ಹಿಂದೂ ಒಂದಾದರೆ ಸಂಸ್ಕೃತಿಯ ಪುನರುಥ್ಥಾನವಾದಂತೆ: ಶ್ರೀನಿವಾಸಜೀ
ಜಮಖಂಡಿ 12: ಹಿಂದೂ ರಾಷ್ಟ್ರದ ನಿರ್ಮಾಣ ಹಿಂದೂ ಒಂದಾದರೆ ಸಂಸ್ಕೃತಿಯ ಪುನರುಥ್ಥಾನವಾದಂತೆ. ಸಂಘದಿಂದ ಹಿಂದೂಗಳು ಒಂದಾಗಬೇಕು ಎನ್ನುವ ಗುರಿಯಿಂದ ಸಂಘವು ಮುನ್ನಡೆದಿದೆ ಎಂದು ಕರ್ನಾಟಕ ಉತ್ತರ ಪ್ರಾಂತ ಸಹ ಪರಾಂತ ಪ್ರಚಾರಕ ಶ್ರೀನಿವಾಸಜೀ ಹೇಳಿದರು.
ನಗರದ ಪೋಲೋ ಮೈದಾನದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ನಗರ ಮಹಾ ಸಾಂಘಿಕ ಶಾಖೆಯಲ್ಲಿ ಮಾತನಾಡಿದ ಅವರು. ವ್ಯಕ್ತಿ ನಿರ್ಮಾಣದಿಂದ ರಾಷ್ಟ್ರ್ಟ ನಿರ್ಮಾಣ ಸಾಧ್ಯವೆಂದು ಸಂಘ ಸಂಸ್ಥಾಪಕ ಕೇಶವ ಬಲಿರಾಮ ಹೆಡಗೇವಾರರು ಕಂಡುಕೊಂಡು 1925 ರಲ್ಲಿ ನಾಗಪೂರದಲ್ಲಿ ಸಂಘವನ್ನು ಕೆಲವು ಗೆಳೆಯರೊಂದಿಗೆ ಪ್ರಾರಂಭವಾಗಿದ್ದು ಇಂದು ಬೆಳೆದು ಬೃಹತ ಹೆಮ್ಮರವಾಗಿದೆ ಎಂದರು.
ಸಂಘ ಭಯೋತ್ಪಾದನೆಯ ಸಂಘಟನೆಯಲ್ಲಾ ದೇಶದ ಸಮಾಜದ ಅಭಿವೃಧ್ಧಿಗಾಗಿ ಶ್ರಮಿಸುವ ಸಂಘಟನೆಯಾಗಿದೆ. ಅಂದು ಸಂಘದ ಜೊತೆಗೆ ಗುರುತಿಸಲು ಹಿಂಜರಿಯುತ್ತಿದ್ದಾರೆ. ಸಂಘ ಎಂದಿಗೂ ರಾಜಕೀಯವಾಗಿ ಗುರುತಿಸಿಕೊಂಡಿಲ್ಲ. ಆಗದವರು ವಿನಾಕಾರಣ ಹುಯಿಲೆಬ್ಬಿಸಿದ್ದಾರೆ. ಸಂಘವು ನಿಶ್ಚಯಿಸಿದ ಕಾರ್ಯವನ್ನು ಶತಾಯು ಗತಾಯುವಾಗಿ ಪೂರ್ಣಗೊಳಿಸಿಯೇ ಬಿಡುತ್ತದೆ. ಹೇಳಿದಂತೆ ನಡೆಯುವದೇ ಸಂಘದ ಕಾರ್ಯವಾಗಿದೆ ಅದರಂತೆ ಸ್ವಯಂ ಸೇವಕರು ತಯಾರಾಗಿದ್ದಾರೆ. ಎಂದರು.
ಸಂಘವಿಂದು ಕೇಂದ್ರಸ್ಥಾನಕ್ಕೆ ಬಂದು ನಿಂತಿದೆ ಪ್ರತಿಯೊಂದು ಗ್ರಾಮದಲ್ಲಿಯೂ ಸಂಘದ ನಾಲ್ಕಾರು ಸ್ವಯಂ ಸೇವಕರು ಇರುತ್ತಾರೆ. ಸಮಾಜದಲ್ಲಿ ಅದ್ಬುತ ಪರಿವರ್ತನೆ ಕಾಣುತ್ತಿದೆ ಸಂಘದಿಂದ ಅನೇಕ ಗತಿವಿಧಿಗಳು ಹತ್ತ ಹಲವಾರು ರೀತಿಯಲ್ಲಿ ಕೆಲಸ ಮಾಡುತ್ತಿದ್ದಾರೆ ದೇಶದೆಲ್ಲಡೆಯಲ್ಲಿ ಇದು ನಡೆಯುತ್ತಿದೆ. ಸಂಘ ಇಂದು ಹೆಮ್ಮರವಾಗಿ ಬೆಳೆದಿದೆ. ಎಂದರು.
ನಗರದ ಮಹಾ ಸಂಘಿಕನಲ್ಲಿ ಸುಮಾರು 1000 ಸಾವಿರ ಅಧಿಕ ಸ್ವಯಂ ಸೇವಕರು ಭಾಗಿಯಾಗಿದ್ದರು. ಜಿಲ್ಲಾ ಸಂಘ ಸಂಚಾಲಕ ಬಿ.ಎಸ್.ಕುಲಕರ್ಣಿ, ಜಿಲ್ಲಾ ಸಹ ಸಂಘ ಸಂಚಾಲಕ ಅಶೋಕ ತುಂಗಳ, ವಿಜಯಪುರ ವಿಭಾಗ ಕಾರ್ಯನಿರ್ವಾಹಕ ವಿಠ್ಠಲ ಕುಲಕರ್ಣಿ ಇದ್ದರು.ಮಲ್ಲಿಕಾರ್ಜುನ ಇಂಗಳಗಾವಿ ಸ್ವಾಗತಿಸಿ ಪರಿಚಯಿಸಿದರು. ರಾಘವೇಂದ್ರ ಕಲ್ಲೂರ ನಿರೂಪಿಸಿದರು.