕೆ ನಮ್ಮ ಕಮೀಟಿಯ ಎಲ್ಲ ಪದಾದಿಕಾರಿಗಳು ಹಾಗೂ ಸರ್ವ ಭಕ್ತರ ಸಹಕಾರದಿಂದ ಅದು ಸಾಧ್ಯವಾಗಿದೆ. ಶೀಘ್ರದಲ್ಲಿಯೇ ಉದ್ಯಾನವನದ ಕಾಮಗಾರಿಯೂ ಸಹ ಪೂರ್ಣಗೊಳ್ಳಲಿದ್ದು, ಸಂಕ್ರಾಂತಿ ವೇಳೆಗೆ ಲೋಕಾರ್ಪಣೆಗೊಳಿಸಲು ಯೋಚಿಸಲಾಗುತ್ತಿದೆ. ಇದೀಗ ಜೀರ್ಣೋದ್ಧಾರಗೊಂಡಿರುವ ನಾಗಪ್ಪನ ದೇವಸ್ಥಾನಕ್ಕೆ ಬಳ್ಳಾರಿ ಭಕ್ತರಾದ ಸಿದ್ದಲಿಂಗಪ್ಪ ಕರ್ಜಗಿ ಕುಟುಂಬದವರು ಹೆಚ್ಚಿನ ರೀತಿಯಲ್ಲಿ ಭಕ್ತಿಕಾಣಿಕೆ ನೀಡುವ ಮೂಲಕ ಅದಕ್ಕೆ ಪ್ರಮುಖ ಕಾರಣೀಕರ್ತರಾಗಿದ್ದಾರೆ. ಭಕ್ತರ ಭಕ್ತಿಯೇ ದೇವಸ್ಥಾನಕ್ಕೆ ಶಕ್ತಿಯಾಗಿದೆ ಎಂದರು.

    ಪ್ರಾರಂಭದಲ್ಲಿ ನಾಗದೇವನಿಗೆ ವಿಶೇಷ ಪೂಜೆ, ಹೋಮಗಳು ಜರುಗಿದವು. ಈ ಸಂದರ್ಭದಲ್ಲಿ ಕಲಕೇರಿ-ವಿರುಪಾಪೂರದ ಮುದುಕೇಶ್ವರ ಶಿವಾಚಾರ್ಯ ಸ್ವಾಮೀಜಿ, ಬನ್ನಿಕೊಪ್ಪ, ಮೈಸೂರಿನ ಸುಜ್ಞಾನದೇವ ಶಿವಾಚಾರ್ಯರು ಸಾನಿಧ್ಯವಹಿಸಿ ಆಶಿರ್ವಚನ ಮಾಡಿದರು. ಈ ಸಂದರ್ಭದಲ್ಲಿ ಮಹಾದಾನಿಗಳಾದ ಸಿದ್ದಲಿಂಗಪ್ಪ ಕರ್ಜಗಿ ದಂಪತಿಗಳಿಗೆ ಹಾಗೂ ದೇವಸ್ಥಾನ ನಿರ್ಮಾಣ ಮಾಡಿದ ಕಾಳಿಮುತ್ತುಗೆ ಸನ್ಮಾನಿಸಿ ಗೌರವಿಸಲಾಯಿತು. ದೇವಸ್ಥಾನ ಟ್ರಷ್ಟ ಕಮೀಟಿಯ ಉಪಾಧ್ಯಕ್ಷ ಶೇಖಣ್ಣ ಬಾಲೇಹೊಸೂರು, ಸದಸ್ಯರಾದ ಕೊಟ್ರೇಶ ಬಳ್ಳೋಳ್ಳಿ, ಸುಭಾಸ ಬಾಗೇವಾಡಿ, ಕಾಶಯ್ಯ ಬೆಂತೂರುಮಠ, ಕರ್ಣಂ ಸಣ್ಣತಮ್ಮಪ್ಪ ಸೇರಿದಂತೆ ಅನೇಕರು ಉಪಸ್ಥಿತರಿದ್ದರು 

ಸುದ್ದಿ ಓದಿ