ಬಿಪಿಎಲ್ ಕುಟುಂಬಕ್ಕೆ ವರ್ಷದಲ್ಲಿ ಮೂರು ಬಾರಿ ಗ್ಯಾಸ್ ಉಚಿತ : ಹಾಲಪ್ಪ ಆಚಾರ್
ಕುಕನೂರ: ಬಿಜೆಪಿ ಅಧಿಕಾರಕ್ಕೆ ಬಂದರೆ ರಾಜ್ಯದಲ್ಲಿ ಬಿಪಿಎಲ್ ಕುಟುಂಬಕ್ಕೆ ವರ್ಷದಲ್ಲಿ ಮೂರು ಬಾರಿ ಉಚಿತ ಗ್ಯಾಸ್ ಸೇರಿದಂತೆ ಪ್ರತಿನಿತ್ಯ ಅರ್ಧ ಲೀಟರ್ ಹಾಲು ಹಾಗೂ ತಿಂಗಳಿಗೆ 5 ಕೆಜಿ ಸಿರಿಧಾನ್ಯ ಉಚಿತವಾಗಿ ನೀಡಲಾಗುವುದು ಎಂದು ಸಚಿವ ಹಾಲಪ್ಪ ಆಚಾರ್ ಹೇಳಿದರು.
ತಾಲೂಕಿನ ನಿಟ್ಟಾಲಿ, ಅಡವಿಹಳ್ಳಿ,ಕೋಮಲಾಪುರ, ಚಿತ್ತಾಪುರ, ಗ್ರಾಮಗಳಲ್ಲಿ ಚುನಾವಣಾ ಪ್ರಚಾರಾರ್ಥವಾಗಿ ಮಾತನಾಡಿದ ಅವರು ರಾಜ್ಯದಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದರೆ ಬಡವರ ಪರವಾಗಿರುವಂತಹ ಯೋಜನೆಗಳನ್ನು ಕೈಗೊಂಡಿದೆ ಅಂತಹ ಯೋಜನೆಯಲ್ಲಿ ಕೆಲವೊಂದನ್ನು ಬಿಜೆಪಿ ಘಟಕದಿಂದ ಪ್ರಣಾಳಿಕೆಯನ್ನು ಬಿಡುಗಡೆ ಮಾಡಲಾಗಿದೆ ಅವುಗಳಲ್ಲಿ ಪ್ರಮುಖವಾಗಿ ಬಿಪಿಎಲ್ ಕುಟುಂಬದವರಿಗೆ ವರ್ಷದಲ್ಲಿ ಮೂರು ಬಾರಿ ಗಣೇಶ ಹಬ್ಬ,ಯುಗಾದಿ, ದೀಪಾವಳಿ ಹಬ್ಬಕ್ಕೆ ಉಚಿತವಾಗಿ ಗ್ಯಾಸ್ ನೀಡಲಾಗುವುದು. ಪ್ರತಿನಿತ್ಯ ಅರ್ಧ ಲೀಟರ್ ನಂದಿನಿ ಹಾಲನ್ನು , 5 ಕೆಜಿ ಸಿರಿಧಾನ್ಯ ಆಹಾರ ಉಚಿತವಾಗಿ ಬಡವರಿಗೆ ನೀಡಲಾಗುವುದು. ಎಸ್ಸಿ ಎಸ್ಟಿ ಸಮುದಾಯದವರಿಗೆ 10 ಸಾವಿರ ರೂಪಾಯಿಗಳ ಠೇವಣಿ ಸೇರಿದಂತೆ ಅನೇಕ ರೀತಿಯ ಜನಪರ ಪ್ರಣಾಳಿಕೆಗಳನ್ನು ಬಿಡುಗಡೆ ಮಾಡಲಾಗಿದೆ. ಅವುಗಳೆಲ್ಲವನ್ನು ಅಧಿಕಾರಕ್ಕೆ ಬಂದ ತಕ್ಷಣ ಜಾರಿಗೊಳಿಸಲಾಗುವುದು. ಕಾಂಗ್ರೆಸ್ ವಿತರಿಸುತ್ತಿರುವ ಗ್ಯಾರಂಟಿ ಕಾರ್ಡ್ ಗಳನ್ನು ನಂಬಬೇಡಿ ದೇಶದಲ್ಲಿ ಕಾಂಗ್ರೆಸ್ನ ಗ್ಯಾರಂಟಿ ಕಾರ್ಡ್ ಎಲ್ಲಿಯೂ ನಡೆದಿಲ್ಲ ಅದು ಕೇವಲ ಸುಳ್ಳಿನ ಬೋಗಸ್ ಕಾರ್ಡ್ ಚುನಾವಣಾ ಸಮಯದಲ್ಲಿ ಇಂತಹ ಸುಳ್ಳು ಗ್ಯಾರಂಟಿಗಳನ್ನು ಜನ ನಂಬುವುದಿಲ್ಲ ಹಾಗೆ ನೋಡಿದರೆ ಕಾಂಗ್ರೆಸಿಗೆ ಗ್ಯಾರಂಟಿ ಇಲ್ಲ ಇನ್ನು ಅವರು ಕೊಡುವ ಕಾರ್ಡ್ಗೆ ಏನು ವಾರಂಟಿ ಇದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಮುಖಂಡರಾದ ಸಿ. ಎಚ್.ಪೊಲೀಸ್ ಪಾಟೀಲ್, ರತನ್ ದೇಸಾಯಿ, ವೀರಣ್ಣ ಹುಬ್ಬಳ್ಳಿ, ಶಂಭು ಜೋಳದ್, ಶಶಿಕಲಾ ಮಾಲಿ ಪಾಟೀಲ್, ಸೋಮನಗೌಡ ಇತರರು ಇದ್ದರು