ಹೆಚ್ಚಿನ ದರಕ್ಕೆ ಗೊಬ್ಬರ ಮಾರಾಟ ಆರೋಪ- ಕರವೇಯಿಂದ ಪ್ರತಿಭಟನೆ

ಹೆಚ್ಚಿನ ದರಕ್ಕೆ ಗೊಬ್ಬರ ಮಾರಾಟ ಆರೋಪ- ಕರವೇಯಿಂದ ಪ್ರತಿಭಟನೆ  Protest by Karave over allegations of selling fertilizer at high prices

ಲಕ್ಷ್ಮೇಶ್ವರ :  ಇಡೀ ನಾಡಿಗೆ ಅನ್ನ ನೀಡುವ ಅನ್ನದಾತ ಸಂಕಷ್ಟದಲ್ಲಿ ಇರುವಾಗಲೇ ಗೊಬ್ಬರದ ಅಂಗಡಿ ಮಾಲಕರು ಎಂಆರಿ​‍್ಪ ದರಕ್ಕಿತ ಹೆಚ್ಚಿನ ದರಕ್ಕೆ ರಸಗೊಬ್ಬರ ಮಾರಾಟ ಮಾಡುತ್ತಿದ್ದಾರೆ ಹಾಗೂ ಅದರೊಂದಿಗೆ ರೈತರಿಗೆ ಬೇಡ ಎಂದರು ಲಿಂಕ್ ತೆಗೆದುಕೊಳ್ಳಬೇಕು ಇಲ್ಲದಿದ್ದರೆ ಗೊಬ್ಬರ ಕೊಡುವುದಿಲ್ಲ ಎಂದು ರೈತರಿಗೆ ತೊಂದರೆಯನ್ನು ಕೊಡುತ್ತಿದ್ದಾರೆ ಎಂದು ಆರೋಪಿಸಿ ಕರ್ನಾಟಕ ರಕ್ಷಣಾ ವೇದಿಕೆ ಎನ್ ನಾರಾಯಣಗೌಡ್ರ ಬಣ್ಣದ ಕಾರ್ಯಕರ್ತರು ಬುಧವಾರ ಲಕ್ಷ್ಮೇಶ್ವರ ಪಟ್ಟಣದ ಪಾದಗಟ್ಟಿ ಹತ್ತಿರ ಇರುವ ಗಾಂಧೀಜಿ ಸರ್ಕಲ್ ಮುಂದೆ ಬೃಹತ್ ಪ್ರತಿಭಟನೆ ನಡೆಸಿ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು.

  ಈ ಸಮಯದಲ್ಲಿ ಮಾತನಾಡಿದ ಜಿಲ್ಲಾ ಪ್ರಧಾನ ಕಾರ್ಯದರ್ಶಿ , ಬಸವರಾಜಹೋಗೆಸೊಪ್ಪಿನ ತಾಲೂಕ ಅಧ್ಯಕ್ಷ ಲೋಕೇಶ್ ಸುತಾರ್ ಅವರು ರೈತರು ಸಾಕಷ್ಟು ತೊಂದರೆ ಅನುಭವಿಸಿ ತಮ್ಮ ವ್ಯವಸಾಯವನ್ನು ಮಾಡುತ್ತಾರೆ ಅಂತ ರೈತರಿಗೆ ಎಂ ಆರ್ ಪೀ ದರಕ್ಕಿಂತ ಹೆಚ್ಚಿನ ದರದಲ್ಲಿ ರಸಗೊಬ್ಬರದ ಅಂಗಡಿ ಮಾರಾಟಗಾರರು ಮಾರಾಟ ಮಾಡುತ್ತಿದ್ದಾರೆ ಇವರು ಯಾವುದೇ ದರ ಬೋರ್ಡ್‌ ಹಾಕಿಲ್ಲ ಹಾಗೂ ಗೊಬ್ಬರದ ಜೊತೆಗೆ ಲಿಂಕ್ ಖರೀದಿಸಬೇಕು ಎಂದು ರೈತರನ್ನು ಸುಲಿಗೆ ಮಾಡುತ್ತಿದ್ದಾರೆ ಅದಕ್ಕೆ ಸಂಬಂಧಿಸಿದಂತೆ ಕೃಷಿ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು ರೈತರಿಗೆ ಆಗುತ್ತಿರುವ ಅನ್ಯಾಯವನ್ನು ಸರಿಪಡಿಸಬೇಕು ಮತ್ತು ಸಮರ​‍್ಕವಾಗಿ ಎಲ್ಲ ರೈತರಿಗೂ ಸರ್ಕಾರದ ದರದಲ್ಲಿ ಗೊಬ್ಬರ ಪೂರೈಸಲು ಕ್ರಮ ಕೈಗೊಳ್ಳಬೇಕು.

ಇಲ್ಲದಿದ್ದರೆ ಇನ್ನೂ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು ನಂತರ ಉಪ ತಹಶೀಲ್ದಾರ್ ಮಂಜುನಾಥ ಅಮಾಸಿ ಅವರ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು  ಈ ಸಮಯದಲ್ಲಿ ರೈತ ಸಂಪರ್ಕ ಇಲಾಖೆಯ ಅಧಿಕಾರಿ ಚಂದ್ರಶೇಖರ್ ನರಸಮ್ಮನವರ ಸಂಘಟನೆಯ ಮುಖಂಡರಾದ ಪ್ರವೀಣ್ ಗಾಣಿಗರ ಗಂಗಾಧರ ಕೊಂಚಿಗೇರಿಮಠ ಅರುಣ ಮೇಕ್ಕಿ ಬಸವರಾಜ ಮಲ್ಲೂರ ಚನ್ನಬಸಯ್ಯ ಗಡ್ಡದೇವರಮಠ ಸಾವಿತ್ರಿ ಅತ್ತಿಗೇರಿ ಕೆಂಚವ್ವ ಶೆರಶೂರಿ ಹುಲಿಗೆಮ್ಮ ಮೆವುಂಡಿ ಜಯಮ್ಮ ತುಪ್ಪದ ಲಕ್ಷ್ಮವ್ವ ಗದ್ದಿ ಲಕ್ಷ್ಮವ್ವ ಕೆರೂರ ಲಕ್ಷ್ಮವ್ವ ಒಗ್ಗರ ಮಾಯವ್ವ ಮಲ್ಲಿಗವಾಡ ಸೇರಿದಂತೆ ಇನ್ನು ಅನೇಕ ಸಂಘಟನೆಯ ಮುಖಂಡರು ರೈತ ಮುಖಂಡರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು