ಹೂವಿನ ಹಡಗಲಿ

ಮಕ್ಕಳಿಗೆ ಉತ್ತಮ ಸಂಸ್ಕಾರ ,ಸಂಸ್ಕೃತಿ ನೀಡಿ: ಉತ್ತಂಗಿ ಸೋಮ ಶಂಕರ ಸ್ವಾಮೀಜಿ

ಮಕ್ಕಳಿಗೆ ಉತ್ತಮ ಸಂಸ್ಕಾರ ,ಸಂಸ್ಕೃತಿ ನೀಡಿ: ಉತ್ತಂಗಿ ಸೋಮ ಶಂಕರ ಸ್ವಾಮೀಜಿ

ಹೂವಿನಹಡಗಲಿ  28-  ಮಕ್ಕಳಿಗೆ ಪಾಲಕರು ಬಾಲ್ಯದಲ್ಲಿಯೇ ಉತ್ತಮ ಸಂಸ್ಕಾರ, ಸಂಸ್ಕೃತಿ ನೀಡಬೇಕು ಎಂದು ಉತ್ತಂಗಿ ಸೋಮ ಶಂಕರ ಸ್ವಾಮೀಜಿ ಹೇಳಿದರು. 

ತಾಲ್ಲೂಕಿನ ಹೊಳಗುಂದಿ ಗ್ರಾಮದ ಊರಮ್ಮದೇವಿ ದೇವಸ್ಥಾನ ದಲ್ಲಿ ಶನಿವಾರ 6ನೇ ದಿನದ ಕಾರ್ಯಕ್ರಮ ದಲ್ಲಿ ಸಾನಿದ್ಯ ವಹಿಸಿ ಮಾತನಾಡಿ  ಧಾರ್ಮಿಕ ಕಾರ್ಯಕ್ರಮ ಗಳು. ಪುರಾಣ ಪ್ರವಚನಗಳು ಕೇಳುವುದರಿಂದ ಮಾನಸಿಕ ನೆಮ್ಮದಿ ಸಾಧ್ಯ ಎಂದರು. ದಸರಾ ಮಹೋತ್ಸವ ಪ್ರಯುಕ್ತ  ಶ್ರೀದೇವಿ ಪುರಾಣ ಪ್ರವಚನವನ್ನು ಪ್ರತಿ ದಿನ  ಹೆಚ್‌.ಎಂ.ಮಲ್ಲಿಕಾರ್ಜುನ. ಪಿ.ನಿತ್ಯಾನಂದ ಆಚಾರ್ಯ ಓದಿದರು. 

ಊರಮ್ಮ ದೇವಿ ದೇಗುಲ ಸಮಿತಿ ಅದ್ಯಕ್ಷ ಎನ್‌.ಎಸ್‌.ಸುರೇಶ್‌. ಕಾರ್ಯ ದರ್ಶಿ ಚಾವಡಿ ಮಂಜುನಾಥ. ಸದಸ್ಯ ರಾದ ಹೆಚ್‌.ಅಶೋಕ. ಸಂಗೀತ ಉಪನ್ಯಾಸಕ ಪೂಜಾರ ಬಸವರಾಜ. ತಬಲ ಸೋಗಿ ಶಿಕ್ಷಕ ಚಂದ್ರ​‍್ಪನಡೆಸಿಕೊಟ್ಟರು. ನಂತರಸೋಮೇಶ್ವರ ಭಜನಾ ಸಂಘ ಮತ್ತು ವೀರೇಶ್ವರ ಭಜನೆ ಸಂಘದವರು ಭಜನೆ ಮಾಡಿದರು. ಎಂ.ಪ್ರಕಾಶ, ಯು.ಶರತ್, ಎನ್‌.ಸಿದ್ದೇಶ.ಹೆಚ್‌.ಡಿ.ಸಂತೋಷ ಇದ್ದರು. 


ಸುದ್ದಿ ಓದಿ