ಹಿಂದೂ ಯುವತಿ ಅಪಹರಿಸಿ ಮುಸ್ಲಿಂ ವ್ಯಕ್ತಿಯೊಂದಿಗೆ ಬಲವಂತವಾಗಿ ಮದುವೆ?
ಇಸ್ಲಾಮಾಬಾದ್: ಜುಲೈ ೧೪ : ಪಾಕಿಸ್ತಾನದ ಸಿಂಧ್ ನಲ್ಲಿ 16 ವರ್ಷದ ಹಿಂದೂ ಹದಿಹರೆಯದ ಯುವತಿಯನ್ನು ಅಪಹರಿಸಿ ಮುಸ್ಲಿಂ ವ್ಯಕ್ತಿಯೊಂದಿಗೆ ಬಲವಂತವಾಗಿ ಮದುವೆ ಮಾಡಲಾಗಿದೆ.
ಯುವತಿಯನ್ನು ಅಪಹರಿಸಿದ ನಂತರ ಮೊದಲು ಇಸ್ಲಾಂಗೆ ಮತಾಂತರಿಸಲಾಗಿದೆ. ತದನಂತರ ಮದುವೆ ಮಾಡಲಾಗಿದೆ ಎಂದು ತಿಳಿದು ಬಂದಿದೆ.
ಪಾಕಿಸ್ತಾನದ ಮಾಜಿ ಅಧ್ಯಕ್ಷ ಆಸಿಫ್ ಅಲಿ ಜರ್ದಾರಿ ಬೆಂಬಲ ನೀಡುವಂತೆ ಹಿಂದೂ ಸಮುದಾಯವು ನವಾಬ್ ಶಾಹ್‌ನಲ್ಲಿರುವ ಅವರ ಮನೆಯ ಮುಂದೆ ಪ್ರತಿಭಟನೆ ನಡೆಸಿತು.
ಡಾನ್ ಪ್ರಕಾರ, ಸಿಂಧ್ ಪ್ರಾಂತ್ಯದ ಖಾಜಿ ಅಹ್ಮದ್ ನಗರದಲ್ಲಿ ಒಂದು ವಾರದ ಹಿಂದೆ ಬಾಲಕಿಯನ್ನು ಅಪಹರಿಸಲಾಗಿತ್ತು.