ಅರೋಗ್ಯ ಶಿಬಿರ: 70 ಜನರಲ್ಲಿ ವಿವಿಧ ಗಂಭೀರ ಕಾಯಿಲೆ ಪತ್ತೆ : 14 ಜನ ಚಿಕಿತ್ಸೆಗೆ
Health camp: 70 people diagnosed with various serious diseases: 14 people for treatment
ಲೋಕದರ್ಶನ ವರದಿ
ಗಂಗಾವತಿ 01: ಡಾ.ಆರ್.ಬಿ.ಪೌಂಡೇಷನ್ ಗಂಗಾವತಿ, ಶ್ರೀ ಅಂಜನಾದ್ರಿ ಗೆಜ್ಜೆ ಹೆಜ್ಜೆ ಜನಸೇವಾ ಕಲಾ ಟ್ರಸ್ಟ್ ಗಂಗಾವತಿ ಮತ್ತು ಸಂಪ್ತಗಿರಿ ಆಸ್ಪತ್ರೆ ಬೆಂಗಳುರು ಸಹಯೋದೊಂದಿಗೆ ಡಾ.ಆರ್.ಬಿ.ಪಾಟೀಲ್ ಹಾಗು ಇಂಗಳಗಿ ನಾಗರಾಜ್ ನೇತೃತ್ವದಲ್ಲಿ ಕಳೆದ ವಾರ ಜರುಗಿದ ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ನಡೆಸಿದ ತಪಾಸಣೆಯಲ್ಲಿ 70 ಜನರಲ್ಲಿ ವಿವಿಧ ಗಂಭೀರ ಕಾಯಿಲೆಗಳು ಪತ್ತೆಯಾಗಿದ್ದು ಇವರಲ್ಲಿ 14 ಜನ ಬೆಂಗಳೂರಿನ ಸಪ್ತಗಿರಿ ಆಸ್ಪತ್ರೆಗೆ ಮೇ.29 ರಂದು ತೆರಳಿದ್ದು, ಹೃದ್ರೋಗದ ತೀವ್ರತೆ ಹೆಚ್ಚಿದ್ದ ಗಂಗಾವತಿಯ ಪಾರ್ವತಮ್ಮ ಎನ್ನುವವರಿಗೆ ಮೂರು ಸ್ಟಂಟ್ ಹಾಕುವ ಮೂಲಕ ಉತ್ತಮ ಚಿಕಿತ್ಸೆ ನೀಡಲಾಗಿದೆ.
ಇನ್ನುಳಿದವರು ಹಂತಹಂತವಾಗಿ ಉತ್ತಮ ಚಿಕಿತ್ಸೆ ಕೊಡಲಾಗುತ್ತಿದ್ದು ಆಸ್ಪತ್ರೆಯ ಸಿಬ್ಬಂದಿಯ ಕಾಳಜಿಗೆ ರೋಗಿಗಳು ತೃಪ್ತಿ ಹೊಂದಿದ್ದು, ಎಲ್ಲರಿಗು ಗುಣಮಟ್ಟದ ಚಿಕಿತ್ಸೆ ದೊರೆಯಲಿದೆ. ಶಿಬಿರದ ಆಯೋಜಕರು ಮತ್ತು ಡಾ.ಆರ್.ಬಿ.ಪಾಟೀಲ್ ಪೌಂಡೇಷನ್ ಅಧ್ಯಕ್ಷರಾದ ಡಾ.ಆರ್.ಬಿ.ಪಾಟೀಲ್ ನ್ಯಾಯಾವಾದಿಗಳು ಮಾತನಾಡಿ, ನಾವು ಮೇಲ್ನೋಟಕ್ಕೆ ಆರೋಗ್ಯವಂತರಾಗಿ ಕಂಡರು ಅಂತರಿಕವಾಗಿ ಆರೋಗ್ಯ ವ್ಯತ್ಯಾಸಗಳಿರುತ್ತವೆ ಕಾಲಕಾಲಕ್ಕೆ ತಪಾಸಣೆ ಅಗತ್ಯವಿದೆ. ಗಭೀರ ಕಾಯಿಲೆಗಳು ಅಂತಿಮ ಘಟ್ಟ ತಲುಪಿದ ನಂತರ ಪತ್ತೆಯಾದಲ್ಲಿ ವೈದ್ಯರು ಕೈ ಚೆಲ್ಲಿ ಬಿಡುತ್ತಾರೆ ಅದ್ದರಿಂದ ಜನತೆ ಸರಕಾರಿ ಆಸ್ಪತ್ರೆ ಅಥವಾ ಉಚಿತ ಶಿಬಿರಗಳ ಲಾಭ ಪಡೆಯಬೇಕು ಎಂದರು.
ಶ್ರೀ ಅಂಜನಾದ್ರಿ ಗೆಜ್ಜೆ ಹೆಜ್ಜೆ ಜನಸೇವಾ ಕಲಾ ಟ್ರಸ್ಟ್ ಅಧ್ಯಕ್ಷರು ಹಾಗು ಶಿಬಿರದ ಆಯೋಜನೆಯಲ್ಲ ಪ್ರಮುಖ ಪಾತ್ರ ವಹಿಸಿದ ನಾಗರಾಜ್ ಇಂಗಳಗಿ ಮಾತನಾಡಿ, ಡಾ. ಆರ್.ಬಿ.ಪಾಟೀಲ್ ಅವರು, ತಮ್ಮ ಸ್ವಂತ ವೆಚ್ಚದಲ್ಲಿ ಶಿಬಿರ ಆಯೋಜಿಸಿ ಜನತೆಗೆ ಆರೋಗ್ಯ ಭಾಗ್ಯ ನೀಡಿದಂತಾಗಿದೆ, ಗಂಗಾವತಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಹೋಬಳಿಗೊಂದರಂತೆ ಉಚಿತ ಶಿಬಿರಗಳನ್ನು ಆಯೋಜಿಸಿ ಮನೆಮನೆಗೆ ಆರೋಗ್ಯ ಸೇವೆ ಮಾಡಲಿದ್ದು ಕೆಲವೇ ದಿನಗಳಲ್ಲಿ ಆನೆಗೊಂದಿ ಭಾಗದಲ್ಲಿ ಶಿಬಿರ ಏರಿ್ಡಲಿದ್ದೇವೆ. ಶಿಬಿರದ ಯಶಸ್ಸಿಗೆ ಅನೇಕರು ಕೈಜೋಡಿದ್ದು, ಶ್ರಮಜೀವಿ ಕಟ್ಟಡ ಕಾರ್ಮಿಕರ ಸಂಘ ರಾಜ್ಯ ಘಟಕ ಗಂಗಾವತಿ, ಗಂಗಾವತಿ ತಾಲೂಕು ಉಪ್ಪಾರ ಸಮಾಜ, ಪೊಲೀಸ್ ಇಲಾಖೆ, ಆರೋಗ್ಯ ಇಲಾಖೆ, ನಗರಸಭೆ, ಸ್ಪೂರ್ತಿ ಕಾಲೇಜು ಗಂಗಾವತಿ ಸೇರಿದಂತೆ ಅನೇಕ ಸಂಘ ಸಂಸ್ಥೆಗಳು, ಗಣ್ಯರು, ನಾಗರೀಕರು ಬೆಂಬಲ ವ್ಯಕ್ತಪಡಿಸಿದ್ದು ಹರ್ಷ ತಂದಿದೆ ಎಂದು ಸ್ಮರಿಸಿದರು.
ಹೆತ್ತ ವೃದ್ದ ತಾಯಿಯನ್ನೆ ನಿರ್ಜನ ಪ್ರದೇಶಕ್ಕೆ ರಾತ್ರಿ ಎಸೆದು ಹೋದ ಪಾಪಿ ಪುತ್ರ : ಅನ್ನ ನೀರು ಇಲ್ಲದೆ ಈಡಿ ರಾತ್ರಿ ಕಳೆದ ಹಿರಿಯ ಜೀವ
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ 