ಪ್ರತಿಯೊಬ್ಬರಿಗೂ ಆಹಾರ ಧಾನ್ಯಗಳು ವಿತರಣೆಯಾಗಬೇಕು: ಶಾಸಕ ಡಾ.ಚಂದ್ರು ಲಮಾಣಿ
ಮುಂಡರಗಿ 20: ತಾಲೂಕಿನಲ್ಲಿ ಪಡಿತರ ಚೀಟಿಯನ್ನು ಹೊಂದಿರುವ ಪ್ರತಿಯೊಬ್ಬರಿಗೂ ಆಹಾರ ಧಾನ್ಯಗಳು ವಿತರಣೆಯಾಗಬೇಕು. ಈ ಹಿನ್ನೆಲೆಯಲ್ಲಿ ಆ ಗ್ರಾಮದಲ್ಲಿ ನ್ಯಾಯಬೆಲೆ ಅಂಗಡಿ ಇಲ್ಲದಿದ್ದರೂ ಎರಡು ದಿನವಾದರೂ ಆ ಗ್ರಾಮಕ್ಕೆ ಹೋಗಿ ಪಡಿತರ ವಿತರಣೆ ಮಾಡುವ ವ್ಯವಸ್ಥೆಯಾಗಬೇಕು ಎಂದು ಶಿರಹಟ್ಟಿ ಶಾಸಕ ಡಾ.ಚಂದ್ರು ಲಮಾಣಿ ಹೇಳಿದರು.
ಪಟ್ಟಣದ ತಹಶಿಲ್ದಾರ ಕಛೇರಿಗೆ ಬೇಟಿ ನೀಡಿ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮಾತನಾಡಿದ ಅವರು, ಶಿರಹಟ್ಟಿ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಮುಂಡರಗಿ ಹೊಂಬಳಿಗೆ ಸಂಬಂಧಿಸಿದ ಬೀಡನಾಳ ತಾಂಡಾ, ವಿರುಪಾಪೂರ ತಾಂಡಾ, ಮುಷ್ಟಿಕೊಪ್ಪ ಗ್ರಾಮಗಳಲ್ಲಿ ಪ್ರತಿ ಮಾಸಿಕವಾಗಿ ವಿತರಿಸಲಾದ ಪಡಿತರ ವಿತರಣೆಯಾಗುತ್ತಿಲ್ಲ. ಆದ್ದರಿಂದ ಕೆಲವು ಗ್ರಾಮಗಳ ಜನತೆ ಹತ್ತಿರದ ಗ್ರಾಮಕ್ಕೆ ಬಂದು ಪಡಿತರ ತೆಗೆದುಕೊಂಡು ಹೋಗುವ ವ್ಯವಸ್ಥೆಯಾಗಿದೆ.
ಇಲ್ಲಿ 80-90 ವರ್ಷದ ವಯೋವೃದ್ದರಿರುವ ಕಾರಣ ಅವರಿಗೆ ತಮ್ಮ ಊರಿಂದ ಬಂದು ಬೇರೆ ಊರಲ್ಲಿರುವ ನ್ಯಾಯಬೆಲೆ ಅಂಗಡಿಗೆ ಹೋಗಿ ಪಡಿತರ ತರಲು ಸಾಧ್ಯವಾಗುವುದಿಲ್ಲ. ಹಾಗೂ ಅವರಲ್ಲಿ ಹೆಬ್ಬೆಟ್ಟಿನ ಸಮಸ್ಯೆ ಉಂಟಾಗುತ್ತದೆ. ಹೀಗಾಗಿ ವಯೋವೃದ್ದರ ಅನುಕೂಲಕ್ಕಾಗಿ ಎಲ್ಲಾ ಗ್ರಾಮಗಳಲ್ಲಿ ಪಡಿತರ ವಿತರಣೆಯಾಗಬೇಕು. ಈ ನಿಟ್ಟಿನಲ್ಲಿ ಇಲ್ಲಿಯ ತಹಶಿಲ್ದಾರರು ಆಹಾರ ಇಲಾಖೆಯವರ ಜೊತೆ ಚರ್ಚಿಸಿ ಮುಂಡರಗಿ ಹೋಬಳಿಯ ಎಲ್ಲಾ ಗ್ರಾಮಗಳಿಗೆ ಅವರ ಊರಲ್ಲೇ ಪಡಿತರ ದಾನ್ಯಗಳ ವಿತರಣೆಯಾಗುವಂತೆ ಆಹಾರ ನೀರೀಕ್ಷಕರಿಗೆ ಆದೇಶ ನೀಡಬೇಕು ಎಂದು ತಹಶಿಲ್ದಾರರಿಗೆ ಚೂಚಿಸಿದರು.
ಅಲ್ಲದೇ ಈ ಕ್ಷೇತ್ರದಲ್ಲಿ ನಿವೇಶ ಹಂಚಿಕೆಯಲ್ಲಿ ಯಾರಿಗೂ ಒಂದು ಪೈಸೆ ಕೊಡದೇ ರೀತಿಯಲ್ಲಿ ಪ್ರಮಾಣಿಕವಾಗಿ ನಿವೇಶನಗಳನ್ನು ಹಂಚಿಕೆಯಾಗಬೇಕು. ಹಾಗೂ ಪಟ್ಟಣದಲ್ಲಿ ಕುಡಿಯುವ ನಿರಾವರಿ, ಮೂಲಭೂತ ಸೌಕರ್ಯಗಳು ಪ್ರತಿಯೊಬ್ಬ ಫಲಾನುಭವಿಗಳಿಗೆ ಮುಟ್ಟುವಂತೆ ಕ್ರಮಕೈಕೊಳ್ಳಬೇಕು. ಹಾಗೂ ತಹಶಿಲ್ದಾರ ಕಛೇರಿಯಲ್ಲಿರುವ ಅಧಿಕಾರಿಗಳೊಂದಿಗೆ ಚರ್ಚಿಸಲಾಗಿದೆ. ಈ ಕಛೇರಿಯಲ್ಲಿ ಬರುವ ಎಲ್ಲಾ ಸೇವೆಗಳಿಗಾಗಿ ಸಾರ್ವಜನಿಕರನ್ನು ಅಲೆದಾಡಿಸದೇ ನಿಗದಿತ ಅವಧಿಯಲ್ಲಿ ಕೆಲಸ ಕಾರ್ಯಗಳನ್ನು ಪ್ರಾಮಾಣಿಕವಾಗಿ ಮಾಡಿಕೊಡಲು ಮುಂದಾಗಬೇಕು. ಹಾಗೂ ಇಲಾಖಾ ಸಿಬ್ಬಂದಿಗಳೊಂದಿಗೆ ಸಾರ್ವಜನಿಕರು ಸಹಕರಿಸಬೇಕು. ಒಟ್ಟಾರೆಯಾಗಿ ಕ್ಷೇತ್ರದ ಸರ್ವಾಂಗೀಣ ಅಭಿವೃದ್ದಿಗಾಗಿ ಪ್ರಾಮಾಣಿ ಪ್ರಯತ್ನಿಸುತ್ತೇನೆ ಎಂದು ಭರವಸೆ ನೀಡಿದರು.
ಈ ಸಭೆ ನಂತರ ಪಟ್ಟಣದ ಸರ್ಕಾರಿ ಆಸ್ಪತ್ರೆ, ಪುರಸಭೆ ಬೇಟಿ ನೀಡಿ ಅಲ್ಲಿಯ ಅಧಿಕಾರಿಗಳ ಹಾಗೂ ಸಿಬ್ಬಂದಿಗಳ ಪರಿಚಯ ಮಾಡಿಕೊಂಡು ಈ ಕಛೇರಿಯಿಂದ ಉತ್ತಮ ಸೇವೆ ಕಂಡುಬರುವಂತೆ ನಿಷ್ಠೆಯಿಂದ ಕೆಲಸ ಮಾಡಲು ಮುಂದಾಗಿ ಎಂದು ಸೂಚಿಸಿದರು.
ಈ ವೇಳೆ ತಹಶಿಲ್ದಾರ, ಶೃತಿ ಮಳ್ಳಪ್ಪಗೌಡ್ರ, ಎಸ್.ಎಸ್.ಬಿಚ್ಚಾಲಿ ಹಾಗೂ ಮುಂಡರಗಿ ಮಂಡಲದ ಬಿಜೆಪಿ ಅಧ್ಯಕ್ಷ ಹೇಮಗೀರೀಶ ಹಾವಿನಾಳ, ಲಿಂಗರಾಗೌಡ ಪಾಟೀಲ್, ಕವಿತಾ ಉಳ್ಳಾಗಡ್ಡಿ, ಕೊಟ್ರೇಶ ಅಂಗಡಿ, ನಾಗೇಶ ಹುಬ್ಬಳ್ಳಿ, ಕೊಪ್ಪಣ್ಣ ಕೊಪ್ಪಣ್ಣವರ, ಬಸವರಾಜ ಬಿಳಿಮಗ್ಗದ, ಮೈಲಾರ್ಪ ಕಲಕೇರಿ, ಶಿವನಗೌಡ ಗೌಡ್ರ, ಶಂಕರ ಉಳ್ಳಾಗಡ್ಡಿ, ಮಂಜುನಾಥ ಮುಧೋಳ, ಯಲ್ಲಪ್ಪ ಗಣಾಚಾರಿ, ಚಂದ್ರಾ ನಾಯಕ ಹಾಗೂ ಇತರರು ಇದ್ದರು.