ಅಂತರರಾಷ್ಟ್ರೀಯ

ಅಫ್ಘಾನಿಸ್ತಾನ: ಪ್ರವಾಹಕ್ಕೆ 39 ಮಂದಿ ಸಾವು, ಸಾವಿರಾರು ಮನೆಗಳು ನಾಶ

ಅಫ್ಘಾನಿಸ್ತಾನ: ಪ್ರವಾಹಕ್ಕೆ 39 ಮಂದಿ ಸಾವು, ಸಾವಿರಾರು ಮನೆಗಳು ನಾಶ

ಕಾಬೂಲ್: ಜುಲೈ 14: ಕಳೆದ ಒಂದು ವಾರದಲ್ಲಿ ಅಫ್ಘಾನಿಸ್ತಾನದಲ್ಲಿನ ಪ್ರವಾಹಕ್ಕೆ ಇದುವರೆಗೆ 39 ಜನರು ಸಾವನ್ನಪ್ಪಿದ್ದಾರೆ ಎಂದು ಖಲೀಜ್ ಟೈಮ್ಸ್ ಗುರುವಾರ ಈ ಮಾಹಿತಿ ನೀಡಿದೆ.

ಅಫ್ಘಾನಿಸ್ತಾನದ ಪೂರ್ವ, ದಕ್ಷಿಣ, ಆಗ್ನೇಯ ಮತ್ತು ಮಧ್ಯ ಪ್ರದೇಶಗಳಲ್ಲಿನ ಜಿಲ್ಲೆಗಳು ಭಾರೀ ಮಳೆಯಿಂದಾಗಿ ಅಸ್ತವ್ಯಸ್ತಗೊಂಡಿವೆ.

ವಿಶ್ವಸಂಸ್ಥೆಯ ಮಾನವೀಯ ವ್ಯವಹಾರಗಳ ಸಮನ್ವಯ ಕಚೇರಿ (OCHA) ಹೇಳಿಕೆಯಲ್ಲಿ, “ಜುಲೈ 5 ರಿಂದ ಹಠಾತ್ ಪ್ರವಾಹವು ಐದು ಪ್ರಾಂತ್ಯಗಳಾದ – ಉರುಜ್ಗನ್ (20), ಘಜ್ನಿ (6), ನುರಿಸ್ತಾನ್ (7), ಪಕ್ತ್ಯಾ (3) ಮತ್ತು ಝಬುಲ್ (3) ನಲ್ಲಿ 39 ಜನರನ್ನು ಬಲಿ ಪಡೆದಿದೆ ಎಂದು ಹೇಳಿದೆ. ಸಾವಿಗೀಡಾದವರ ಪೈಕಿ ಒಂಬತ್ತು ಮಕ್ಕಳು ಸೇರಿದ್ದಾರೆ ಎಂದು ಒಸಿಎಚ್ಎ ತಿಳಿಸಿದೆ.

ಭಾರೀ ಮಳೆ ಮತ್ತು ಪ್ರವಾಹದಿಂದಾಗಿ ಸುಮಾರು 2,900 ಮನೆಗಳು ಹಾನಿಗೊಳಗಾಗಿದ್ದು, ಜನರ ಜೀವನೋಪಾಯವು ಅಸ್ತವ್ಯಸ್ತಗೊಂಡಿದೆ. ರಸ್ತೆಗಳು ಮತ್ತು ಸೇತುವೆಗಳಂತಹ ಮೂಲಸೌಕರ್ಯಗಳು ಪ್ರವಾಹದ ಹೊಡೆದಕ್ಕೆ ಸಿಲುಕಿ ಹಾನಿಗೊಳಗಾಗಿವೆ.

ಅಫ್ಘಾನಿಸ್ತಾನದ ಪೂರ್ವ ಪ್ರದೇಶದಲ್ಲಿನ ಭಾರೀ ಮಳೆಯಿಂದಾಗಿ ನಾಲ್ಕು ಜಿಲ್ಲೆಗಳಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದ್ದು, ಸುಮಾರು 500 ಕುಟುಂಬಗಳ ಮೇಲೆ ಪರಿಣಾಮ ಬೀರಿದೆ. ನಂಗರ್‌ಹಾರ್‌ನಲ್ಲಿ 213 ಕುಟುಂಬಗಳು, ಲಗ್ಮನ್‌ನಲ್ಲಿ 200 ಕುಟುಂಬಗಳು, ಕುನಾರ್‌ನಲ್ಲಿ 26 ಕುಟುಂಬಗಳು ಮತ್ತು ನುರಿಸ್ತಾನ್‌ನಲ್ಲಿ 14 ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿ ತತ್ತರಿಸಿವೆ. ಒಂದು ತಿಂಗಳೊಳಗೆ ಪೂರ್ವ ಭಾಗವು ಹಠಾತ್ ಪ್ರವಾಹಕ್ಕೆ ತುತ್ತಾಗುತ್ತಿರುವುದು ಇದು ಮೂರನೇ ಬಾರಿಯಾಗಿದೆ. ದಕ್ಷಿಣದ ಮೂರು ಪ್ರಾಂತ್ಯಗಳಾದ ಕಂದಹಾರ್, ಉರುಜ್ಗಾನ್ ಮತ್ತು ಜಬುಲ್ ಭಾರೀ ಮಳೆಯಿಂದ ಪ್ರಭಾವಿತವಾಗಿವೆ ಎಂದು ಮೂಲಗಳು ಮಾಹಿತಿ ನೀಡಿವೆ.

ಸುದ್ದಿ ಓದಿ