ಜಮಖಂಡಿ

ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟನೆ

ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟನೆ
ಜಮಖಂಡಿ ನಗರದ ಬಸವ ಭವನದಲ್ಲಿ ನಡೆದ ಜಮಖಂಡಿ ತಾಲೂಕಾ 8ನೇ ಕನ್ನಡ ಸಾಹಿತ್ಯ ಸಮ್ಮೆಳನವನ್ನು ವಿಜಯಪೂರ ಅಕ್ಕಮಹಾದೇವಿ ವಿವಿ

ಲೋಕದರ್ಶನ ವರದಿ,

ಜಮಖಂಡಿ 27: ಪ್ರಾಚೀನ ಇತಿಹಾಸವುಳ್ಳ ಕನ್ನಡ ಭಾಷೆ, ಸಾಹಿತ್ಯಕ್ಕೆ ಇತರ ಭಾಷೆಗೆ ಇರುವ ಪ್ರಚಾರ, ಅಂತರಾಷ್ಟ್ರೀಯ ಮನ್ನಣೆ ಸಿಗದೆ ಇರುವದು ವಿಪರ್ಯಾಸದ ಸಂಗತಿ. ಕನ್ನಡ ಸಂಸ್ಕೃತಿ ಅತ್ಯಂತ ಶ್ರೀಮಂತ ಸಂಸ್ಕೃತಿ, ಭವ್ಯ ಪರಂಪರೆಯುಳ್ಳ ಸಂಸ್ಕೃತಿ ಹೊಂದಿದೆ, ಇಂದಿಗೂ ಕನ್ನಡ ಭಾಷೆ ಹುಲುಸಾಗಿ ಬೆಳೆಯುತ್ತಿದೆ ಎಂದು ವಿಜಯಪುರ ಅಕ್ಕಮಹಾದೇವಿ ವಿವಿ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಪ್ರಾಧ್ಯಾಪಕ ಓಂಕಾರ ಕಾಕಡೆ ಹೇಳಿದರು.

ನಗರದ ಬಸವಭವನದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ರಾಜ್ಯ ಘಟಕ ಬೆಂಗಳೂರು, ಜಿಲ್ಲಾ ಘಟಕ ಬಾಗಲಕೋಟೆ ಹಾಗೂ ತಾಲ್ಲೂಕು ಘಟಕ ಆಶ್ರಯಯಲ್ಲಿ ನಡೆದ ಜಮಖಂಡಿ ತಾಲೂಕಾ 8ನೇ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು.

 ಕನ್ನಡ ಸಂಸ್ಕೃತಿಯು ಹಿರಿದಾದ ಸಂಪತ್ತಿಕೆ ಇದೆ. ಕನ್ನಡ ಅನನ್ಯ ಸಂಸ್ಕೃತಿಯಾಗಿದೆ, ಕನ್ನಡವನ್ನು ನುಂಗಿಹಾಕುವ ಕಾರ್ಯ ನಡೆದಿದೆ. 

ಇಂಗ್ಲೀಷಿಗೆ ಸರಿಸಾಟಿ ಇರುವ ಎಲ್ಲ ಭಾಷೆಗಳು ಸವಾಲುಗಳನ್ನು ಎದುರಿಸುತ್ತಿವೆ. ಕನ್ನಡ ನೆಲ, ಜಲ, ಸಂಸ್ಕೃತಿ ವಸ್ತು ನಿಷ್ಪಕ್ಷಪಾತವಾಗಿ ಬೆಳೆಯಬೇಕು, ಕನ್ನಡಕ್ಕೆ ಇರುವ ಆತಂಕಗಳು ದೂರವಾಗಬೇಕು. ಗಡಿ ವಿವಾದ, ಅಂತರ್ರಾಜ್ಯ ಜಲವಿವಾದ ಹೊರನಾಡ ಕನ್ನಡಿಗರು ಎದುರಿಸುತ್ತಿರುವ ಸವಾಲುಗಳು ಸಮಸ್ಯೆಗಳ ಬಗ್ಗೆ ಸಮ್ಮೇಳನದಲ್ಲಿ ಚಚರ್ೆಯಾಗಬೇಕಾಗಿದೆ ಎಂದರು.

ಶಾಸಕ ಆನಂದ ನ್ಯಾಮಗೌಡ, ಓಲೇಮಠದ ಡಾ.ಚನ್ನಬಸವ ಸ್ವಾಮೀಜಿ ಸಾನ್ನಿಧ್ಯವಹಿಸಿ ಮಾತನಾಡಿ, 

ಕೃತಿ ಬಿಡುಗಡೆ: ಚಿಂತನ ಸ್ಮರಣ ಸಂಚಿಕೆ, ಶ್ರೀದೇವಿ ಸುವರ್ಣಖಿಂಡಿ ಅವರ ಕಗ್ಗಸಿರಿ, ಉಮೇಶ ಅಥಗರ್ಾ ಅವರ ಜಮಖಂಡಿ ಶತಮಾನದ ಕೊಡುಗೈ ದಾನಿ, ನೀ ಶ್ರೀಶೈಲ ಅವರ ಹೀಗೆ ಏನೇನೋ, ಗುರುನಾಥ ಸುತಾರ ಅವರ ಭಾವದೊಳಗಿನ ಬೆಳಕು, ಬಾ ಬಾಳಿಗೆ ಚಂದಿರ, ಶಿವಾನಂದ ಡಂಗಿ ಅವರ ಶ್ರೀಮಂತರ ದೌರ್ಜನ್ಯಕ್ಕೆ ಸಿಡಿದ್ದೆದ್ದ ಶಿವರಾಯ ಸೇರಿದಂತೆ ಆರು ಕೃತಿಗಳನ್ನು ಬಿಡುಗಡೆಗೊಳಿಸಲಾಯಿತು.

*: ಕಡ್ಡಿ ಗೀರಿ ದೀಪ ಬೆಳಗಿದ ಗಣ್ಯರು:

ಜಮಖಂಡಿ ತಾಲೂಕಾ 8ನೇ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟನೆ ಸಂದರ್ಭದಲ್ಲಿ ಮೊಂಬತಿ ಸಿಗದೆ ಹಿನ್ನಲೆಯಲ್ಲಿ ವೇದಿಕೆಯಲ್ಲಿನ ಗಣ್ಯರು ಕಡ್ಡಿಪೊಟ್ಟಣದಲ್ಲಿನ ಕಡ್ಡಿಗಳನ್ನೆ ಗೀರಿ ದೀಪ ಬೆಳಗಿದ ಘಟನೆ ನಡೆಯಿತು. 

ಗೈರು ಉಳಿದ ಸಚಿವರು: ಸಾಹಿತ್ಯ ಸಮ್ಮೇಳನ ಕಾರ್ಯಕ್ರಮಕ್ಕೆ ಜಿಲ್ಲೆಯ ಮೂವರು ಸಚಿವರು ಬಾರದೆ ಗೈರು ಉಳಿದಿದ್ದಕ್ಕೆ ಸಾಹಿತ್ಯಾಸಕ್ತರಲ್ಲಿ, ಕನ್ನಡಾಭಿಮಾನಿಗಳಲ್ಲಿ ಬೇಸರ ಮೂಡಿಸಿತು. 

ವೇದಿಕೆಯಲ್ಲಿ ವಿಧಾನ ಪರಿಷತ್ ಮಾಜಿ ಸದಸ್ಯ ಜಿ.ಎಸ್.ನ್ಯಾಮಗೌಡ, ಎನ್.ಎಸ್.ದೇವರವರ, ನಾಡೋಜ ಡಾ.ಎಚ್.ಜಿ.ದಡ್ಡಿ, ಡಾ.ಟಿ.ಪಿ.ಗಿರಡ್ಡಿ, ಬಿ.ಪಿ.ಬಾಗೆನ್ನವರ, ನಗರಸಭೆ ಅಧ್ಯಕ್ಷ ದಾನೇಶ ಘಾಟಗೆ, ನಗರ ಯೋಜನಾ ಪ್ರಾಧಿಕಾರ ಅಧ್ಯಕ್ಷ ಯಮನೂರ ಮೂಲಂಗಿ, ಕನ್ನಡ ಸಂಘದ ಅಧ್ಯಕ್ಷ ಅರುಣಕುಮಾರ ಶಹಾ, ಜಿಪಂ ಮಾಜಿ ಉಪಾಧ್ಯಕ್ಷ ಸುಶಿಲಕುಮಾರ ಬೆಳಗಲಿ, ಅಜರ್ುನ ದಳವಾಯಿ, ಎಂ.ಸಿ.ಗೊಂದಿ, ಡಿವೈಎಸ್ಪಿ ಶಾಂತವೀರ ಈ, ವಿಶೇಷ ಜಿಲ್ಲಾಧಿಕಾರಿ ಸಾಜಿದಹ್ಮದ ಮುಲ್ಲಾ, ತಾಪಂ ಇಓ ರಾಮು ಅಗ್ನಿ, ಪಿ.ಬಿ.ಅಜ್ಜನವರ, ಅನುರಾಧಾ ಹಾದಿಮನಿ, ಲಕ್ಷ್ಮೀ ಅಷ್ಟಗಿ, ದೇವಲ ದೇಸಾಯಿ, ಎಸ್.ಆರ್.ಕಾಡಗಿ, ಸಿ.ಎಂ.ನ್ಯಾಮಗೌಡ, ಸಂಗಮೇಶ ಮಟೋಳಿ ಇತರರು ಇದ್ದರು.

ಶಿಕ್ಷಕಿಯರಾದ ಎನ್.ಎಲ್.ಮಿರ್ಜಿ , ಉಮಾ ಹಿರೇಮಠ ಸಂಗಡಿಗರು ನಾಡಗೀತೆ, ರೈತಗೀತೆ ಹಾಡಿದರು. ಕಸಾಪ ತಾಲೂಕಾಧ್ಯಕ್ಷ ಸಂತೋಷ ತಳಕೇರಿ ಸ್ವಾಗತಿಸಿದರು. ಕಸಾಪ ಜಿಲ್ಲಾಧ್ಯಕ್ಷ ಶಿವಾನಂದ ಶೆಲ್ಲಿಕೇರಿ ಪ್ರಾಸ್ತವಿಕವಾಗಿ ಮಾತನಾಡಿದರು. ಶಂಕರ ಲಮಾಣಿ, ಚಂದ್ರಕಲಾ ತುಪ್ಪದ ನಿರೂಪಿಸಿದರು. ಬಿ.ಎನ್.ಅಸ್ಕಿ ವಂದಿಸಿದರು.

ಸಮ್ಮೇಳನದ ಸರ್ವಾಧ್ಯಕ್ಷರ ನುಡಿ: 

ಜಮಖಂಡಿ ಜಿಲ್ಲೆಯಾಗಬೇಕು ಮತ್ತು ಸಾವಳಗಿ ತಾಲ್ಲೂಕು ಕೇಂದ್ರವಾಗಬೇಕು ಎಂಬುದು ದೇಶಕ್ಕೆ ಸ್ವಾತಂತ್ರ್ಯ ದೊರೆತ ದಿನದಿಂದಲೂ ಈ ಭಾಗದ ಜನರ ಬೇಡಿಕೆಯಾಗಿದೆ. ಈ ಬೇಡಿಕೆ ಈಡೇರಲು ರಾಜಕೀಯ ಇಚ್ಛಾಶಕ್ತಿಯ ಕ್ರೋಢೀಕರಣದ ಅವಶ್ಯಕತೆಯಿದೆ ಎಂದು ಜಮಖಂಡಿ ತಾಲೂಕಾ 8ನೇ ಕನ್ನಡ ಸಾಹಿತ್ಯ ಸಮ್ಮೆಳನದ ಸವರ್ಾಧ್ಯಕ್ಷ ಪ್ರೊ.ಬಸವರಾಜ ಕಡ್ಡಿ ಹೇಳಿದರು.

ಬದುಕು-ಬರಹ ಒಂದಾದರೆ ಬರಹಕ್ಕೆ ಬೆಲೆ ಬರುತ್ತದೆ. ಶರಣರ ನಡೆ-ನುಡಿ, ಬದುಕು-ಬರಹ ಸಮನ್ವಯವಾಗಿದ್ದ ಕಾರಣ12ನೇ ಶತಮಾನದ ವಚನ ಸಾಹಿತ್ಯ ಇನ್ನೂ ಜೀವಂತವಾಗಿದೆ, ಯಾವಾಗಲೂ ಜೀವಂತವಾಗಿರುತ್ತದೆ. ವ್ಯಕ್ತಿ ಮತ್ತು ಸಮಾಜದ ಪ್ರಗತಿಗೆ ಸಾಹಿತ್ಯ ಪೂರಕವಾಗಿರಬೇಕು, ಸರ್ಕಾರಿ, ಖಾಸಗಿ ಶಿಕ್ಷಣ ಸಂಸ್ಥೆಗಳು ಗುಣಮಟ್ಟದ ಶಿಕ್ಷಣ ನೀಡುತ್ತಿವೆ. ಜಮಖಂಡಿಯಲ್ಲಿ ವಿನೂತನ ವಿಶ್ವವಿದ್ಯಾಲಯ ಸ್ಥಾಪನೆಯಾಗುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ. ಎಂಜಿನಿಯರಿಂಗ್, ವೈದ್ಯಕೀಯ ಕಾಲೇಜುಗಳ ಕೊರತೆ ಬಹುದಿನಗಳಿಂದ ಕಾಡುತ್ತಿದೆ. ಪ್ರಾಥಮಿಕ ಮತ್ತು ಮಾಧ್ಯಮಿಕ ಹಂತದಲ್ಲಿಯೇ ನೈತಿಕ ಶಿಕ್ಷಣ, ಯೋಗ ತರಬೇತಿ ಪ್ರಾರಂಭಿಸಬೇಕು. ಚಿಕ್ಕಪಡಸಲಗಿ ಹತ್ತಿರ ಕೃಷ್ಣಾನದಿಗೆ ಅಡ್ಡಲಾಗಿ ದಿ. ಸಿದ್ದು ನ್ಯಾಮಗೌಡ ಅವರ ನೇತೃತ್ವದಲ್ಲಿ ನಿರ್ಮಿಸಿದ ಶ್ರಮಬಿಂದು ಸಾಗರವು ಜಮಖಂಡಿ ಮತ್ತು ಅಥಣಿ ತಾಲ್ಲೂಕಿನ ಗ್ರಾಮಗಳ ರೈತರಿಗೆ ಜೀವಜಲವಾಗಿದೆ.ನೀರಾವರಿಯಿಂದ ರೈತರ ಆರ್ಥಿಕ ಪರಿಸ್ಥಿತಿ ಸುಧಾರಿಸಿದೆ ಎಂದರು. 

ನಿರ್ಣಯ-ಸಮ್ಮೇಳನದಲ್ಲಿ ಕೈಗೊಂಡ ಪ್ರಮುಖ ನಿರ್ಣಯಗಳು- * ಕನರ್ಾಟಕದಲ್ಲಿ ಗಡಿ ಉಸ್ತುವಾರಿ ಸಚಿವಾಲಯ ತೆರೆದು ಉಸ್ತುವಾರಿ ಸಚಿವರು ಹಾಗೂ ಅಧಿಕಾರಿಗಳನ್ನು ನೇಮಿಸುವುದು. * ಜಮಖಂಡಿ ಜಿಲ್ಲೆಯಾಗಬೇಕು* ಕುಡಚಿ-ಬಾಗಲಕೋಟೆ ರೈಲ್ವೆ ಮಾರ್ಗ ತುತರ್ುಗತಿಯಲ್ಲಿ ನಿಮರ್ಾಣವಾಗಬೇಕು.*ಸಾವಳಗಿ ತಾಲೂಕು ರಚನೆಯಾಗಬೇಕು.* ಕಚೇರಿ ಅಂಗಡಿ ಮುಂಗ್ಗಟುಗಳ ನಾಮ ಫಲಕಗಳು ಕಡ್ಡಾಯವಾಗಿ ಕನ್ನಡದಲ್ಲಿರಬೇಕು. * ಕನ್ನಡ ಭಾಷೆಯಲ್ಲಿ ವ್ಯಾಸಂಗ ಮಾಡಿರುವವರಿಗೆ ಪ್ರಥಮ ಪ್ರಾಶಸ್ತ್ರ ನೀಡಬೇಕು. * ಕನರ್ಾಟಕದಲ್ಲಿ ಕನ್ನಡವೇ ಸಾರ್ವಭೌಮ ಭಾಷೆಯಾಗಬೇಕು ಎಂದು ಈ ಏಳು ನಿರ್ಣಯಗಳನ್ನು ಶಿಕ್ಷಕ ಶಂಕರ ಲಮಾಣಿ ಮಂಡಿಸಿದರು. 

ಪ್ರಥಮ ಗೋಷ್ಠಿಯಲ್ಲಿ ಭಾಷೆ-ಕೃಷಿ ಹಾಗೂ ಸಂವಿಧಾನ ಕುರಿತು ಮಲ್ಲಿಕಾಜರ್ುನ ಇಂಡಿ, ಬಸವರಾಜ ಗಿರಗಾಂವಿ, ಹಾಗೂ ವಕೀಲ ಎನ್.ಎಸ್.ದೇವರವರ ಉಪನ್ಯಾಸ ನೀಡಿದರು. ಕೊಣ್ಣೂರು ಹೊರಗಿನಮಠದ ಡಾ. ವಿಶ್ವಪ್ರಭುದೇವ ಮಹಾಸ್ವಾಮಿಜಿ ಸಾನಿಧ್ಯ ವಹಿಸಿದ್ದರು. ಡಾ.ಸಂಗಮೇಶ ಮಟೋಳ್ಳಿ  ಅಧ್ಯಕ್ಷತೆ ವಹಿಸಿದ್ದರು. ಹೆಚ್.ಆರ್. ಕಾಂತಿ, ಈಶ್ವರ ಕರಬಸಣ್ಣವರ, ರವಿ ಯಡಹಳ್ಳಿ, ವರ್ಧಮಾನ ನ್ಯಾಮಗೌಡ, ರುದ್ರಯ್ಯಾ ಕರಡಿ ಉಪಸ್ಥಿತರಿದ್ದರು.

ದ್ವೀತೀಯ ಗೋಷ್ಠಿ ಕವಿಗೋಷ್ಠಿಯಲ್ಲಿ ಐವರು ಕವಿತ್ರಿಗಳು, ಹದಿಮೂರು ಕವಿಗಳು ತಮ್ಮ ಸ್ವರಚಿತ ಕವಿತೆಗಳನ್ನು ಮಂಡಿಸಿದರು. ಕಲ್ಯಾಣಮಠದ ಗೌರಿಶಂಕರ ಮಹಾಸ್ವಾಮಿಜಿ ಸಾನಿಧ್ಯ ವಹಿಸಿದ್ದು, ಶಾರದಾ ಮುಳ್ಳೂರ ಅಧ್ಯಕ್ಷತೆ ವಹಿಸಿದ್ದರು.

ವಿಶೇಷ ಉಪನ್ಯಾಸ ಮತ್ತು ಸಮ್ಮೇಳನಾಧ್ಯಕ್ಷರೊಂದಿಗೆ ಸಂವಾದದಲ್ಲಿ ಪತ್ರಕರ್ತ ಗುರುರಾಜ ವಾಳ್ವೇಕರ, ಆರ್.ಎಸ್.ಹೊನಗೊಂಡ, ಸಾಹಿತಿ ರುದ್ರಗೌಡ ಪಾಟೀಲ, ವಿಮಲಾ ಕುಬಕಡ್ಡಿ, ನಾರಾಯಣ ಕುಲಕಣರ್ಿ, ಎನ್.ವಿ.ಅಸ್ಕಿ, ಗುರುನಾಥ ಸುತಾರ, ಮೌನೇಶ ಬಡಿಗೇರ, ರಾಜಶೇಖರ ಹೊಸಟ್ಟಿ, ನರಸಿಂಹ ಕಲ್ಲೋಳ್ಳಿ ಅನೇಕರು ಪಾಲ್ಗೊಂಡಿದ್ದರು. ಡಾ.ಟಿ.ಪಿ.ಗಿರಡ್ಡಿ ಅಧ್ಯಕ್ಷತೆ ವಹಿಸಿದ್ದರು.



ಸುದ್ದಿ ಓದಿ