26ನೇ ಶೈಕ್ಷಣಿಕ ವರ್ಷ: ವಿದ್ಯಾರ್ಥಿಗಳಿಗೆ ಹೂವಿನ ಸ್ವಾಗತ ಹಾಗೂ ಕರಗಡಬು ಭೋಜನ

26ನೇ ಶೈಕ್ಷಣಿಕ ವರ್ಷ: ವಿದ್ಯಾರ್ಥಿಗಳಿಗೆ ಹೂವಿನ ಸ್ವಾಗತ ಹಾಗೂ ಕರಗಡಬು ಭೋಜನ 26th academic year: Floral welcome and Karagadubu dinner for students

ಲಕ್ಷ್ಮೇಶ್ವರ   02:  ಪ್ರಸ್ತುತ ವರ್ಷದ 26-27 ನೇ ಶಾಲಾ ಶೈಕ್ಷಣಿಕ ಪ್ರಾರಂಭೋತ್ಸವವು ರಾಜ್ಯಾದ್ಯಂತ 1-6-26- ರಂದು ಪ್ರಾರಂಭಗೊಂಡವು ಅದರಂತೆ ಪಟ್ಟಣದ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ ನಂ2ರಲ್ಲಿ ಶಾಲಾ ಪ್ರಾರಂಭೋತ್ಸವ ಶಾಲೆಯನ್ನು ತೊಳಲಿ ತೋರಣದಿಂದ ಶೃಂಗಾರ ಗೊಳಿಸಲಾಗಿತ್ತು ಪ್ರಾರಂಭೋತ್ಸವದ ದಿನದಂದು ಶಾಲೆಗೆ ಆಗಮಿಸಿದ ವಿದ್ಯಾರ್ಥಿಗಳನ್ನು ಶಾಲೆಯ ಪ್ರಧಾನ ಗುರುಮಾತೆ ಸೇರಿದಂತೆ ಎಲ್ಲಾ ಶಿಕ್ಷಕಿಯರು ವಿದ್ಯಾರ್ಥಿಗಳಿಗೆ ಹೂವು ಹಾಕಿ ಸ್ವಾಗತ ಕೋರುವ ಮೂಲಕ ಸಂಭ್ರಮದೊಂದಿಗೆ ಬರಮಾಡಿಕೊಂಡರು. ವಿದ್ಯಾರ್ಥಿಗಳೆಂದರೆ ಶಿಕ್ಷಕಿಯರಿಗೆ ಅದು ಎಷ್ಟು ಪ್ರೀತಿ ನೋಡಿ ಪ್ರಥಮ ದಿನದ ಊಟಕ್ಕೆ ಎಲ್ಲ ವಿದ್ಯಾರ್ಥಿಗಳಿಗೆ ಕರಗಡಬು ಊಟದ ವ್ಯವಸ್ಥೆ ಮಾಡುವುದರೊಂದಿಗೆ ತಾವೇ ವಿದ್ಯಾರ್ಥಿಗಳಿಗೆ ಕರಗಡಬು ನೀಡಿದರು. ವಿದ್ಯಾರ್ಥಿಗಳು ಸರದಿ ಸಾಲ ಮೂಲಕ ಬಂದು ಕರಗಡಬು ಊಟವನ್ನು ಸಂಭ್ರಮಿಸಿದರು. ಈ ಸಮಯದಲ್ಲಿ ಶಾಲೆಯ ಪ್ರಧಾನ ಗುರುಮಾತೆ ಎಸ್ ಎಚ್ ಉಮಚಗಿ ಎಲ್ ಎಂ ಗುಂಡಪ್ಪನವರ ಎಂ ಡಿ ಸೊರಟೂರು ಗೀತಾ ಹಳ್ಯಾಳ ಎಸ್ ಎಸ್ ಜಿರಕಳ್ಳಿ ಸೇರಿದಂತೆ ಶಾಲೆಯ ಎಲ್ಲಾ ಶಿಕ್ಷಕಿಯರು ಶಾಲಾ ಪ್ರಾರಂಭೋತ್ಸವದಲ್ಲಿ ಸಂಭ್ರಮದೊಂದಿಗೆ ಪಾಲ್ಗೊಂಡಿದ್ದರು.