ಮುಂಡರಗಿ

ಹೆಣ್ಣುಮಕ್ಕಳ ಪ್ರೌಢ ಶಾಲೆಯ ಸುವರ್ಣ ಮಹೋತ್ಸವ

ಹೆಣ್ಣುಮಕ್ಕಳ ಪ್ರೌಢ ಶಾಲೆಯ ಸುವರ್ಣ ಮಹೋತ್ಸವ

ಮುಂಡರಗಿ 10: ನ.13ರಂದು ಜ. ಅ. ವಿದ್ಯಾ ಸಮಿತಿಯ ಶಾಲಾ ಆವರಣದಲ್ಲಿ ಜರುಗುವ ಎಂ.ಎಸ್‌.ಡಂಬಳ ಹೆಣ್ಣುಮಕ್ಕಳ ಪ್ರೌಢ ಶಾಲೆಯ ಸುವರ್ಣ ಮಹೋತ್ಸವ ಹಾಗೂ ಎಂ.ಎಸ್‌.ಡಂಬಳ ಮಹಿಳಾ ಪದವಿ ಪೂರ್ವ ಮಹಾವಿದ್ಯಾಲಯದ ರಜತ ಮಹೋತ್ಸವ ಕಾರ್ಯಕ್ರಮಕ್ಕೆ ಸರ್ವರೂ ಪಾಲ್ಗೊಳ್ಳಬೇಕು ಎಂದು  ಜ.ಅ ಸಂಸ್ಥಾನಮಠದ ಉತ್ತರಾಧಿಕಾರಿಗಳು ಹಾಗೂಸ್ವಾಗತ ಸಮಿತಿಯ ಗೌರವಾಧ್ಯಕ್ಷರಾದ ಡಾ.ಮಲ್ಲಿಕಾರ್ಜುನ ಮಹಾಸ್ವಾಮಿಗಳು ಹೇಳಿದರು. 

ಪಟ್ಟಣದ ಕ.ರಾ.ಬೆಲ್ಲದ ಕಾಲೇಜಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ದೇಶದ ಅಭಿವೃದ್ಧಿ ಕಾಣಬೇಕಾದರೆ ಶಿಕ್ಷಣದ ಪಾತ್ರ ಬಹು ದೊಡ್ಡದಾಗಿದೆ. ಈ ನಿಟ್ಟಿನಲ್ಲಿ ನಮ್ಮ ಜ.ಅ. ವಿದ್ಯಾ ಸಮಿತಿಯಿಂದ ಹಲವಾರು ಶಿಕ್ಷಣ ಸಂಸ್ಥೆಗಳನ್ನು ಕಟ್ಟಿ ಅಕ್ಷರದ ಜ್ಞಾನವನ್ನು ನೀಡುತ್ತಾ ಬಂದಿದೆ. ಅನಕ್ಷರಸ್ಥರನ್ನು ಅಕ್ಷರಸ್ತರನ್ನಾಗಿ ಮಾಡುವುದು ಶಿಕ್ಷಣ ಸಂಸ್ಯೆಯಿಂದ ಸಾಧ್ಯವಾಗುತ್ತದೆ ಎಂದು ಹೇಳಿದರು. 

ಐವತ್ತು ವರ್ಷಗಳ ಕಾಲ ಉತ್ತಮ ಶಿಕ್ಷಣವನ್ನು ನೀಡಿದ ಈ ಸಂಸ್ಥೆಯಲ್ಲಿ ವಿದ್ಯಾಭ್ಯಾಸ ಮಾಡಿದ ಅನೇಕ ವಿದ್ಯಾರ್ಥಿಗಳು ವೈಧ್ಯರುಗಳಾಗಿ, ಇಂಜನೀಯರುಗಳಾಗಿ, ನ್ಯಾಯಾಧೀಶರುಗಳಾಗಿ, ಉಪನ್ಯಾಸಕರುಗಳಾಗಿ, ಶಿಕ್ಷಕರಾಗಿ ಇನ್ನೂ ಅನೇಕ ದೊಡ್ಡ ದೊಡ್ಡ ಜವಾಬ್ದಾರಿ ಅಧಿಕಾರಿ ಹುದ್ದೆಯಲ್ಲಿ ಹಾಗೂ ರಾಜಕೀಯ ರಂಗದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಅಲ್ಲದೆ ದೇಶ  ವಿದೇಶದಲ್ಲಿ ಸೇವೆ ಸಲ್ಲಿಸುತ್ತಿರುವುದು ಹೆಮ್ಮೆಯಾಗುತ್ತಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು 

ಈ ವೇಳೆ ಜ.ಅ ವಿದ್ಯಾ ಸಮಿತಿ ಆಡಳಿತಾಧಿಕಾರಿ ಡಾ.ಬಿ.ಜಿ.ಜವಳಿ ಮಾತನಾಡಿ, ಎಂ.ಎಸ್‌.ಡಂಬಳ ಹೆಣ್ಣುಮಕ್ಕಳ ಪ್ರೌಢ ಶಾಲೆ ಪ್ರಾರಂಭವಾಗಿ 50 ವರ್ಷಗಳು ಕಳೆದವು ಹಾಗೂ ಅದರ ನೆನಪಿನ ಸುವರ್ಣ ಮಹೋತ್ಸವ ಹಾಗೂ ರಜತ ಮಹೋತ್ಸವ ಕಾರ್ಯಕ್ರಮದಲ್ಲಿ ಹಳೆಯ ವಿದ್ಯಾರ್ಥಿಗಳ ಸಂಘದ ಉದ್ಘಾಟನೆ ಕಾರ್ಯಕ್ರಮ ಜರುಗುವದು.  

ಈ ಕಾರ್ಯಕ್ರಮದ ದಿವ್ಯ ಸಾನಿದ್ಯವನ್ನು ಶ್ರೀ ಜಗದ್ಗುರು ನಾಡೋಜ ಡಾ.ಅನ್ನದಾನೀಶ್ವರ ಮಹಾಸ್ವಾಮಿಗಳು ವಹಿಸುವರು, ನೇತೃತ್ವವನ್ನು ಶ್ರೀ ಜ. ಅ. ಸಂಸ್ಥಾನಮಠದ ಉತ್ತರಾಧಿಕಾರಿಗಳಾದ ಡಾ.ಮಲ್ಲಿಕಾರ್ಜುನ ಮಹಾಸ್ವಾಮಿಗಳು ವಹಿಸುವರು. ಅಧ್ಯಕ್ಷತೆಯನ್ನು ಎಂ.ಎಸ್‌.ಡಂಬಳ ಹೆ.ಮ ಪ್ರೌಢ ಶಾಲೆಯ ಸ್ಥಾನಿಕ ಮೇಲ್ವಿಚಾರಣ ಸಮಿತಿ ಅಧ್ಯಕ್ಷ ಎಂ.ಎಸ್‌.ಶಿವಶೆಟ್ಟಿ ಹಾಗೂ ಮುಖ್ಯ ಅಥಿತಿಗಳಾಗಿ ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ ಸಚಿವ ಬಿ.ಸಿ.ನಾಗೇಶ, ಕೃಷಿ ಸಚಿವ ಬಿ.ಸಿ.ಪಾಟೀಲ, ಗಣಿ ಮತ್ತು ಭೂವಿಜ್ಞಾನ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಕಲ್ಯಾಣ ಇಲಾಖೆ ಸಚಿವ ಹಾಲಪ್ಪ ಆಚಾರ್ಯ ವಿ.ಪ ಸದಸ್ಯ ಬಸವರಾಜ ಹೊರಟ್ಟಿ, ಶಾಸಕರುಗಳಾದ ರಾಮಣ್ಣ ಲಮಾಣಿ ಹಾಗೂ ಕಳಕಪ್ಪ ಬಂಡಿ, ವಿ.ಪ ಸದಸ್ಯ ಎಸ್‌.ವಿ.ಸಂಕನೂರ, ಮಹಿಳಾ ವಿ.ವಿ ಕುಲಪತಿ ಪ್ರೋ.ಬಿ.ಕೆ.ತುಳಸಿಮಾಲ, ಮಾಜಿ ಶಾಸಕ ರಾಮಕೃಷ್ಣ ದೊಡ್ಡಮನಿ, ಜಿಲ್ಲಾಧಿಕಾರಿಗಳಾದ ವೈಶಾಲಿ ಎಂ.ಎಲ್, ಮುಂಡರಗಿ ತಹಶಿಲ್ದಾರ ಶೃತಿ ಎಂ.ಮಳ್ಳಪ್ಪಗೌಡ್ರ, ಹಳೆಯ ವಿದ್ಯಾರ್ಥಿ ಸಂಘದ ಅಧ್ಯಕ್ಷೆ ಪ್ರತಿಭಾ ಹೊಸಮನಿ ಭಾಗವಹಿಸುವುರು. 

ಈ ವೇಳೆ ಕರಬಸಪ್ಪ ಹಂಚಿನಾಳ, ಹೇಮಗಿರಿಶ ಹಾವಿನಾಳ, ಡಾ.ಬಿ.ಜಿ.ಜವಳಿ, ಎಸ್‌.ಎಂ.ಅಗಡಿ ಎಸ್‌.ಎಸ್‌.ಗಡ್ಡದ, ಎಂ.ಎಸ್‌.ಶಿವಶೆಟ್ಟಿ, ವಿ.ಸಿ.ಹಂಪಿಮಠ, ಪ್ರತಿಭಾ ಹೊಸಮನಿ, ಎಸ್‌.ವಿರುಪಾಕ್ಷಪ್ಪ. ದಿಲಿಪಕುಮಾರ ಜೋಷಿ ಇತರರು ಇದ್ದರು. 


ಸುದ್ದಿ ಓದಿ