ಆರ್ಥಿಕತೆ ನಾಶಮಾಡಲು ಪ್ರಧಾನಿ ಇಮ್ರಾನ್ ಖಾನ್ ಗೆ ವಿದೇಶಗಳಿಂದ ಹಣ- ಪಾಕ್ ಮಾಜಿ ಸಚಿವ ಆರೋಪ
ಇಸ್ಲಾಮಾಬಾದ್, ಡಿ 23, ದೇಶದ
ಆರ್ಥಿಕತೆಯನ್ನು ನಾಶಮಾಡಲು ಮತ್ತು ಚೀನಾ-ಪಾಕಿಸ್ತಾನ ಆರ್ಥಿಕ ಕಾರಿಡಾರ್ (ಸಿಪಿಇಸಿ) ಯನ್ನು ಹಾಳುಮಾಡಲು
ಪ್ರಧಾನಿ ಇಮ್ರಾನ್ ಖಾನ್ ಅವರಿಗೆ ವಿದೇಶಗಳು ಹಣ ನೀಡಿವೆ ಎಂದು ಪಾಕಿಸ್ತಾನ್ ಮುಸ್ಲಿಂ ಲೀಗ್-ನವಾಜ್
(ಪಿಎಂಎಲ್-ಎನ್) ನಾಯಕ ಅಹ್ಸಾನ್ ಇಕ್ಬಾಲ್ ಆರೋಪಿಸಿದ್ದಾರೆ. ‘ಪಿಎಂಎಲ್-ಎನ್
ಅಧಿಕಾರಾವಧಿಯಲ್ಲಿ ದೇಶದ ಆರ್ಥಿಕತೆ ವೇಗ ಪಡೆದಿತ್ತು. ಆದರೆ ಪಾಕಿಸ್ತಾನ ತೆಹ್ರೀಕ್-ಇ-ಇನ್ಸಾಫ್
(ಪಿಟಿಐ) ಸರ್ಕಾರದ ದೋಷಪೂರಿತ ನೀತಿಗಳಿಂದಾಗಿ ಆರ್ಥಿಕ ಬೆಳವಣಿಗೆ ಪ್ರಸ್ತುತ ಏಷ್ಯಾ ಉಪಖಂಡದಲ್ಲಿ
ಅತ್ಯಂತ ಕೆಳಮಟ್ಟದಲ್ಲಿದೆ. ಪಿಎಂಎಲ್-ಎನ್ ನ ಪ್ರಮುಖ ನಾಯಕರು ಜೈಲುಗಳಲ್ಲಿದ್ದರೂ ಪಕ್ಷ ದೇಶದ ಹಿತಾಸಕ್ತಿಗಾಗಿ
ಕೆಲಸ ಮಾಡುತ್ತಿದೆ.’ ಎಂದು ಇಕ್ಬಾಲ್ ಹೇಳಿದ್ದಾರೆ. ಮಲೇಷ್ಯಾದ ಕೌಲಾಲಂಪುರ್ ನಲ್ಲಿ ನಡೆದ ಶೃಂಗಸಭೆಗೆ ಗೈರು
ಹಾಜರಾದ ಇಮ್ರಾನ್ ಅವರ ನಿಲುವಿನ ಬಗ್ಗೆ ಇಕ್ಬಾಲ್ ಸಂಶಯ ವ್ಯಕ್ತಪಡಿಸಿದ್ದಾರೆ. ವಿಶೇಷವೆಂದರೆ, ಆಡಳಿತಾರೂಢ ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ (ಪಿಟಿಐ) ಚುನಾವಣಾ ಆಯೋಗದ (ಇಸಿಪಿ)
ಮುಂದೆ ವಿದೇಶಿ ಧನಸಹಾಯ ಪ್ರಕರಣವನ್ನು ಎದುರಿಸುತ್ತಿದೆ ಎಂದು ಅವರು ಹೇಳಿದ್ದಾರೆ.
ಬೆಳಗಾವಿಗೆ ಮೋಹನ್ ಭಾಗವತ್ ಭೇಟಿ: 9 ದಿನ ಡ್ರೋನ್ ಹಾರಾಟಕ್ಕೆ ನಿಷೇಧ, 3 ಸ್ಥಳಗಳು ರೆಡ್ ಝೋನ್ : ಡಿಸಿ ಆದೇಶ
ಕೋಲ್ಕತ್ತಾ ಟಿಎಂಸಿ ಕಚೇರಿ ವಿವಾದದ ಮೇಲೆ ಬಂಡಾಯ ಗುಂಪಿಗೆ ಮಮತಾ ಬ್ಯಾನರ್ಜಿ ತೀವ್ರ ವಾಗ್ದಾಳಿ, “ಸಂಸ್ಥೆಗಳನ್ನು ಸ್ವಾಧೀನಪಡಿಸಿಕೊಳ್ಳಲು ಸಾಧ್ಯವಿಲ್ಲ” ಎಂದು ಹೇಳಿಕೆ
ಸಿಸಿಬಿ ಪೊಲೀಸರ ದಾಳಿ–4.96 ಲಕ್ಷ ಮೌಲ್ಯದ ಹೆರಾಯಿನ್ ವಶ, ಓರ್ವ ಬಂಧನ
ಬೆಂಗಳೂರು ಕ್ವಾರಿ ಬಂಡೆ ಕುಸಿತ: ಬಿಹಾರದ ಏಳು ಕಾರ್ಮಿಕರು ಮೃತ
11 ವರ್ಷಗಳಲ್ಲಿ ಡಿಜಿಟಲ್ ಇಂಡಿಯಾ ಆಡಳಿತವನ್ನು ಪರಿವರ್ತಿಸಿ, ನಾಗರಿಕರನ್ನು ಸಬಲಗೊಳಿಸಿದೆ: ಪ್ರಧಾನಿ ಮೋದಿ
ಮುಂಬೈನ ಚೆಂಬೂರಿನಲ್ಲಿ ಶಾಲಾ ಬಸ್ ಮೇಲೆ ಮರ ಉರುಳಿ ಬಿದ್ದು ವಿದ್ಯಾರ್ಥಿ ಸಾವು; ನಾಲ್ವರಿಗೆ ಗಾಯ 