15 ದಿನಗಳೊಳಗೆ ಪರಿಹಾರ ನೀಡದಿದ್ದರೆ ಕೆ.ಡಿ.ಪಿ. ಸಭೆಗೆ ಮುತ್ತಿಗೆ ಹಾಕಿ ಹೆದ್ದಾರಿ ತಡೆ -ರೈತ ಮುಖಂಡ ಎಚ್ಚರಿಕೆ
If compensation is not provided within 15 days, KDP will besiege the meeting and block the highway -
ರಾಣೇಬೆನ್ನೂರು 04 : ರಾಣೇಬೆನ್ನೂರಿನ ನಿಸರ್ಗ ಸೀಡ್ಸ್ ಹೆಸರಿನ ಕಂಪನಿಯು ವಿತರಿಸಿದ ಕಳಪೆ ಮೆಕ್ಕೆಜೋಳ ಬಿತ್ತನೆ ಬೀಜದಿಂದ ಮೋಸ ಹೋದ ರೈತರಿಗೆ 15 ದಿನಗೊಳೊಳಗಾಗಿ ಸರಕಾರ ಪರಿಹಾರ ನೀಡದಿದ್ದರೆ ಹಾವೇರಿಯಲ್ಲಿ ನಡೆಯುವ ಜಿಲ್ಲಾ ಉಸ್ತುವಾರಿ ಸಚಿವರಾದ ಶಿವಾನಂದ ಪಾಟೀಲರ ತ್ರೈಮಾಸಿಕ ಕೆ.ಡಿ.ಪಿ. ಸಭೆಗೆ ಮೋಸ ಹೋದ ಸಾವಿರಾರು ರೈತರೊಂದಿಗೆ ಮುತ್ತಿಗೆ ಹಾಕಿ ಬಂದ್ ಮಾಡಲಾಗುವುದೆಂದು ರೈತ ಮುಖಂಡ, ಹೋರಾಟ ಸಮಿತಿಯ ಅಧ್ಯಕ್ಷ ರವೀಂದ್ರಗೌಡ ಪಾಟೀಲ ಎಚ್ಚರಿಕೆ ನೀಡಿದರು.
ಅವರು 3 ನೇ ತಾರೀಕು ಇಲ್ಲಿಯ ಸಹಾಯಕ ಕೃಷಿ ನಿರ್ದೇಶಕರ ಕಛೇರಿಯಲ್ಲಿ ಏರಿ್ಡಸಿದ ನಿಸರ್ಗ ಸೀಡ್ಸ್‌ನಿಂದ ಮೋಸ ಹೋದ ರೈತರ ಮತ್ತು ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು ಅನ್ನದಾತನ ಬದುಕನ್ನು ಹಾಳು ಮಾಡುವ ಈ ವಂಚನೆ ಪ್ರಕರಣ ಜರುಗಿ 06 ತಿಂಗಳು ಗತಿಸುತ್ತಾ ಬಂದಿದ್ದರೂ ಕೂಡ ಇದುವರೆಗೆ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ತನಿಖೆ ಯಾವ ಹಂತಕ್ಕೆ ಬಂದು ತಲುಪಿತು, ನ್ಯಾಯಾಲಯದಲ್ಲಿ ಈ ಕೇಸಿನ ವಿಚಾರ ಎಲ್ಲಿಗೆ ಬಂದಿದೆ ನಿಸರ್ಗ ಸೀಡ್ಸ್ ಕಂಪನಿಯ ವಾರಸುದಾರರ ಮೇಲೆ ಇದುವರೆಗೂ ಯಾವ ಯಾವ ಕ್ರಮಗಳನ್ನು ಜರುಗಿಸಲಾಗಿದೆ ಈ ಹಿಂದೆ ಉಸ್ತುವಾರಿ ಸಚಿವರ ಸಭೆಯಲ್ಲಿ ಸೂಚಿಸಿದಂತೆ ಅವರ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡು ಅವರ ಬ್ಯಾಂಕ್ ಖಾತೆಗಳನ್ನು ಸೀಜ್ ಮಾಡಲಾಗಿದೆಯೇ, ಇಲ್ಲವೇ? ಎಂಬುದರ ಬಗ್ಗೆ ಮೋಸ ಹೋದ ರೈತರೆದುರು ಸ್ಪಷ್ಟವಾಗಿ ಮಾಹಿತಿ ನೀಡಬೇಕೆಂದು ಸಂಬಂಧಿಸಿದ ಅಧಿಕಾರಿಗಳಿಗೆ ಪಟ್ಟು ಹಿಡಿದು ಮಾತನಾಡಿದ ಅವರು ಪ್ರಾರಂಭದಲ್ಲಿ ಸಿಂಹ ಘರ್ಜನೆಯಂತೆ ಘರ್ಜಿಸಿದ ಪೊಲೀಸ್ ಇಲಾಖೆ ಹಾಗೂ ಕೃಷಿ ಇಲಾಖೆ ತದ ನಂತರದಲ್ಲಿ ಆಮೆ ಗತಿಯಲ್ಲಿ ಸಾಗಿದ್ದು ಏಕೆ? ಎಂದು ಪ್ರಶ್ನಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾಧ್ಯಕ್ಷ ಈರಣ್ಣ ಹಲಗೇರಿ ನಮಗೆ ನ್ಯಾಯ ಸಿಗುವ ತನಕ ಈ ಹೋರಾಟದಿಂದ ಹಿಂದೆ ಸರಿಯುವ ಪ್ರಶ್ನೆಯಿಲ್ಲ. ಕೆಲವು ಅಧಿಕಾರಿಗಳು ನಿರ್ಲಕ್ಷ್ಯತನ, ಆಲಸ್ಯದಿಂದ ಕರ್ತವ್ಯ ನಿರ್ವಹಿಸುತ್ತಿದ್ದು ಅಂತಹ ಅಧಿಕಾರಿಗಳು ದಯವಿಟ್ಟು ಕೈ ಮುಗಿದು ಕೇಳಿಕೊಳ್ಳುತ್ತೇನೆ ರಾಜಿನಾಮೆ ಕೊಟ್ಟು ಮನೆಗೆ ಹೋಗಿರಿ, ನಿಮಗಿಂತ ಹೆಚ್ಚಿಗೆ ಓದಿದ ರೈತರ ಮಕ್ಕಳು ಉದ್ಯೋಗವಿಲ್ಲದೆ ಮನೆಯಲ್ಲಿ ಕುಳಿತಿದ್ದಾರೆ. ಅಂತವರಿಗಾದರೂ ಅವಕಾಶ ಸಿಗುತ್ತದೆ ಎಂದು ಬೇಜಾವಾಬ್ದಾರಿ ಅಧಿಕಾರಿಗಳ ಶ್ರಮ ಖಂಡಿಸಿದರು. ಸಭೆಯ ಅಧ್ಯಕ್ಷತೆಯನ್ನು ತಾಲೂಕಾ ದಂಡಾಧಿಕಾರಿ ಆರ್.ಎಚ್. ಭಾಗವಾನ ವಹಿಸಿದ್ದರು. ಕೃಷಿ ಇಲಾಖೆಯ ಉಪನಿರ್ದೇಶಕ ಕರಿಯಲ್ಲಪ್ಪ ಡಿ., ಶಹರ ಸಿ.ಪಿ.ಐ. ವೆಂಕಟೇಶ ಎನ್., ಗ್ರಾಮೀಣ ಸಿ.ಪಿ.ಐ. ಎನ್.ಸಿ. ಕಾಡದೇವರ, ಕುಮಾರಪಟ್ಟಣಂ ಸರ್ಕಲ್ ಇನ್ಸ್‌ಪೆಕ್ಟರ್ ಎಂ.ಡಿ. ಸಿದ್ದೇಶ, ಸಹಾಯಕ ಕೃಷಿ ನಿರ್ದೇಶಕರಾದ ಶ್ರೀಮತಿ ಜಿ. ಶಾಂತಮಣಿ ಮತ್ತು ಮಾರುತಿ ಅಂಗರಗಟ್ಟಿ ಇದ್ದರು. ಈ ಎಲ್ಲಾ ಅಧಿಕಾರಿಗಳ ಮುಖಾಂತರ ಉಸ್ತುವಾರಿ ಸಚಿವರಿಗೆ, ಕೃಷಿ ಮಂತ್ರಿಗಳಿಗೆ, ಪೊಲೀಸ್ ಇಲಾಖೆಯ ಐ.ಜಿ.ಪಿಯವರಿಗೆ, ಜಿಲ್ಲಾಧಿಕಾರಿಗಳಿಗೆ, ಜಂಟಿ ಕೃಷಿ ನಿರ್ದೇಶಕರಿಗೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಈ ಬಗ್ಗೆ ಅಂದರೆ 15 ದಿನಗಳೊಳಗಾಗಿ ನೊಂದ ರೈತರಿಗೆ ಪರಿಹಾರ ವಿತರಿಸದಿದ್ದರೆ ಮುಂಬರುವ ಉಸ್ತುವಾರಿ ಸಚಿವರ ಕೆ.ಡಿ.ಪಿ. ಸಭೆಗೆ ಮೋಸ ಹೋದ ಸಾವಿರಾರು ರೈತರಿಗೆ ಮುತ್ತಿಗೆ ಹಾಕಿ ಸಭೆಯನ್ನು ಹರತಾಳ ಮಾಡಿ ರಾಷ್ಟ್ರೀಯ ಹೆದ್ದಾರಿಯನ್ನು ಬಂದ್ ಮಾಡಲಾಗುವುದು ಕೃಷಿ ಅಧಿಕಾರಿಗಳ ಕರ್ತವ್ಯಲೋಪದಿಂದ ಅನ್ನದಾತನಿಗೆ ಮೋಸ ಆಗಿರುವುದರಿಂದ ಸರಕಾರವೇ ಹೊಣೆ ಹೊತ್ತು ಪರಿಹಾರ ನೀಡಬೇಕೆನ್ನುವ ಮನವಿ ಪತ್ರವನ್ನು ಕಳುಹಿಸಿಕೊಡಲಾಯಿತು. ಸುಮಾರು 03 ತಾಸುಗಳ ವರೆಗೆ ನಡೆದ ಈ ಸಭೆಯಲ್ಲಿ ರೈತರು ತಮಗಾದ ಅನ್ಯಾಯವನ್ನು ತೋಡಿಕೊಂಡು ಆಕ್ರೋಶ ವ್ಯಕ್ತಪಡಿಸಿದರು. ಸಭೆಯಲ್ಲಿ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು, ಚಿತ್ರದುರ್ಗ, ವಿಜಯನಗರ, ದಾವಣಗೆರೆ, ಹಾವೇರಿ, ಗದಗ, ಬಳ್ಳಾರಿ, ಕೊಪ್ಪಳ, ಧಾರವಾಡ ಜಿಲ್ಲೆಗಳ ನೂರಾರು ರೈತರು ಭಾಗವಹಿಸಿದ್ದರು. ಪರಿಸ್ಥಿತಿ ವಿಕೋಪಕ್ಕೆ ಹೋಗಬಾರದೆಂದು ಪೊಲೀಸ್ ಇಲಾಖೆ ಸೂಕ್ತ ಪೊಲೀಸ್ ಬಂದೊಬಸ್ತ ಒದಗಿಸಿದ್ದರು.
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ 