ಕುಕನೂರ್

ಗ್ರಾಪಂ ಅಧ್ಯಕ್ಷೆ, ಪಿಡಿಓ. ಭ್ರಷ್ಟಾಚಾರ: ಲಕ್ಷ್ಮಿ ದಾಸರ್ ಆರೋಪ

ಗ್ರಾಪಂ ಅಧ್ಯಕ್ಷೆ, ಪಿಡಿಓ. ಭ್ರಷ್ಟಾಚಾರ: ಲಕ್ಷ್ಮಿ ದಾಸರ್ ಆರೋಪ

ಕುಕನೂರು 11: ಕುದುರಿಮೋತಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ದುರ್ಗವ್ವ ದೂಪಂ ಹಾಗೂ ಪಿಡಿಓ ದೊಡ್ಡಬಸಮ್ಮ ಅವರಿಂದ ಗ್ರಾಮ ಪಂಚಾಯಿತಿಯಲ್ಲಿ ಸುಮಾರು 20ಲಕ್ಷ ರೂಪಾಯಿಗೂ ಹೆಚ್ಚು ಭ್ರಷ್ಟಾಚಾರ ಎಸಗಿದ್ದಾರೆ ಎಂದು  ಅದೇ ಗ್ರಾಮ ಪಂಚಾಯಿತಿಯ ಸದಸ್ಯೆ ಲಕ್ಷ್ಮಿ ದಾಸರ ಹಾಗೂ ಅವರ ಪತಿ ವಿಜಯಕುಮಾರ್  ದಾಸರ್ ಆರೋಪಿಸಿದ್ದಾರೆ.   

ಪಟ್ಟಣದ ಪತ್ರಿಕಾ ಭವನದಲ್ಲಿ  ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ನರೇಗಾ ಯೋಜನೆಯಲ್ಲಿ ಬದು ನಿರ್ಮಾಣ, ಚರಂಡಿ ಹಾಗೂ 15ನೇ ಹಣಕಾಸಿನ ಯೋಜನೆಗಳಲ್ಲಿ ಅಕ್ರಮ ಎಸಗಿದ್ದಾರೆ. ಕುದರಿಮೋತಿ ಗ್ರಾಮದಲ್ಲಿ ಯಮಣ್ಣ ಕಾಳಿ ಮನೆಯಿಂದ ನಡೂಲಮನಿ ಮನೆಯವರೆಗೆ ಚರಂಡಿ ನಿರ್ಮಾಣ  ಕಾಮಗಾರಿ ಮಾಡದೆ 92000ಸಾವಿರ ರೂ ಬೋಗಸ್ ಬಿಲ್ ಮಾಡಿದ್ದಾರೆ. ಈ ಎಲ್ಲಾ ಅಕ್ರಮಗಳ ಬಗ್ಗೆ ಸಾಕ್ಷಿ ಸಮೇತ ಮೇಲಧಿಕಾರಿಗಳ ಗಮನಕ್ಕೆ ತಂದು ಮನವಿ ಮಾಡಿದ್ದೇನೆ ಅದರ ಬಗ್ಗೆ ಈಗಾಗಲೇ ತನಿಖೆ ನಡೆದಿದೆ. ನಮ್ಮ ಕುಟುಂಬಕ್ಕೆ ಬೆದರಿಕೆ ಕರೆಗಳು ಬರುತ್ತಿವೆ ನಮಗೆ ರಕ್ಷಣೆ ನೀಡಬೇಕು ಜೊತೆಗೆ ಅಧ್ಯಕ್ಷೆ ದುರ್ಗವ್ವಾ ದೂಪಂ ಹಾಗೂ ಪಿಡಿಒ ದೊಡ್ಡಬಸಮ್ಮ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು ,ಪಂಚಾಯಿತಿಯಲ್ಲಿ ಅಭಿವೃದ್ಧಿ ಕೆಲಸಗಳು ನಡೆಯಬೇಕು ಹೊರತು ಈ ರೀತಿಯ ಅಕ್ರಮಗಳು ನಡೆಯಬಾರದು ಎಂದರು. ಶ್ರೀಧರ್ ದಾಸರ್ ಶಿವು ನಡುಲರ್ ಹಾಗೂ ಹನುಮಗೌಡು  ಇತರರು ಇದ್ದರು. 


ಸುದ್ದಿ ಓದಿ