ಕೋವಿಡ್ 19 : ಜಾಗತಿಕ ಪ್ರಕರಣಗಳ ಸಂಖ್ಯೆ 28.3 ದಶಲಕ್ಷ
ವಾಷಿಂಗ್ಟನ್, ಸೆಪ್ಟೆಂಬರ್ 12: ಜಾಗತಿಕ ಕೊರೋನಾ ವೈರಸ್ ಪ್ರಕರಣಗಳ ಸಂಖ್ಯೆ 28.3 ಮಿಲಿಯನ್‌ಗೆ ತಲುಪಿದ್ದು, ಸಾವು 913,000 ಕ್ಕಿಂತ ಹೆಚ್ಚಾಗಿದೆ ಎಂದು ಜಾನ್ಸ್ ಹಾಪ್‌ಕಿನ್ಸ್ ವಿಶ್ವವಿದ್ಯಾಲಯ ತಿಳಿಸಿದೆ.
ಒಟ್ಟು ಪ್ರಕರಣಗಳ ಸಂಖ್ಯೆ 28,331,121 ಮತ್ತು ಸಾವುನೋವು 913,015 ಕ್ಕೆ ಏರಿದೆ ಎಂದು ಯೂನಿವರ್ಸಿಟಿಯ ಸೆಂಟರ್ ಫಾರ್ ಸಿಸ್ಟಮ್ಸ್ ಸೈನ್ಸ್ ಅಂಡ್ ಎಂಜಿನಿಯರಿಂಗ್ (ಸಿಎಸ್ಎಸ್ಇ) ತನ್ನ ಇತ್ತೀಚಿನ ನವೀಕರಣದಲ್ಲಿ ಬಹಿರಂಗಪಡಿಸಿದೆ.
ಸಿಎಸ್‌ಎಸ್‌ಇ ಪ್ರಕಾರ, ಅಮೆರಿಕ ವಿಶ್ವದ ಅತಿ ಹೆಚ್ಚು ಪ್ರಕರಣ ಮತ್ತು ಸಾವು ಹೊಂದಿದ್ದು, ಕ್ರಮವಾಗಿ 6,443,048 ಮತ್ತು 192,968 ರಷ್ಟಿದೆ.
ಪ್ರಕರಣಗಳ ವಿಷಯದಲ್ಲಿ ಭಾರತ ಪ್ರಸ್ತುತ ಎರಡನೇ ಸ್ಥಾನದಲ್ಲಿದ್ದರೆ, ಸಾವಿನ ಸಂಖ್ಯೆ 76,271ರಷ್ಟಿದೆ.
ಬ್ರೆಜಿಲ್ 4,238,446 ಪ್ರಕರಣಗಳನ್ನು ಹೊಂದಿದ್ದು, ಮೂರನೇ ಸ್ಥಾನದಲ್ಲಿದೆ. ಮತ್ತು ನಂತರದ ಸ್ಥಾನದಲ್ಲಿ ರಷ್ಯಾ 1,048,257, ಪೆರು 710,067, ಕೊಲಂಬಿಯಾ 694,664, ಮೆಕ್ಸಿಕೊ 658,299, ದಕ್ಷಿಣ ಆಫ್ರಿಕಾ 646,398 ಮತ್ತು ಸ್ಪೇನ್ 566,326 ಪ್ರಕರಣಗಳನ್ನು ಹೊಂದಿವೆ.
30,000 ಕ್ಕೂ ಹೆಚ್ಚು ಸಾವು ಸಂಭವಿಸಿದ ಇತರ ದೇಶಗಳಲ್ಲಿ ಬ್ರೆಜಿಲ್ 129,522, ಮೆಕ್ಸಿಕೊ 70,183, ಇಂಗ್ಲೆಂಡ್ 41,703 ಮತ್ತು ಇಟಲಿ 35,597 ಸಾವಿನ ಸಂಖ್ಯೆ ಹೊಂದಿವೆ.