ಕರ್ನಾಟಕ ಪರವಾದ ಗೊತ್ತುವಳಿ ಅಂಗೀಕರಿಸರಿಸುವಂತೆ ಪ್ರಾದೇಶಿಕ ಆಯುಕ್ತರಿಗೆ ಮನವಿ

ಕರ್ನಾಟಕ ಪರವಾದ ಗೊತ್ತುವಳಿ ಅಂಗೀಕರಿಸರಿಸುವಂತೆ ಪ್ರಾದೇಶಿಕ ಆಯುಕ್ತರಿಗೆ ಮನವಿ Request to the Regional Commissioner to pass a resolution in favor of Karnataka

 ಬೆಳಗಾವಿ 03: ಇಲ್ಲಿನ ಮಹಾನಗರ ಪಾಲಿಕೆಯಲ್ಲಿ ಕರ್ನಾಟಕ ಪರವಾದ ಗೊತ್ತುವಳಿ ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ. ಗಡಿವಿವಾದಕ್ಕೆ ಮಹಾಜನ ಆಯೋಗದ ವರದಿಯೇ ಅಂತಿಮ ಎಂಬ ಗೊತ್ತುವಳಿ ಅಂಗೀಕರಿಸಬೇಕೆಂದು ಆಗ್ರಹಿಸಿ ಪ್ರಾದೇಶಿ ಆಯುಕ್ತರ ಮೂಲಕ ರಾಜ್ಯ ಸರ್ಕಾರಕ್ಕೆ ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ಮನವಿ ಸಲ್ಲಿಸಿದರು.ಬುಧವಾರ ಬೆಳಗಾವಿ ನಗರದ ಪ್ರಾದೇಶಿಕ ಆಯುಕ್ತರ ಕಛೇರಿಕೆ ವಿವಿಧ ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ತೆರಳಿ, ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ ಎಂದು ಘೋಷಿಸಿಸಬೇಕೆಂದು ಆಗ್ರಹಿಸಿದರು.

ವಿವಿಧ ಕನ್ನಡಪರ ಸಂಘಟನೆಗಳ 20 ಕ್ಕೂ ಹೆಚ್ಚು ಸಂಘಟನೆಗಳು ಕಳೆದ ಮಾರ್ಚ 26 ’ರಿಂದ ಹೋರಾಟ ನಡೆಸಿದವು. 2005 ರ ಅಕ್ಟೋಬರ್ 27 ರಂದು ಬೆಳಗಾವಿ ಪಾಲಿಕೆಯಲ್ಲಿ ಮಹಾರಾಷ್ಟ್ರ, ಪರವಾಗಿ ಗೊತ್ತುವಳಿ ಸ್ವೀಕರಿಸಲಾಗಿದೆ. ಬೆಳಗಾವಿಯನ್ನು ಮಹಾರಾಷ್ಟ್ರಕ್ಕೆ ಸೇರಿಸುವ ಮೂಲಕ ಗಡಿವಿವಾದ ಬಗೆಹರಿಸಬೇಕೆಂದು ಒತ್ತಾಯಿಸುವ ಗೊತ್ತುವಳಿಯನ್ನು ಅಂಗೀಕರಿಸಲಾಗಿದೆ. 2004 ರಿಂದ ಸುಪ್ರೀಂ ಕೋರ್ಟಿನಲ್ಲಿ ಸ್ವೀಕಾರವಾಗದೆ ಹೊಸ್ತಿಲಲ್ಲಿರುವ ಗಡಿವಿವಾದ ಪ್ರಕರಣದಲ್ಲಿ ಮಹಾರಾಷ್ಟ್ರ ಸರಕಾರವು ಬೆಳಗಾವಿ ಪಾಲಿಕೆಯ ಗೊತ್ತುವಳಿಯನ್ನು ಪೂರಕ ದಾಖಲೆಯನ್ನಾಗಿ ಬಳಸುತ್ತಿರುವುದು ಕನ್ನಡಿಗರಿಗೆ ಕೆಂಗಣ್ಣಿಗೆ ಗುರಿಯಾಗಿದೆ. ಇದೀಗ ಕರ್ನಾಟಕ ಪರವಾದ ಗೊತ್ತುವಳಿ ಸ್ವೀಕರಿಸಬೇಕೆಂದು ಕನ್ನಡ ಸಂಘಟನೆಗಳು ಹೋರಾಟ ನಡೆಸಿದಕ್ಕೆ ಪ್ರತಿಫಲ ಸಿಗುವ ನೀರೀಕ್ಷಿವೆ.

ಆದರೆ ಈ ವಿಚಾರವಾಗಿ ತಿಂಗಳಿಂದ ಹೋರಾಟ ನಡೆಸಿದ್ರು ಸಹ ಪಾಲಿಕೆಯಲ್ಲಿ 35 ಸದಸ್ಯರ ಬಹುಮತ ಹೊಂದಿರುವ ಬಿಜೆಪಿ ನಾಯಕರು ಗೊತ್ತುವಳಿ ಸ್ವೀಕರಿಸಿಲ್ಲ ಇದರಿಂದಾಗಿ ಪಾಲಿಕೆಯ ನಡೆಯಿದ್ದ ಕನ್ನಡಿಗರಿಗೆ ನಿರಾಸೆಯನುಂಟು ಮಾಡುತ್ತಿರುವುದಲ್ಲದೆ. ಕನ್ನಡ ನಾಡು, ನುಡಿಗೆ ಬಗೆದ ದ್ರೋಹವಾಗಿದೆ. ಬೆಳಗಾವಿ ಗಡಿ ವಿವಾದವನ್ನು ಪ್ರಾದೇಶಿಕ ಆಯಕ್ತರು ಗಂಭೀರವಾಗಿ ತೆಗೆದುಕೊಳ್ಳಬೇಕು, ಹಾಗೂ ಪಾಲಿಕೆಯ ಈ ನಡವಳಿಕೆಯ ಬಗ್ಗೆ  ರಾಜ್ಯ ಸರಕಾರದ ಗಮನ ಸೆಳೆಯಬೇಕೆಂದು ಕನ್ನಡಪರ ಸಂಘಟನೆಗಳು ಆಗ್ರಹಿಸಿವೆ.  ಈ ವೇಳೆ ಶರೀಫ್ ಇ ಸನದಿ, ನಾಗೇಶ್ ಕೊಪ್ಪದ, ಸಲೀಮ್ ಕಾಲೇಖಾನ್, ಸಲಮಾನ ಮಕಂದಾರ, ಮಹಮ್ಮದ್ ಹನೀಫ್ ಸೇರಿದಂತೆ ಹಲವು ಕನ್ನಡಪರ ಸಂಘಟನೆಯ ಕಾರ್ಯಕರ್ತರು ಪಾಲ್ಗೊಂಡಿದ್ದರು.