ಜಮಖಂಡಿ

ಶಾಸಕ ಬಿ.ಜೆ. ಜಮೀರ ಅಹ್ಮದಖಾನಗೆ ಸನ್ಮಾನ ಸಮಾರಂಭ

ಶಾಸಕ ಬಿ.ಜೆ. ಜಮೀರ ಅಹ್ಮದಖಾನಗೆ ಸನ್ಮಾನ ಸಮಾರಂಭ

ಜಮಖಂಡಿ 18: ನ.19 ರಂದು ಮಾಜಿ ಸಚಿವ, ಚಾಮರಾಜಪೇಟದ ಶಾಸಕ ಬಿ.ಜೆ. ಜಮೀರ ಅಹ್ಮದಖಾನ ಆಗಮಿಸಲಿದ್ದು. ನಗರದ ಜನತೆ ಸನ್ಮಾನ ಸಮಾರಂಭ ಹಾಗೂ ಕೃತಜ್ಞತೆ ತಿಳಿಸಲಿದ್ದಾರೆ ಎಂದು ಶಾಸಕ ಆನಂದ ನ್ಯಾಮಗೌಡ ಹೇಳಿದರು.

ನಗರದ ರಮಾ ನಿವಾಸದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2018ರ ಉಪಚುಣಾವಣೆ ಗೆಲುವಿಗಾಗಿ ಸತತ ಪ್ರಯತ್ನ ಮಾಡಿದ್ದರಿಂದ ಬಹು ಅಂತರಗಳ ಮತಗಳನ್ನು ಪಡೆದುಕೊಂಡು ಗೆಲುವನ್ನು ಸಾಧಿಸಲಾಯಿತು. ಅವರಿಗೆ ಕೃತಜ್ಞತೆಯನ್ನು ಸಲ್ಲಿಸಬೇಕೆಂದು ಪಕ್ಷದ ಕಾರ್ಯಕರ್ತರು ಆಲೋಚನೆಯನ್ನು ಮಾಡಿದ ಸಂದರ್ಭದಲ್ಲಿ ಕರೋನಾ ಅಡ್ಡಿ ಆಯಿತು. 

ಶಾಸಕ ಬಿ.ಜೆ. ಜಮೀರ ಅಹ್ಮದಖಾನ  ಅವರು ನ.19 ರಂದು ಆಗಮಿಸಲಿದ್ದು. ಕಟ್ಟೆ ಕೆರೆಯಿಂದ ಬೈಕ್ ರ್ಯಾಲಿ ಮೂಲಕ ಪ್ರಮುಖ ರಸ್ತೆಯಲ್ಲಿ ಸಂಚರಿಸಿ, ನಗರದ ಮೈನಾರಟಿ ಹಾಲ್ನಲ್ಲಿ ಸುಮಾರು ಹತ್ತು ಸಾವಿರಕ್ಕೂ ಅಧಿಕ ಪಕ್ಷದ ಕಾರ್ಯಕರ್ತರು ಸೇರುವ ಸಾಧ್ಯತೆ ಇದ್ದು. ಪಕ್ಷದ ಹಿರಿಯರು, ಗಣ್ಯಮಾನ್ಯರು ಸಹ ಸನ್ಮಾನ ಸಮಾರಭದಲ್ಲಿ ಭಾಗವಹಿಸಲಿದ್ದಾರೆ. ಶಾಸಕ ಬಿ,ಜೆ,ಜಮೀರ ಅಹ್ಮದಖಾನ  ಅವರು ಮತ್ತೇ ಬರುವ ಚುನಾವಣೆಯಲ್ಲಿ ಪ್ರಚಾರಕ್ಕೂ ಸಹ ಬರಲಿದ್ದಾರೆ ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಎಚ್ ಎಮ್ ನವಾಜ, ಕನ್ನಡ ನಜೀರ, ನಜೀರ ಕಂಗನೋಳ್ಳಿ, ಸಮೀರ ಕಂಗನೋಳ್ಳಿ, ವರ್ಧಮಾನ ನ್ಯಾಮಗೌಡ, ಕಲ್ಲಪ್ಪ ಗಿರಡಿ, ರಫೀಕ ಬಾರಿಗಡ್ಡಿ, ಶಶಿಕಾಂತ ದೊಡ್ಡಮನಿ ಸೇರಿದಂತೆ ಅನೇಕರು ಇದ್ದರು. 

ಸುದ್ದಿ ಓದಿ