ಜನ ಪ್ರತಿನಿದಿಗಳ ಇಚ್ಚಾಶಕ್ತಿ ಕೊರತೆ ನೀರಿನಿಂದ ವಂಚಿತರಾದ ರೈತರು : ಅರವಿಂದ ಕುಲಕರ್ಣಿ ಆಕ್ರೋಶ

  ಜನ ಪ್ರತಿನಿದಿಗಳ ಇಚ್ಚಾಶಕ್ತಿ ಕೊರತೆ ನೀರಿನಿಂದ ವಂಚಿತರಾದ ರೈತರು : ಅರವಿಂದ ಕುಲಕರ್ಣಿ ಆಕ್ರೋಶ Farmers deprived of water due to lack of willpower of people's representatives: Arvind Kulkarni outr

ಲೋಕದರ್ಶನ ವರದಿ 

ವಿಜಯಪುರ  01: ವಿಜಯಪುರ ಹಾಗೂ ಬಾಗಲಕೋಟ ಅವಳಿ ಜಿಲ್ಲೆಯ ಜನ ಪ್ರತಿನಿಧಿಗಳ ಇಚ್ಚಾಶಕ್ತಿ ಕೊರತೆಯಿಂದ ಅವಳಿ ಜಿಲ್ಲೆಯ ರೈತರನ್ನು ನೀರಿನಿಂದ ವಂಚಿತರನ್ನಾಗಿ ಮಾಡಿದ್ದಾರೆಂದು ಜನಪ್ರತಿನಿಧಿಗಳ ವಿರುದ್ಧ  ರೈತ ಮುಖಂಡ ಅರವಿಂದ ಕುಲಕರ್ಣಿ ಆಕ್ರೋಶ ಹೊರ ಹಾಕಿದ್ದಾರೆ. ನ್ಯಾ  ಮೂರ್ತಿ ಬ್ರಿಜೇಶಕುಮಾರ ನೇತೃತ್ವದ 2ನೇ ನ್ಯಾಯಾಧೀಕರಣ ತೀರ​‍್ು ನೀಡಿ 13 ವರ್ಷಕ್ಕೆ ಪಾದಾರೆ​‍್ಣ ಮಾಡಿದರೂ ಇಲ್ಲಿಯವರೆಗೂ ಜಲಾಶಯದ ನೀರಿನ ಮಟ್ಟ ಹೆಚ್ಚಿಸಲು ಹಾಗೂ ಕೇಂದ್ರ ಸರಕಾರ ಅಧಿಸೂಚನೆ ಹೊರಡಿಸಲು ಮಿನಮೇಷ ಮಾಡುತ್ತಿದೆ. ಈ ಕುರಿತು ಅವಳಿ ಜಿಲ್ಲೆಯ ಜನ ಪ್ರತಿನಿದಿಗಳು ಕೇಂದ್ರ ಸರಕಾರದ ಮೇಲೆ ಒತ್ತಡ ತರದೇ ಇರುವುದು ಇವರ ಇಚ್ಚಾಶಕ್ತಿ ಕೊರತೆ ಎದ್ದು ಕಾಣುತ್ತಿದೆ ಎಂದು ಹರಿಹಾಯ್ದಿದ್ದಾರೆ.  

ವಿಚಾರ ಸಂರ್ಕೀಣದ ಕಾರ್ಯಕ್ರಮದ ನಿಮಿತ್ಯವಾಗಿ ಭಾನುವಾರ ಬಬಲೇಶ್ವರ ತಾಲೂಕಿನ ಆದಿಶಕ್ತಿ ದೇವಸ್ಥಾನದಲ್ಲಿ ಹಮ್ಮಿಕೊಂಡ ಪ್ರಚಾರ ಕಾರ್ಯ ಸಂದರ್ಭದಲ್ಲಿ ಮಾತನಾಡಿದ ಅವರು, ನೀರು ಹಂಚಿಕೆಯಲ್ಲಿ ಜಿಲ್ಲೆಯ ರೈತರಿಗೆ ಆದ ವಂಚನೆ ಕುರಿತು ಹಾಗೂ ನ್ಯಾಯಾಧೀಕರಣದ ತೀರ​‍್ಿನನ್ವಯ ಜಲಾಶಯದ ನೀರಿನ ಮಟ್ಟವನ್ನು ಹೆಚ್ಚಿಸಲು ವಿಚಾರ ಸಂಕೀರಣ ಕಾರ್ಯಕ್ರಮವನ್ನು ವಿಜಯಪುರ ನಗರದ ಕಂದಗಲ್ ಹಣಮಂತ್ರಾಯ ರಂಗಮಂದಿರದಲ್ಲಿ ದಿನಾಂಕ : 08/06/2026 ರಂದು ಸೋಮವಾರ ಬೆಳಿಗ್ಗೆ 10.30 ಕ್ಕೆ ಚಿಂತನ ಮಂಥನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು ಈ ಕಾರ್ಯಕ್ರಮಕ್ಕೆ ಇಂಗಳೇಶ್ವರದ ಶ್ರೀ ಸಿದ್ದಲಿಂಗ ಸ್ವಾಮಿಗಳು, ಹುಣಶ್ಯಾಳದ ಶ್ರೀ ಸಂಗನಬಸವ ಸ್ವಾಮಿಗಳು, ಸಾನಿಧ್ಯವಹಿಸುವರು ಡಾಽ ಕೃಷ್ಣಾ ಕೋಲ್ಹಾರ ಕುಲಕರ್ಣಿ, ಡಾಽಽ ರಾಜೇಂದ್ರ ಪೋದ್ದಾರ, ನೀರಾವರಿ ಹೋರಾಟಗಾರ ಪಂಚಪ್ಪ ಕಲಬುರ್ಗಿ ನೀರಾವರಿ ಕುರಿತು ವಿಚಾರ ಸಂಕೀರ್ಣ ನಡೆಸಿಕೊಡಲಿದ್ದಾರೆ.  

ಮುಖ್ಯ ಅಥಿತಿಗಳಾಗಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನಿವೃತ್ತ ನ್ಯಾಯಾಧಿಶರಾದ ಬಿ.ಸಿ.ಬಿರಾದಾರ ಹಾಗೂ ಚಾಣಕ್ಯ ಕರಿಯರ ಆಕಾಡಮಿಯ ಸಂಸ್ಥಾಪಕ ಅಧ್ಯಕ್ಷರಾದ ನಿಂಗನಗೌಡ ಬಿರಾದಾರ ಮುಖ್ಯ ಅಥಿತಿಗಳಾಗಿ ಭಾಗವಹಿಸಲಿದ್ದಾರೆಂದು ಅರವಿಂದ ಕುಲಕರ್ಣಿ ಸಭೆಯಲ್ಲಿ ತಿಳಿಸಿದ್ದಾರೆ.  ಪ್ರಚಾರ ಸಭೆಯಲ್ಲಿ ಸಿದ್ದಪ್ಪ ಕೋಟ್ಯಾಳ, ಗುರು ಕೋಟ್ಯಾಳ, ಮಲ್ಲಿಕಾರ್ಜುನ ಕೊಕಟನೂರ, ಗುರನಗೌಡ ಬಿರಾದಾರ, ಬಸವರಾಜ ಜಂಗಮಶೆಟ್ಟಿ, ಪರಮಾನಂದ ಬಸ್ತವಾಡ, ಅಶೋಕ ತೊದಲಬಾಗಿ, ಚಾಂದಸಾಬ ಗೋಠೆದ, ಅರ್ಜುನಪ್ಪ ಹಾವಗೊಂಡ ಮುಂತಾದವರು ಇದ್ದರು.