ಮುಧೋಳ

ಅಖಿಲ ಭಾರತ ಸಾಹಿತ್ಯ ಸಮ್ಮೇಳನ ನಮ್ಮ ಜಿಲ್ಲೆಯಲ್ಲಿ ಸಂಘಟಿಸುವೆ: ಶಿವಾನಂದ ಶೆಲ್ಲಿಕೇರಿ

ಅಖಿಲ ಭಾರತ ಸಾಹಿತ್ಯ ಸಮ್ಮೇಳನ ನಮ್ಮ ಜಿಲ್ಲೆಯಲ್ಲಿ ಸಂಘಟಿಸುವೆ: ಶಿವಾನಂದ ಶೆಲ್ಲಿಕೇರಿ

ಮಕ್ಕಳ ಸಾಹಿತ್ಯ ಪರಿಷತ್ತು ತಾಲ್ಲೂಕಾ ಘಟಕ ಉದ್ಘಾಟನೆ;ಸತ್ಕಾರ ಸಮಾರಂಭ 

ಮುಧೋಳ 14: ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಬಾಗಲಕೋಟೆ ಜಿಲ್ಲೆಯಲ್ಲಿಯೇ ಸಂಘಟಿಸುವ ಗುರಿ ಹೊಂದಿದ್ದೇನೆ ಜೊತೆಗೆ ಐದು ವರ್ಷದಲ್ಲಿ ಐದು ಜಿಲ್ಲಾ, ಒಂಬತ್ತು ತಾಲೂಕಿನಲ್ಲಿ  45 ತಾಲ್ಲೂಕಾ ಸಾಹಿತ್ಯ ಸಮ್ಮೇಳನ ಸಂಘಟಿಸುವ ಗುರಿ ಹೊಂದಿದ್ದು ಇದಕ್ಕೆ ತಮ್ಮಲ್ಲರ ಸಹಕಾರಬೇಕು ಎಂದು ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಶಿವಾನಂದ ಶೆಲ್ಲಿಕೇರಿ ಹೇಳಿದರು. 

ಮಂಗ:ಳವಾರ ನಗರದ ಕನ್ನಡ ಸಾಹಿತ್ಯ ಪರಿಷತ್ತು ಭವನದಲ್ಲಿ ಮಕ್ಕಳ ಸಾಹಿತ್ಯ ಪರಿಷತ್ತು ಕೇಂದ್ರ ಹಾಗೂ ಜಿಲ್ಲಾ ಘಟಕದ ಆಶ್ರಯದಲ್ಲಿ ಮುಧೋಳ ತಾಲ್ಲೂಕಾ ಘಟಕದ ಉದ್ಘಾಟನೆ ಹಾಗೂ ಪದಗ್ರಹಣ ಸಮಾರಂಭ ಹಾಗೂ ಸಾಧಕರಿಗೆ ಸತ್ಕಾರ ಮತ್ತು ವಿವಿದ ಸ್ಪರ್ಧೆಯಲ್ಲಿ ವಿಜೇತ ಮಕ್ಕಳಿಗೆ ಬಹುಮಾನ ವಿತರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು 

ಕಸಾಪವನ್ನು ಸಾಮಾನ್ಯ ಜನರ ಮನೆ ಮನಕ್ಕೆ ಪರಿಷತ್ತು ಮುಟ್ಟಿಸುವ ಕೆಲಸ ಮಾಡುವುದರೊಂದಿಗೆ ಹಲವಾರು ಕಮ್ಮಟ, ಕಾರ್ಯಾಗಾರ ಮಾಡುವುದರೊಂದಿಗೆ ಯುವಕರಿಗೆ ಶಕ್ತಿ ತುಂಬುವ ಕೆಲಸ ಮಾಡುವೆ. ಈಗಾಗಲೇ ಮೂರು ತಾಲ್ಲೂಕುಗಳಲ್ಲಿ ಕನ್ನಡ ಭವನ ನಿರ್ಮಾಣವಾಗಿದ್ದು ಇನ್ನುಳಿದ ಆರು ತಾಲ್ಲೂಕುಗಳಲ್ಲಿ ಸಾಹಿತ್ಯ ಭವನ ನಿರ್ಮಾಣ ಮಾಡುತ್ತೇನೆ.  ಮತ್ತು ಸಾಹಿತ್ಯಿಕವಾಗಿ ದೊಡ್ಡ ಪರಂಪರೆ ಇದೆ. ಅದನ್ನು ನನ್ನ ಅವಧಿಯಲ್ಲಿ ದಾಖಲಿಸುವ ಕೆಲಸ ಮಾಡುತ್ತೇನೆ.ಜೊತೆಗೆ ನಿಂತು ಹೋಗಿರುವ ಉತ್ಸವಗಳನ್ನು ಹಾಗೂ ಪ್ರಶಸ್ತಿಗಳನ್ನು ಮತ್ತೆ ಆರಂಭಿಸುವಂತೆ ಸಂಬಂಧಿದವರ  ಗಮನಕ್ಕೆ ತರುತ್ತೇನೆ. ಸಾಹಿತಿಗಳು ಮತ್ತು ಕಲಾವಿದರು ಎರಡು ಕಣ್ಣುಗಳಿದ್ದಂತೆ. ಅಲಕ್ಷಿತ ಸಾಹಿತಿ ಮತ್ತು ಕಲಾವಿದರನ್ನು ಗುರುತಿಸುವ ಕಾರ್ಯ ನನ್ನದು. ಆ ನಿಟ್ಟಿನಲ್ಲಿ ಜನಪದ ಕಲೆ ಮತ್ತು ಸಾಹಿತ್ಯದ ದಾಖಲೀಕರಣಕ್ಕೆ ಮೊದಲ ಆದ್ಯತೆ ನೀಡುತ್ತೇನೆ. ಜಿಲ್ಲೆಯ ಹಿರಿಯರ ಮತ್ತು ಸಾಹಿತಿಗಳ ಮಾರ್ಗದರ್ಶನದಲ್ಲಿ ವಿಶೇಷವಾದ ಯೋಜನೆ ರೂಪಿಸುವ ಗುರಿ ಇದೆ. ಕನ್ನಡ ಕಟ್ಟುವ ಕೆಲಸದಲ್ಲಿ ನಾನು ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇನೆ. ನನ್ನನ್ನು ಬಹಳಷ್ಟು ಪ್ರೀತಿಯಿಂದ ಆಶೀರ್ವದಿಸಿ ಚುನಾವಣೆಯಲ್ಲಿ ಬಹುಮತದಿಂದ ಗೆಲ್ಲಿಸಿದ್ದೀರಿ. ಇದಕ್ಕೆ ನಾನು ಋಣಿಯಾಗಿದ್ದೇನೆ ಎಂದರು. 

ಪಿ.ಬಿ.ಧುತ್ತರಗಿ ಟ್ರಸ್ಟ್‌ ಸದಸ್ಯ ಚಂದ್ರಶೇಖರ ದೇಸಾಯಿ ಮಾತನಾಡಿ ವಿದ್ಯಾರ್ಥಿಗಳಲ್ಲಿ ಮೌಲ್ಯ ಶಿಕ್ಷಣ ಮರೆಯಾಗುತ್ತಿದ್ದು ಕಥೆ,ಕವನ ಓದುವ ಪ್ರವೃತ್ತಿಯನ್ನು ವಿದ್ಯಾರ್ಥಿಗಳಲ್ಲಿ ಶಿಕ್ಷಕರು ಮಾಡುವದರ ಜೊತೆಗೆ  ಮಕ್ಕಳಲ್ಲಿ ಪಠ್ಯೇತರ ಚಟುವಟಿಕೆಗಳನ್ನು ಗುರುತಿಸುವ ಕಾರ್ಯವನ್ನು ಸಾಹಿತ್ಯ ಪರಿಷತ್ತು ಮಾಡುತ್ತಿರುವದು ಅತ್ಯುತ್ತಮ ಕಾರ್ಯವಾಗಿದೆ ಎಂದು ಹೇಳಿದರು. 

    ಕ್ಷೇತ್ರ ಸಮನ್ವಯಾಧಿಕಾರಿ ಮಹಾಂತೇಶ ನರಸನಗೌಡರ ಹಾಗೂ ಡಾ.ಶಿವಾನಂದ ಕುಬಸದ ಮಾತನಾಡಿ ಮಕ್ಕಳಲ್ಲಿರುವ ಪ್ರತಿಭೆಗಳನ್ನು ಮಕ್ಕಳ ಸಾಹಿತ್ಯ ಪರಿಷತ್ತು ಗುರುತಿಸಿ ಬಹುಮಾನ ನೀಡಿ ಪ್ರೋತ್ಸಾಹಿಸುತ್ತಿರುವ ಕಾರ್ಯ ಶ್ಲಾಘನೀಯ ನಿಮ್ಮ ಜೊತೆಗೆ ಸಾರ್ವಜನಿಕ ಶಿಕ್ಷಣ ಇಲಾಖೆ ಸದಾಕಾಲ ಇರುತ್ತದೆ ಎಂದು ಹೇಳಿದರು. 

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಕ್ಕಳ ಸಾಹಿತ್ಯ ಪರಿಷತ್ತು ತಾಲೂಕಾ ಘಟಕದ ಅದ್ಯಕ್ಷ ವಿಜಯಲಕ್ಷ್ಮೀ ಕಗಲಗೊಂಬ ವಹಿಸಿದ್ದರು..ರನ್ನ ಬೆಳಗಲಿಯ ಸಿದ್ಧಾರೂಢ ಮಠದ ಮಾತೋಶ್ರೀ ಕಾಶಿಬಾಯಿ ಪುರಾಣಿಕ ಆಶಿರ್ವಚನ ನೀಡಿದರು.  

ಕ್ಷೇತ್ರ ಸಮನ್ವಯಾಧಿಕಾರಿ ಮಹಾಂತೇಶ ನರಸನಗೌಡರ ಹಾಗೂ ಡಾ.ಶಿವಾನಂದ ಡಾ.ಸಿದ್ಧು ದಿವಾಣ,ಮುದಕಣ್ಣ ಅಂಬಿಗೇರ,ಬಾಪು ಖಾಡೆ, ಆನಂದ ಪೂಜಾರಿ,ದ್ರಾಕ್ಷಾಯಣಿ ಮಂಡಿ,ಸುಪ್ರಿಯಾ ನಿಪ್ಪಾಣಿ, ಗೌರವ ಅಧ್ಯಕ್ಷ ವೆಂಕಟೇಶ ಗುಡೆಪ್ಪನವರ,ರಮೇಶ ಕಂಕಣವಾಡಿ,ಮಹಾಂತೇಶ ಕುಂಬಾರ,ರಮೇಶ ಅರಕೇರಿ,ಸಾಹಿತಿ ಬಾಪು ಖಾಡೆ,ಶಕುಂತಲಾ ವಜ್ರಮಟ್ಟಿ, ರಾಜೇಶ್ವರಿ ಕಂಕನೋಡಿ,ಲಾವಣ್ಯ ರಂಗಣ್ಣವರ,ಕಾಶಿಬಾಯಿ ಕಿಲಾರಿ ಸೇರಿದಂತೆ ಇತರರು ಇದ್ದರು. 

ನಂತರ ಶಿವಾನಂದ  ಶೆಲ್ಲಿಕೇರಿಯರನ್ನು ಮಸಾಪ,ಶಿಕ್ಷಕ ಸಂಘ ಸೇರಿದಂತೆ ವಿವಿಧ ಸಂಘಟನೆಗಳ ಸದಸ್ಯರು ಸನ್ಮಾನಿಸಿದರು.ಮಕ್ಕಳಿಗಾಗಿ ಏರಿ​‍್ಡಸಲಾದ ವಿವಿದ ಸ್ಪರ್ಧೆಯ ವಿಜೇತರಿಗೆ ಬಹುಮಾನ ಹಾಗೂ ಪ್ರಶಸ್ತಿ ಪತ್ರ ನೀಡಿದರು. 

ಸುದ್ದಿ ಓದಿ