ದಿ. 10ರಂದು ದೇವಸ್ಥಾನಗಳಲ್ಲಿ ಗುರುಪೂರ್ಣಿಮೆಯ ಕಾರ್ಯಕ್ರಮಗಳು
Guru Purnima programs in temples on the 10th
ದಿ. 10ರಂದು ದೇವಸ್ಥಾನಗಳಲ್ಲಿ ಗುರುಪೂರ್ಣಿಮೆಯ ಕಾರ್ಯಕ್ರಮಗಳು
ಹಾವೇರಿ 06: ಇಲ್ಲಿನ ಹಾನಗಲ್ ರೋಡಿನ ವೈಭವಿಲಕ್ಷ್ಮಿ ಪಾರ್ಕಿನ ಹತ್ತಿರದ ಶ್ರೀಗಣೇಶ, ಅಂಬಾಭವಾನಿ,ಶ್ರೀ ಶಿರಡಿ ಸಾಯಿಬಾಬಾ ಹಾಗೂ ನವಗ್ರಹಗಳ ದೇವಸ್ಥಾನದಲ್ಲಿ ಗುರುಪೂರ್ಣಿಮೆಯ ವಿಶೇಷ ಕಾರ್ಯಕ್ರಮಗಳು ದಿ. 10ರಂದು ಗುರುವಾರ ಜರುಗಲಿದೆ.ಅಂದು ಬೆಳಿಗ್ಗೆ 6 ಗಂಟೆಗೆ ಶಿರಡಿ ಸಾಯಿಬಾಬಾ ದೇವರ ಕಾಕಡ ಆರತಿ.7:30 ಗಂಟೆಗೆ ಸೂರ್ಯೋದಯ ಆರತಿ,8 ಗಂಟೆಗೆ ಶ್ರೀ ಗಣೇಶ ದೇವರಿಗೆ ಅಸ್ಟೋತ್ತರ ಪೂಜೆ,9 ಗಂಟೆಗೆ ಶ್ರೀ ಸಾಯಿ ಸತ್ಯವ್ರತ ಪೂಜೆ. ಮಧ್ಯಾಹ್ನ 1 ಗಂಟೆಗೆ ಆರತಿ ನಂತರ ಅನ್ನಪ್ರಸಾದ ಸೇವೆ.4 ಗಂಟೆಗೆ ಶ್ರೀಚಕ್ರಕ್ಕೆ ಲಲಿತ ಸಹಸ್ರನಾಮದೊಂದಿಗೆ ಕುಂಕುಮಾರ್ಚನೆ. 5:30 ಗಂಟೆಗೆ ಸಾಮೂಹಿಕ ವಿಷ್ಣು ಸಹಸ್ರನಾಮ ಪಾರಾಯಣ. ಸಂಜೆ 6 ಗಂಟೆಗೆ ಭಜನೆಯೊಂದಿಗೆ ಪಾಲಕಿ ಸೇವೆ. 7 ಗಂಟೆಗೆ ಶಿರಡಿ ಸಾಯಿಬಾಬಾ ರವರಿಗೆ ಧೂಪಾರತಿ ಹಾಗೂ ರಾತ್ರಿ 8 ಗಂಟೆಗೆ ಶೇಜಾರತಿ ಹೀಗೆ ದೇವರಿಗೆ ಪೂಜೆ ವಿಜೃಂಭಣೆಯಿಂದ ಜರುಗಲಿವೆ.ಗುರುಪೂರ್ಣಿಮೆಯ ಪ್ರಯುಕ್ತ ಜಿಲ್ಲಾ ಆಸ್ಪತ್ರೆ.ರಕ್ತನಿಧಿ ಕೇಂದ್ರದಿಂದ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಆಯೋಜಿಸಲಾಗಿದೆ.ಹಾವೇರಿ ನಗರದ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಸಾರ್ವಜನಿಕರು ಹಾಗೂ ಭಕ್ತರು ಪಾಲ್ಗೊಂಡು ದೇವರ ಕೃಪೆಗೆ ಪಾತ್ರರಾಗುವಂತೆ ಹಾಗೂ ಸ್ವಯಂ ಪ್ರೇರಿತವಾಗಿ ರಕ್ತದಾನ ಮಾಡುವಂತೆ ಅಂಬಾಭವಾನಿ ದೇವಸ್ಥಾನ ಟ್ರಸ್ಟ(ರಿ) ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಪ್ರಕಟಣೆಯಲ್ಲಿ ಕೋರಿದ್ದಾರೆ.
ಹೆತ್ತ ವೃದ್ದ ತಾಯಿಯನ್ನೆ ನಿರ್ಜನ ಪ್ರದೇಶಕ್ಕೆ ರಾತ್ರಿ ಎಸೆದು ಹೋದ ಪಾಪಿ ಪುತ್ರ : ಅನ್ನ ನೀರು ಇಲ್ಲದೆ ಈಡಿ ರಾತ್ರಿ ಕಳೆದ ಹಿರಿಯ ಜೀವ
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ 