ದೆಹಲಿಗೆ ಹೋಗಿ ಟಿಕೇಟ್ ಕೇಳುವಷ್ಟು ಸಣ್ಣ ಕಾರ್ಯಕರ್ತ ನಾನಲ್ಲ: ಕುಲಕರ್ಣಿ
ಲೋಕದರ್ಶನ ವರದಿ,
ಜಮಖಂಡಿ 12: ನಾನು ದೆಹಲಿಗೆ ಹೋಗಿ ಟಿಕೇಟ್ ಕೇಳುವಷ್ಟು ಸಣ್ಣ ಕಾರ್ಯಕರ್ತ ನಾನಲ್ಲ ಎಂದು ಮಾಜಿ ಶಾಸಕ ಶ್ರೀಕಾಂತ ಕುಲಕಣರ್ಿ ಸ್ಪಷ್ಟಪಡಿಸಿದರು.
ನಗರದ ರಮಾ ನಿವಾಸದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ದೆಹಲಿಗೆ ತೆರಳಿದ್ದರ ಬಗ್ಗೆ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು,
ಟಿಕೇಟ್ ಯಾವಾಗಲೂ ನಮ್ಮ ಮನೆಗೆನೆ ಬಂದಿದೆ, ನಾ ತರಾಕ ಯಾರ ಮನೆಗೂ ಹೋಗಿಲ್ಲ ಎಂದರು.
ಶಿವಮೊಗ್ಗದಲ್ಲಿ ನಡೆಯುವ ಕಾರ್ಯಕ್ರಮಕ್ಕೆ ಸಂತೋಷಜಿ ಅವರನ್ನು ಆಹ್ವಾನಿಸಲು ಹೋಗಿದ್ದೆ ಎಂದು ತಿಳಿಸಿದರು.
ಜಮಖಂಡಿ ಜಿಲ್ಲಾ ಕೇಂದ್ರ ಆಗಬೇಕು ಎಂದು ಅಧಿವೇಶನದಲ್ಲಿ ಮಾತನಾಡಿದ್ದು ನಾನೇ ಮೊದಲಿಗ ನಮ್ಮ ಮುಂದಿನ ಗುರಿ ಜಮಖಂಡಿ ಜಿಲ್ಲೆ, ಸಾವಳಗಿ ತಾಲೂಕಾ ಕೇಂದ್ರ ಆಗಬೇಕು ಹೋರಾಟ ಮಾಡುತ್ತೆವೆ ಎಂದರು.
ಕ್ಷೇತ್ರದ ಅಭಿವೃದ್ಧಿಗೆ ನಾನು ಅಧಿಕಾರದಲ್ಲಿ ಇರದೆ ಸಂದರ್ಭದಲ್ಲಿಯೂ ನೂರಾರು ಕೋಟಿ ಅನುದಾನ ತಂದು ಅಭಿವೃದ್ಧಿ ಕಾರ್ಯ ಮಾಡಿದ್ದೆನೆ ಅದರ ಬಗ್ಗೆ ಎಲ್ಲಿಯೂ ಹೇಳಿಕೊಂಡಿಲ್ಲ ಅಷ್ಟು ಸಣ್ಣತನ ಮಾಡಲ್ಲ ಎಂದರು.