ಕಾರವಾರದಲ್ಲಿ ರಭಸದ ಗಾಳಿ ಮಳೆ
Heavy rain and wind in Karwar
ಕಾರವಾರದಲ್ಲಿ ರಭಸದ ಗಾಳಿ ಮಳೆ
ಕಾರವಾರ 25: ಉತ್ತರ ಕನ್ನಡ ಜಿಲ್ಲೆಯ ಕಾರವಾರದಲ್ಲಿ ಶನಿವಾರ ಭಾರೀ ಮಳೆ ಸರಿಯಿತು. ಶನಿವಾರ ಬೆಳಗಿನ ಜಾವ 3 ಗಂಟೆಯಿಂದ 9 ಗಂಟೆ ತನಕ ಸತತ ಮಳೆ ಸುರಿಯಿತು. ಪರಿಣಾಮ ಕಾರವಾರ ತಾಲೂಕಿನ ಶಾಲೆಗಳಿಗೆ ರಜೆ ಘೋಷಿಸಲಾಗಿತ್ತು. ಅಂಕೋಲಾದ ಹಾರವಾಡ, ಬೇಲೇಕೇರಿ.ಭಾವಿಕೇರಿ, ಕುಮಟಾದ ಹನೇಹಳ್ಳಿ ಯಲ್ಲಿ ಭಾರೀ ಮಳೆ ಸುರಿಯಿತು.ಶನಿವಾರ ಹಗಲು ಕರಾವಳಿ ತಾಲೂಕುಗಳಲ್ಲಿ ಆಗಾಗ ರಭಸದಮಳೆ ಸುರಿದಿದೆ. ವೈಲವಾಡದಲ್ಲಿ 60 ಮಿಲಿಮೀಟರ್, ಮುಡಗೇರಿ 49,ಅಸ್ನೊಟಿ 54, ಮಾಜಾಳಿ 58, ಶಿರವಾಡ 44, ಗೋಟೆಗಾಳಿಯಲ್ಲಿ 42, ಹಾರವಾಡದಲ್ಲಿ 80, ಹೊನ್ನಾವರದ ಹಳದಿಪುರದಲ್ಲಿ 62 , ಅಂಕೋಲಾದಲ್ಲಿ 49, ಬೇಲೇಕೇರಿ 76, ಬಾವಿಕೇರಿ 65.5, ಸಗಡಗೇರಿ 47, ಹಟ್ಟಿಕೇರಿ 68, ಕುಮಟಾ 73 ಮಿಲಿಮೀಟರ್ ಮಳೆಯಾಗಿದೆ. ಇನ್ನು ಘಟ್ಟದ ಮೇಲೆ ದಾಂಡೇಲಿ ,ಹಳಿಯಾಳದಲ್ಲಿ ಶನಿವಾರ ತುಂತುರು ಮಳೆಯಾಗಿದೆ. ದಾಂಡೇಲಿ, ಜೊಯಿಡಾದಲ್ಲಿ ತುಂತುರು ಮಳೆಯಾಗಿದೆ. ಘಟ್ಟದ ಇತರೆ ತಾಲೂಕುಗಳಲ್ಲಿ ಸಹ ಸಣ್ಣ ಮಳೆ ಸುರಿದಿದೆ. ಎಲ್ಲಿಯೂ ಹೆಚ್ಚಿನ ಅನಾಹುತ ಸಂಭವಿಸಿಲ್ಲ. ಅ.27 ರತನಕ ಮಳೆ ಮುಂದುವರಿಯಲಿದೆ .ಕಡಲಿಗೆ ಇಳಿಯದಂತೆ ಮೀನುಗಾರರಿಗೆ ಎಚ್ಚರಿಕೆ ನೀಡಲಾಗಿದೆ.
ಹೆತ್ತ ವೃದ್ದ ತಾಯಿಯನ್ನೆ ನಿರ್ಜನ ಪ್ರದೇಶಕ್ಕೆ ರಾತ್ರಿ ಎಸೆದು ಹೋದ ಪಾಪಿ ಪುತ್ರ : ಅನ್ನ ನೀರು ಇಲ್ಲದೆ ಈಡಿ ರಾತ್ರಿ ಕಳೆದ ಹಿರಿಯ ಜೀವ
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ 