ಜಮೀನಿನ ಶೆಡ್ಡನಲ್ಲಿ ಬೆಂಕಿ ಅವಘಡ: ಆಕಳು ಸಜೀವ ದಹನ
Fire accident in farm shed: Cows burnt alive
ಸಿಂದಗಿ 04: ತಾಲೂಕಿನ ಕೊಕಟನೂರ ಗ್ರಾಮದ ಸೋಮಲಿಂಗ ಅಗಸರ ಎಂಬುವವರ ಜಮೀನಿನ ಶೆಡ್ಡನಲ್ಲಿ 6 ಆಕಳು, ಮಶೀನ್, ಮೇವು, ಸೇರಿದಂತೆ ಅನೇಕ ವಸ್ತುಗಳು ಬೆಂಕಿಗಾಹುತಿಯಾಗಿವೆ.
ಅಗ್ನಿ ಅನಾಹುತದಲ್ಲಿ 4ಲಕ್ಷ ರೂ. ಮೌಲ್ಯದ ವಸ್ತುಗಳು ಹಾನಿಯಾಗಿವೆ. 4.70ಲಕ್ಷ ರೂ. ಮೌಲ್ಯದ ಹಸು ಹಾಗೂ ಕೆಲವು ವಸ್ತುಗಳ ರಕ್ಷಣೆ ಮಾಡಲಾಗಿದೆ. 1 ಆಕಳು ಸಜೀವ ದಹನವಾಗಿದೆ, ಇನ್ನೊಂದಕ್ಕೆ ತೀವ್ರ ಗಾಯವಾಗಿದೆ. ರಕ್ಷಣೆಗೆ ಮುಂದಾದ ಮಾಲೀಕ ಸೋಮಲಿಂಗ ಅಗಸರಗೆ ಬೆಂಕಿ ನಿಂದಿಸಲು ಪ್ರಯತ್ನಿಸಿದಾಗ ಸಣ್ಣಪುಟ್ಟ ಗಾಯಗಳಾಗಿವೆ. ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಬೆಂಕಿ ನಿಂದಿಸುವಲ್ಲಿ ಯಶಸ್ವಿಯಾಗಿ 4 ಆಕಳು ಹಾಗೂ ಮಾಲೀಕನ್ನು ರಕ್ಷಣೆ ಮಾಡಿದ್ದಾರೆ.
ಈ ವೇಳೆ ಎಫ್‌ಎಸ್‌ಒಎಂ.ಬಿ.ಪೂಜಾರಿ, ಸಿಬ್ಬಂದಿಗಳಾದ ಶೀಮಲಿಂಗಯ್ಯಮಠ, ರವಿ ನಾಯಕ, ಶ್ರೀಧರ ರತ್ನಪ್ಪಗೋಳ, ವಿಜಯಕುಮಾರ ಬಿರಾದಾರ, ಹನುಮಂತ ಕುಂಬಾರಸೇರಿದಂತೆ ಅನೇಕರಿದ್ದರು. ಇನ್ನೂ ಈ ಪ್ರಕರಣ ಸಿಂದಗಿಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ 