ಭಾರಿ ಮಳೆ ಗಾಳಿಗೆ ಮನೆ ಸಂಪೂರ್ಣ ಮನೆ ಜಖಂ; ಸಂತ್ರಸ್ಥರಿಗೆ ನೆರವಾದ ಕೃಷ್ಣಗೌಡ್ರು

ಭಾರಿ ಮಳೆ ಗಾಳಿಗೆ ಮನೆ ಸಂಪೂರ್ಣ ಮನೆ ಜಖಂ; ಸಂತ್ರಸ್ಥರಿಗೆ ನೆರವಾದ ಕೃಷ್ಣಗೌಡ್ರು Heavy rain and wind completely damage houses; Krishna Gowda helps victims

ಲೋಕದರ್ಶನ ವರದಿ 

 ಗದಗ 01: ಯಾರಿಗೆ ಸಂಕಷ್ಟ ಎದುರಾಗುತ್ತದೆಯೋ ಅಲ್ಲಿಗೆ ಪ್ರತ್ಯಕ್ಷವಾಗಿ ಧಾವಿಸಿ, ಕಷ್ಟದಲ್ಲಿರುವವರ ಕಣ್ಣೀರು ಒರೆಸುವ ಗುಣವುಳ್ಳ ಹಿರಿಯ ಸಚಿವರಾದ ಎಚ್‌.ಕೆ ಪಾಟೀಲ ಸಾಹೇಬರ ಸುಪುತ್ರರಾದ ಕೃಷ್ಣಗೌಡ್ರು ಪಾಟೀಲ ಅವರು ಇಂದಿನ ರಾಜಕೀಯ ವ್ಯವಸ್ಥೆಗೆ ಅತ್ಯಂತ ಆದರ್ಶಪ್ರಾಯರಾದ ಹೃದಯವಂತ ಜನನಾಯಕರಾಗಿದ್ದಾರೆ," ಎಂದು ಗದಗಿನ ಸಾಮಾಜಿಕ ಕಾರ್ಯಕರ್ತರಾದ ಕೃಷ್ಣಾ ಎಚ್‌. ಹಡಪದ ಅವರು ಮುಕ್ತ ಕಂಠದಿಂದ ಪ್ರಶಂಸಿಸಿದ್ದಾರೆ.   ಇತ್ತೀಚೆಗೆ ಸುರಿದ ಭೀಕರ ಬಿರುಗಾಳಿ ಮಳೆಗೆ ಗದಗ ನಗರದ ಐತಿಹಾಸಿಕ ಶ್ರೀ.ವೀರನಾರಾಯಣ ದೇವಸ್ಥಾನದ ಹಿಂಭಾಗದ ಖಾನ ತೋಟ ರಸ್ತೆಯಲ್ಲಿ ಬೃಹತ್ ಮರ ಬಿದ್ದು, ಸಂಪೂರ್ಣ ಮನೆ ಜಖಂಕೊಂಡು ಸಂಕಷ್ಟಕ್ಕೆ ಸಿಲುಕಿದ್ದ ಹಿರಿಯ ಮುಖಂಡರಾದ ನಾಸೀರುದ್ದೀನ್ ಮುಲ್ಲಾಅವರ ನಿವಾಸಕ್ಕೆ ಕಾಂಗ್ರೆಸ್ ಯುವ ನಾಯಕರಾದ ಕೃಷ್ಣಗೌಡ್ರು ಪಾಟೀಲ ಅವರು ಖುದ್ದಾಗಿ ಭೇಟಿ ನೀಡಿ ಪರಿಸ್ಥಿತಿಯನ್ನು ವೀಕ್ಷಿಸಿದರು. ಅ

ವಘಡದಿಂದ ಸಂಪೂರ್ಣ ಜಖಂಆದ, ಮನೆ ಶೌಚಾಲಯ ಸ್ನಾನದ ಗೃಹ ಹಾಗೂ ಇಡೀ ಬದುಕನ್ನೇ ಕಳೆದುಕೊಂಡು ಕಣ್ಣೀರಲ್ಲಿ ಮುಳುಗಿದ್ದ ನಾಸೀರುದ್ದೀನ್ ಮುಲ್ಲಾ ಮತ್ತು ಅವರ ಕುಟುಂಬಸ್ಥರ ಕೈ ಹಿಡಿದು ಸಾಂತ್ವನ ಹೇಳಿದರು. "ನಾವಿದ್ದೇವೆ ನಿಮ್ಮ ಜೊತೆ, ಯಾವುದೇ ಕಾರಣಕ್ಕೂ ಧೈರ್ಯ ಗೆಡಬೇಡಿ" ಎಂದು ಬೆಂಬಲವಾಗಿ ನಿಲ್ಲುವ ಮೂಲಕ ಬಡ ಕುಟುಂಬದಲ್ಲಿ ಹೊಸ ಭರವಸೆ ಮತ್ತು ಆತ್ಮವಿಶ್ವಾಸ ಮೂಡಿಸಿದರು. ಬರೀ ಸಾಂತ್ವನ ಹೇಳುವುದಷ್ಟಕ್ಕೆ ಸೀಮಿತವಾಗದ ಪಾಟೀಲರು, ಸ್ಥಳದಲ್ಲೇ ಇದ್ದುಕೊಂಡೇ ನಗರಸಭೆಯ ಪೌರಾಯುಕ್ತರಿಗೆ ದೂರವಾಣಿ ಮುಖಾಂತರ ಮಾತನಾಡಿ, "ತಕ್ಷಣವೇ ಅಧಿಕಾರಿಗಳನ್ನು ಸ್ಥಳ ಪರೀಶೀಲನೆಗೆ ಕಳುಹಿಸಿ, ಬಡ ಕುಟುಂಬದ ಮನೆಯ ಮೇಲ್ಚಾವಣಿ (ಸ್ಲಾಬ್) ದುರಸ್ತಿ, ನೂತನ ಶೌಚಾಲಯ ಮತ್ತು ಸ್ನಾನದ ಗೃಹ ನಿರ್ಮಾಣ ಹಾಗೂ ಇನ್ನುಳಿದ ಸಣ್ಣಪುಟ್ಟ ಹಾನಿಗಳಿಗೆ ನಗರಸಭೆಯ ವಿಶೇಷ ನಿಧಿಯಡಿ ತುರ್ತು ಪರಿಹಾರ ಒದಗಿಸಬೇಕು" ಎಂದು ಕಟ್ಟು ನಿಟ್ಟಿನ ಸೂಚನೆ ನೀಡಿದರು. ಈ ಸಂದರ್ಭದಲ್ಲಿಖಾನತೋಟಓಣಿಯಗುರು  ಹಿರಿಯರು ಪ್ರಮುಖ ನಾಯಕರುಗಳು ಮುಖಂಡರುಗಳು ಯುವ ನಾಯಕರುಗಳು ಮತ್ತು ವಿಶೇಷವಾಗಿ ಕೃಷ್ಣಗೌಡ್ರು ಪಾಟೀಲರ ನೂರಾರು ಅಭಿಮಾನಿಗಳು ಹಾಜರಿದ್ದರು